ನಟ ಕಿಚ್ಚ ಸುದೀಪ್ ಸದಾ ಸಿನಿಮಾಗಳಲ್ಲಿ ಬ್ಯುಸಿ ಇರೋ ಕಲಾವಿದ…ಸ್ಯಾಂಡಲ್ ವುಡ್ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯ ಸಿನಿಮಾಗಳಲ್ಲಿಯೂ ಬ್ಯೂಸಿ ಆಗಿರೋ ಕಿಚ್ಚ ಏಕಾಏಕಿ ಪುಣ್ಯಕ್ಷೇತ್ರಗಳ ದರ್ಶನದಲ್ಲಿ ಬ್ಯುಸಿ ಆಗಿದ್ದಾರೆ…
ಸದ್ಯ ಕರಾವಳಿ ಪ್ರವಾಸದಲ್ಲಿರುವ ನಟ ಕಿಚ್ಚ ಸುದೀಪ್ ಶ್ರೀಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಕಿಚ್ಚ ಜೊತೆಗೆ ಪತ್ನಿ ಪ್ರಿಯಾ ಕೂಡ ದೇವರ ದರ್ಶನ ಪಡೆದಿದ್ದಾರೆ…
ನಂತರ ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು..
ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ಸೇವೆ ಸಲ್ಲಿಸಿದ್ದಾರೆ.. ನಂತರ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.