Karnataka Bhagya
Blogದೇಶ

ಜೊತೆಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಯಾಗಿ ಕಾಣಿಸಿಕೊಳ್ಳಲಿರುವ ನಟಿ ಇವರೇ ನೋಡಿ

ಚಂದನವನದ ಖ್ಯಾತ ನಟಿ ಸೋನುಗೌಡ ಈಗ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಆರ್ಯವರ್ಧನ್ ನ ಮೊದಲ ಪತ್ನಿ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಕಿರುತೆರೆ ಪ್ರವೇಶದ ಬಗ್ಗೆ ಮಾತನಾಡಿರುವ ಸೋನು ಗೌಡ ” ಧಾರಾವಾಹಿ ಪ್ರಸಾರವಾದಾಗಿನಿಂದ ರಾಜನಂದಿನಿ ಪಾತ್ರದ ಕುರಿತು ತುಂಬಾ ಕುತೂಹಲ ಮನೆ ಮಾಡಿತ್ತು. ಅವಳ ಹೆಸರು ಗೊತ್ತಿತ್ತು. ಆದರೆ ಅವಳ ಮುಖ ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಇದು ಎಲ್ಲರೂ ಊಹೆ ಮಾಡುವಂತೆ ಆಯ್ತು. ಈ ಪಾತ್ರ ಬಹು ಮುಖ್ಯವಾದ ಪಾತ್ರ. ಈ ಪಾತ್ರದಿಂದ ಕಥೆಯಲ್ಲಿ ತಿರುವು ಉಂಟಾಗುತ್ತದೆ. ನಾನು ಪಾತ್ರ ಒಪ್ಪಿಕೊಳ್ಳಲು ಇದು ಒಂದು ಕಾರಣ. ನಾನು ಕೆರಿಯರ್ ನ ದಿಟ್ಟ ಹೆಜ್ಜೆ ತೆಗೆದುಕೊಂಡಿದ್ದೇನೆ” ಎಂದಿದ್ದಾರೆ.

ಈಗಾಗಲೇ ರಾಜನಂದಿನಿ ಆಗಮನದ ಚಿತ್ರೀಕರಣ ಆರಂಭವಾಗಿದ್ದು ರಾಯಲ್ ಲುಕ್ ನಲ್ಲಿ ಸೋನು ಕಾಣಿಸಿಕೊಂಡಿದ್ದಾರೆ. “ನನ್ನ ಪ್ರವೇಶ ಆರ್ಯವರ್ಧನ್ ನ ಹಿಂದಿನ ಬದುಕಿನ ಹಾಗೂ ರಾಜನಂದಿನಿ ಹಾಗೂ ಆರ್ಯವರ್ಧನ್ ನ ಸಂಬಂಧದ ಬಗೆಗಿನ ಊಹೆಗಳಿಗೆ ಸ್ಪಷ್ಟನೆ ಕೊಡುತ್ತದೆ. ಇದು ಹೊಸ ಅಧ್ಯಾಯವನ್ನು ಆರಂಭಿಸುತ್ತದೆ”ಎಂದಿದ್ದಾರೆ.

ಇನ್ನು ಇದರ ಜೊತೆಗೆ ಟೆಲಿವಿಷನ್ ಎಂಟ್ರಿ ಕುರಿತು ಹೇಳಿರುವ ಸೋನು” ಈ ಕೊರೋನಾ ಸಂಕಷ್ಟ ಟಿವಿ ಹಾಗೂ ಸಿನಿಮಾಗಳು ಹತ್ತಿರವಾಗುವಂತೆ ಮಾಡಿತು. ಓಟಿಟಿ ಫ್ಲಾಟ್ ಫಾರ್ಮ್ ಮಹತ್ವ ಪಡೆದುಕೊಂಡವು. ಹೀಗಾಗಿ ಇದೇ ಸರಿಯಾದ ಸಮಯ ಅನಿಸಿತು.‌ಹೆಚ್ಚು ಜನಪ್ರಿಯ ಕನ್ನಡ ಓಟಿಟಿಗಳಿಲ್ಲದ ಕಾರಣದಿಂದಾಗಿ ಟಿವಿ ನನ್ನನ್ನು ಜನರ ಹತ್ತಿರ ಕರೆದೊಯ್ಯುತ್ತದೆ. ಮನರಂಜನೆಯ ವಿವಿಧ ಮಾಧ್ಯಮಗಳಲ್ಲಿ ಪ್ರಯೋಗ ಮಾಡುವುದು ನನಗೆ ಅಗತ್ಯ ಅನಿಸಿತು” ಎಂದಿದ್ದಾರೆ.

Related posts

ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್ಕಮ್ ನೋಟ್

Nikita Agrawal

ಬಾಲ್ಯದ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಹೇಳಿದ್ದೇನು ಗೊತ್ತಾ?

Nikita Agrawal

“ಪ್ಯಾನ್ ಇಂಡಿಯಾ ಸ್ಟಾರ್” ಅಲ್ಲು ಅರ್ಜುನ್ ರ ಹೊಸ ಬ್ಯುಸಿನೆಸ್‌ ಹೇಗಿದೆAAA ಸಿನಿಮಾಸ್ ನಲ್ಲಿ‌ ಆದಿಪುರುಷ್ ಮೊದಲು ಪ್ರದರ್ಶನ ಗೊಳ್ಳಲಿದೆ.

kartik

Leave a Comment

Share via
Copy link
Powered by Social Snap