Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ಡ್ಯಾನ್ಸಿಂಗ್ ಶೋ ಜೀವನದ ಮರೆಯಲಾಗದ ಅವಕಾಶ – ಐಶ್ವರ್ಯ ಶಿಂಧೋಗಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ಫಿನಾಲೆಗೆ ಬಂದು ತಲುಪಿದೆ. ಸೆಲೆಬ್ರಿಟಿ ಸ್ಪರ್ಧಿ ಐಶ್ವರ್ಯ ಶಿಂದೋಗಿ ಈ ಶೋನ ಯಶಸ್ವಿ ಪಯಣದ ನೆನಪುಗಳ ಬಗ್ಗೆ ಇನ್ಸ್ಟಾ ಗ್ರಾಂ ನಲ್ಲಿ ಕೃತಜ್ಞತೆಯ ಪತ್ರವನ್ನು ಬರೆದುಕೊಂಡಿದ್ದಾರೆ.

ತಮ್ಮ ಸುದೀರ್ಘ ಪೋಸ್ಟ್ ನಲ್ಲಿ ಈ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. “ಡ್ಯಾನ್ಸಿಂಗ್ ಚಾಂಪಿಯನ್ ಶೋ ನನಗೆ ನನ್ನ ಸ್ವಂತ ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅನ್ವೇಷಿಸಲು ಸಹಕಾರಿಯಾಗಿದೆ. . ಮುಖ್ಯವಾಗಿ ನಾನು ಬೇರೆ ರೀತಿಯಲ್ಲಿ ಪ್ರಯತ್ನಿಸಲು ಎಂದಿಗೂ ಯೋಚಿಸದ ಕೆಲಸಗಳನ್ನು ಮಾಡಲು ದಾರಿ ಮಾಡಿಕೊಟ್ಟ ಪಯಣವಾಗಿದೆ‌” ಎಂದು ಹೇಳಿದ್ದಾರೆ.

“ನಾನು ಬಾಲ್ಯದಿಂದಲೂ ನಿಜವಾಗಿ ಪ್ರೀತಿಸುತ್ತಿದ್ದ ಕೆಲಸವನ್ನು ನಾನು ಮಾಡುವಂತೆ ಮಾಡಿತು‌. ನೃತ್ಯ ಎಂದರೆ ನನಗೆ ಮೊದಲಿನಿಂದಲೂ ಇಷ್ಟ. ಆದರೆ ನೃತ್ಯವನ್ನು ಗಂಭೀರವಾಗಿ ಕಲಿಯಲು ಆಗಲಿಲ್ಲ. ಪ್ರತಿ ಪಯಣವೂ ಹೇಗೆ ವಿವಿಧ ಪಾತ್ರಗಳನ್ನು ಹೊಂದಿದೆಯೋ ಅಂತಹ ಪಾತ್ರಗಳು ತಮ್ಮದೇ ಆದ ಪರಿಣಿತಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸದೇ ಇದ್ದರೆ ಈ ಪಯಣ ಏನೂ ಅಲ್ಲ” ಎಂದು ತಮ್ಮ ಡ್ಯಾನ್ಸಿಂಗ್ ಪಯಣದ ಬಗ್ಗೆ ಬರೆದುಕೊಂಡಿದ್ದಾರೆ ಐಶ್ವರ್ಯ ಶಿಂಧೋಗಿ.

“ಡ್ಯಾನ್ಸಿಂಗ್ ಚಾಂಪಿಯನ್ ಶೋ ನ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ನನ್ನನ್ನು ಗುರುತಿಸಿದ್ದಕ್ಕೆ ಹಾಗೂ ಜೀವಮಾನದಲ್ಲಿ ಮರೆಯಲಾಗದ ಈ ಅವಕಾಶ ಕೊಟ್ಟಿರುವುದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದ ಹೇಳುತ್ತೇನೆ”ಎಂದಿದ್ದಾರೆ.

Related posts

‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ

kartik

ಉಪ್ಪಿ ಮಗಳ ಬೋಲ್ಡ್ ಫೋಟೋ ನೋಡಿ ದಂಗಾದ ಫ್ಯಾನ್ಸ್ ..

Nikita Agrawal

ಮಗಳ ನಿರ್ಮಾಣದಲ್ಲಿ ನಟಿಸಲಿದ್ದಾರೆ ಶಿವಣ್ಣ

Nikita Agrawal

Leave a Comment

Share via
Copy link
Powered by Social Snap