ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ… ಈಗಾಗಲೇ ಹಾಡುಗಳು ಟೀಸರ್ ನಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಮದಗಜ ಸಿನಿಮಾವನ್ನ ಮಹೇಶ್ ನಿರ್ದೇಶನ ಮಾಡಿದ್ದಾರೆ …
ಇದೇ ಮೊದಲ ಬಾರಿಗೆ ಮದಗಜ ಸಿನಿಮಾದ ಮೂಲಕ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ ….
ಡಿಸೆಂಬರ್ 3 ರಂದು ರಾಜ್ಯಾದ್ಯಂತ ಮದಗಜ ಸಿನಿಮಾ ಬಿಡುಗಡೆಯಾಗುತ್ತಿದ್ದು ಕನ್ನಡ ಹಾಗೂ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮದಗಜ ಪ್ರೇಕ್ಷಕರ ಮುಂದೆ ಬರಲಿದ್ದಾನೆ … ಸಿನಿಮಾ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ ಗಳಿಸಿದ್ದು ಚಿತ್ರಕ್ಕೆ ಯು ಎ ಸರ್ಟಿಫಿಕೇಟ್ ಕೊಡಲಾಗಿದೆ… ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೆ ಸರ್ಟಿಫಿಕೇಟ್ ಸಿಕ್ಕಿದ್ದು ಟೀಸರ್ ಹಾಗೂ ಹಾಡುಗಳಿಂದ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ..
1400 ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ಮದಗಜ ಚಿತ್ರ ಪ್ರದರ್ಶನ ಕಾಣಲಿದೆ….