Karnataka Bhagya
Blogಕಲೆ/ಸಾಹಿತ್ಯ

ಕನ್ನಡದ ಜೊತೆ ಪರಭಾಷಾ ಕಿರುತೆರೆಯಲ್ಲಿಯೂ ಬ್ಯುಸಿ ಚಂದನಾ

ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದೆ. ಧಾರಾವಾಹಿ ಪ್ರಸಾರವಾದ ವಾರದಿಂದಲೂ
ಟಿ ಆರ್ ಪಿ ಯಲ್ಲಿ ಸಕತ್ ಸದ್ದು ಮಾಡುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ಪಾತ್ರವರ್ಗದ ಮೂಲಕವೂ ವೀಕ್ಷಕರ ಗಮನ ಸೆಳೆದಿರುವುದು ನಿಜ.‌

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕ ಕಂಠಿಯ ಸೋದರಮಾವನ ಮಗಳು ಪೂರ್ವಿಯಾಗಿ ಅಭಿನಯಿಸುತ್ತಿರುವ ಚಂದನಾ ಮಹಾಲಿಂಗಯ್ಯ ಅವರಿಗೆ ಕಿರುತೆರೆ ಹೊಸದೇನಲ್ಲ. ಖಳನಾಯಕಿಯಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟ ಚಂದನಾ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದ ಚೆಲುವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾವಲ್ಲಭ ಧಾರಾವಾಹಿಯಲ್ಲಿ ಖಳನಾಯಕಿ ಅಂಕಿತಾ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಚಂದನಾ ಎಳವೆಯಿಂದಲೂ ಡ್ಯಾನ್ಸ್, ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು.

ಇಂಜಿನಿಯರಿಂಗ್ ಪದವಿ ಪಡೆದಿರುವ ಚಂದನಾ ಬದುಕು ರೂಪಿಸಿಕೊಂಡಿದ್ದು ನಟನಾ ಜಗತ್ತಿನಲ್ಲಿ. ನಟಿಯಾಗಬೇಕು ಎಂಬ ಕನಸು ಕಂಡಿದ್ದ ಚಂದನಾ ನಾಗರಾಜ ಕೋಟೆಯವರ “ಬಣ್ಣ” ನಟನಾ ಶಾಲೆಗೆ ಸೇರಿ ಆರು ತಿಂಗಳುಗಳ ಕಾಲ ತರಬೇತಿ ಪಡೆದರು. ಮುಂದೆ ಕಿರುತೆರೆಯತ್ತ ಮುಖ ಮಾಡಿದ ಚಂದನಾ ಸಣ್ಣ ಪಾತ್ರದ ಮೂಲಕ ನಟನಾ ಪಯಣ ಶುರು ಮಾಡಿದರು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಕನ್ನಿಕೆ ಎನ್ನುವ ಸೂಪರ್ ನ್ಯಾಚುರಲ್ ಧಾರಾವಾಹಿಯಲ್ಲಿ ಇಂಚರಾ ಆಗಿ ನಟಿಸಿದ್ದ ಚಂದನಾ ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾವಲ್ಲಭ ಧಾರಾವಾಹಿಯಲ್ಲಿ ವಿಲನ್ ಅಂಕಿತಾ ಪಾತ್ರಕ್ಕೆ ಜೀವ ತುಂಬಿದರು.

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೈದೇಹಿ ಪರಿಣಯಂ ಧಾರಾವಾಹಿಯಲ್ಲಿ ಸಿಯಾ ಆಗಿ ಅಭಿನಯಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮಿಂಚಿರುವ ಚಂದನಾ ಇದೀಗ ಪೂರ್ವಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

Related posts

ಇಪ್ಪತ್ತು ವರ್ಷಗಳಲ್ಲಿ ಕಲಿಯಲಾಗದ್ದನ್ನು ಎರಡು ವರ್ಷದಲ್ಲಿ ಕಲಿತೆ – ಸಂಯುಕ್ತಾ ಹೊರನಾಡು

Nikita Agrawal

ಟಾಲಿವುಡ್ ಸ್ಟಾರ್ ನಟನಿಗೂ ಕೋವಿಡ್ ಸೋಂಕು

Nikita Agrawal

ಉಪ್ಪಿ ಅಣ್ಣನ ಮಗನಿಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಡಿಮ್ಯಾಂಡ್

Nikita Agrawal

Leave a Comment

Share via
Copy link
Powered by Social Snap