ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ… ಔಟ್&ಔಟ್ ಕಮರ್ಷಿಯಲ್ ಎಂಟರ್ ಟೈನ್ ಮೆಂಟ್ ಸಿನಿಮಾ ಆಗಿರೋ ಮದಗಜ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡು ಕೊಂಡಾಡಿದ್ದಾರೆ…
ಕರ್ನಾಟಕದ 186ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದ ಮದಗಜ ಚಿತ್ರದ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿ ಹೌಸ್ ಫುಲ್ ಪ್ರದರ್ಶನ ಕಂಡಿದೆ …
ಖುಷಿಯ ವಿಚಾರ ಅಂದ್ರೆ ಮದಗಜ ಸಿನಿಮಾ ಮೊದಲ ದಿನವೇ 8ಕೋಟಿ ಎಂಬತ್ತು ಲಕ್ಷ ಕಲೆಕ್ಷನ್ ಮಾಡಿದೆ ಶ್ರೀಮುರಳಿ ಕೆರಿಯರ್ ಮದಗಜ ಬಿಗ್ ಬಜೆಟ್ ಸಿನಿಮಾ ಆಗಿದ್ದು ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮೂಲಕ ಸಿನಿಮಾ ಸಖತ್ ಸುದ್ದಿ ಮಾಡುತ್ತಿದೆ…