
ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.. ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ ..ಮದಗಜ ಸಿನಿಮಾ ಕಂಪ್ಲೀಟ್ ಆಕ್ಷನ್ ಎಂಟರ್ ಟೈನ್ ಮೆಂಟ್ ಚಿತ್ರವಾಗಿತ್ತು ಶ್ರೀಮುರಳಿ ಜತೆ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ
ಈಗಾಗಲೇ ಸಿನಿಮಾದ ಹಾಡುಗಳು ಮತ್ತು ಟೀಸರ್ ಗಳು ಭಾರಿ ಸದ್ದು ಮಾಡಿದ್ದು, ಪ್ರೇಕ್ಷಕರಲ್ಲಿ ಸಿನಿಮಾ ಮೇಲೆ ಸಾಕಷ್ಟು ಕುತೂಹಲಗಳಿವೆ.. ಚಿತ್ರದಲ್ಲಿ ಮಾಸ್ ಎನಿಸುವ ಡೈಲಾಗ್ಸ್ ಗಳು ಹಾಗೂ ಸಾಹಸ ದೃಶ್ಯಗಳು ಹೆಚ್ಚಾಗಿಯೇ ಇದ್ದು ಕಮರ್ಷಿಯಲ್ ಸಿನಿಮಾಗಳನ್ನು ಇಷ್ಟಪಡುವಂಥ ಪ್ರೇಕ್ಷಕರಿಗೆ ಮದಗಜ ಕಂಪ್ಲೀಟ್ ಎಂಟರ್ ಟೈನ್ ಮೆಂಟ್ ಪ್ಯಾಕೇಜ್ ಆಗಲಿದೆ …

ಸದ್ಯ ತೆರೆಗೆ ಬರಲು ಸಿದ್ಧವಾಗಿರುವ ಮದಗಜ ಸಿನಿಮಾದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಅಮೌಂಟ್ ಸಿಕ್ಕಿದೆ …ಮದಗಜ ಸಿನಿಮಾದ ಸ್ಯಾಟಲೈಟ್ ರೈಟ್ಸನ್ನು ಕಲರ್ಸ್ ಕನ್ನಡ ವಾಹಿನಿ ಬರೋಬ್ಬರಿ 6ಕೋಟಿ ಕೊಟ್ಟು ಖರೀದಿ ಮಾಡಿದೆ..ಮದಗಜ ಸಿನಿಮಾ ಶ್ರೀಮುರುಳಿ ಕೆರಿಯರ್ ನಲ್ಲಿ ಬಿಗ್ ಬಜೆಟ್ ಚಿತ್ರವಾಗಿದೆ ..