“100” ಗೆ ಇನ್ಫಿ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿಯವರಿಂದ ಪ್ರಶಂಸೆ.. ರಮೇಶ್ ಅರವಿಂದ್ ಅವರು ನಟಿಸಿ ನಿರ್ದೇಶಿಸಿರುವ ಚಿತ್ರ “100” ಈ ಚಿತ್ರ ಒಂದು ಸಾಮಾಜಿಕ ಸಂದೇಶವನ್ನು ಹೊಂದಿದೆ. ಕಳೆದ ವಾರ ನವೆಂಬರ್ 19ರಂದು ಬಿಡುಗಡೆಗೊಂಡು ಯಶಸ್ವಿಯಾಗಿದೆ.
ಈ ಚಿತ್ರವನ್ನು ವೀಕ್ಷಿಸಿದ ಕನ್ನಡಿಗರು ಮತ್ತೊಮ್ಮೆ ರಮೇಶ್ ಅರವಿಂದ್ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ.
Cybercrime ಬಗ್ಗೆ ಕೂಡ ಈ ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇದೆ ಎಂದು 100 ಸಿನಿಮಾವನ್ನು ವೀಕ್ಷಿಸಿದ ಸುಧಾಮೂರ್ತಿಯವರು ಕೊಂಡಾಡಿದ್ದಾರೆ.
ಈ ಚಿತ್ರದಲ್ಲಿ ಇಂದಿನ youths ಹೇಗೆ social media ಗೆ addict ಆಗಿ ಅಲ್ಲಿ ಅಪರಿಚಿತರಿಗೆ ಪರಿಚಯವಾಗಿ ಹೇಗೆ ಅದರಿಂದ ಅವರು ಮತ್ತು ಅವರ ಮನೆಯವರಿಗೆ ಅಪಾಯ ಬರುತ್ತದೆ ಇದರಿಂದ youths ಎಷ್ಟು ಎಚ್ಚರಿಕೆ ಇಂದ ಇರಬೇಕು ಎಂಬುದನ್ನು ನಾಜೂಕಾಗಿ ತೋರಿಸಿದ್ದಾರೆ.
ಇನ್ನೂ ಇಂಥಹ ಸಾಮಾಜಿಕ ಕಳಕಳಿ ಇರುವ ಸಿನಿಮಾಗಳು ಬರಬೇಕು ಎಂಬುದು ಸಿನಿಪ್ರಿಯರ ಅಭಿಲಾಷೆಯಾಗಿದೆ.