ಬಾಲಿವುಡ್ ನಟಿ ಸೋನಂ ಕಪೂರ್ ತಾಯಿಯಾಗುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಮುದ್ದು ಅತಿಥಿ ಬರುತ್ತಿರುವ ಸಂತಸದ ವಿಚಾರವನ್ನು ಆನಂದ್ ಅಹುಜಾ ಹಾಗೂ ಸೋನಂ ದಂಪತಿ ಇತ್ತೀಚೆಗಷ್ಟೇ ಹಂಚಿಕೊಂಡಿದ್ದು ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ.
“ನಾಲ್ಕು ಕೈಗಳು, ನಿನ್ನನ್ನು ನಾವು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು.. ಈ ಎರಡು ಹೃದಯಗಳು ಸದಾ ನಿನಗಾಗಿ ಮಿಡಿಯುತ್ತದೆ. ಒಂದು ಕುಟುಂಬ ನಿನಗೆ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತದೆ. ಒಟ್ಟಾರೆಯಾಗಿ ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ತಮ್ಮ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಸೋನಂ ಕಪೂರ್ ಮಗು ಶರತ್ಕಾಲದಲ್ಲಿ ಜನಿಸಲಿದೆ ಎಂದು ತಿಳಿಸಿದ್ದು ಕಪೂರ್ ಕುಟುಂಬದ ಮೂಲಗಳು ಹೇಳುವಂತೆ ಸೋನಂ ಈಗ ನಾಲ್ಕು ತಿಂಗಳ ಗರ್ಭಿಣಿ. ಬರುವ ಆಗಸ್ಟ್ ನಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ.
ಸೋನಂ ತಂದೆ ತಾಯಿ ಅನಿಲ್ ಕಪೂರ್ ಹಾಗೂ ಸುನೀತಾ ಕಪೂರ್ ಅಜ್ಜ ಅಜ್ಜಿ ಆಗುತ್ತಿರುವ ಸಂತಸವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮೂರು ವರ್ಷಗಳ ಡೇಟಿಂಗ್ ಬಳಿಕ 2018ರಲ್ಲಿ ಆನಂದ್ ಅಹುಜಾ ಅವರನ್ನು ವರಿಸಿದ್ದ ಸೋನಂ ಕಪೂರ್ ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸಿದ್ದರು.