ತಮ್ಮ ಹಾಸ್ಯದ ಮೂಲಕ ಜನರ ಮೊಗದಲ್ಲಿ ನಗು ತರಿಸುವ ಭಾರತಿ ಸಿಂಗ್ ಜೀವನದಲ್ಲಿ ಈಗ ಸಂತೋಷ ಮೂಡಿಸಲು ಪುಟ್ಟ ಅತಿಥಿ ಬರುತ್ತಿದ್ದಾರೆ. ಭಾರತಿ ಹಾಗೂ ಹರ್ಷ ಲಿಂಬಾಚಿಯಾ ಎಪ್ರಿಲ್ ನಲ್ಲಿ ಈ ಪುಟ್ಟ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಎಂಟನೆಯ ತಿಂಗಳ ಗರ್ಭಿಣಿಯಾಗಿದ್ದರೂ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಭಾರತಿ ಸಿಂಗ್ ತಾಯಿಯಾಗುವ ಸಂತಸದಲ್ಲಿದ್ದಾರೆ. ಈ ವಿಶೇಷ ಕ್ಷಣವನ್ನು ಭಾರತಿ ಸಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟ್ ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ ರಫಲ್ಡ್ ಡ್ರೆಸ್ ಧರಿಸಿದ್ದು ಈ ಡ್ರೆಸ್ ನ ತೋಳುಗಳಲ್ಲಿ ರಫೆಲ್ ನನ್ನು ಹೊಂದಿದೆ. ಅದರ ಮೇಲೆ ರಫೆಲ್ ಜಾಕೆಟ್ ಹಾಕಿದ್ದಾರೆ. ಈ ಡ್ರೆಸ್ ಗೆ ಮ್ಯಾಚ್ ಆಗುವಂತೆ ಮೇಕಪ್ ಮಾಡಿಕೊಂಡಿದ್ದಾರೆ.
ಕೂದಲನ್ನು ಕರ್ಲಿ ಮಾಡುವ ಮೂಲಕ ಕಟ್ಟದೇ ಹಾಗೆ ಬಿಟ್ಟಿದ್ದಾರೆ. ಗುಲಾಬಿ ಹೂವುಗಳಿಂದ ಮಾಡಿದ ಹಿನ್ನೆಲೆಯಲ್ಲಿ ಬೇಬಿ ಬಂಪ್ ಜೊತೆ ಪೋಸ್ ನೀಡಿದ್ದಾರೆ. “ದಿ ಲೂನಿ ಲೆನ್ಸ್ ” ಈ ಫೋಟೋಶೂಟ್ ಮಾಡಿದೆ. ಪತಿ ಹರ್ಷ ಲಿಂಬಾಚಿಯಾ ಕೂಡಾ ಫೋಟೋಶೂಟ್ ಮಾಡಿಸಿಕೊಂಡಿದ್ದು ಭಾರತಿ ಸಿಂಗ್ ಅವರ ಬೇಬಿ ಬಂಪ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.