ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ ಶ್ರೀರಾಮ್ ಹಾಡಿರುವ “ನೋಟ ಬಂಗಾರವಾಯಿತೇ ಶ್ರೀವಲ್ಲಿ” ಎನ್ನುವ ಹಾಡು ಉಂಟು ಮಾಡಿದ ಹವಾ ಅಷ್ಟಿಷ್ಟಲ್ಲ. ಆ ಹಾಡು ಅದೆಷ್ಟು ಹಿಟ್ ಆಗಿದೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕೂಡಾ ಅದೇ ಹಾಡನ್ನು ಗುನುಗುನಿಸುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಆ ಹಾಡು ಹಿಟ್ ಆಗಿದೆ.
ಇಂತಹ ಹಿಟ್ ಹಾಡಿನ ಮೂಲಕ ಸಂಗೀತ ಪ್ರಿಯರ ಮನ ಸೆಳೆದಿರುವ ಸಿದ್ ಶ್ರೀರಾಮ್ ಅವರು ಚಂದನವನಕ್ಕೆ ಕಾಲಿಟ್ಟಿದ್ದಾರೆ. ಹೌದು ಆ ಮೂಲಕ ಕನ್ನಡದಲ್ಲಿಯೂ ಹಿಟ್ ಸಾಂಗ್ಸ್ ನೀಡುತ್ತಿದ್ದಾರೆ. ಸಿದ್ ಶ್ರೀರಾಮ್ ಅವರು ಹಾಡಿರುವ ಹಾಡು ಕನ್ನಡದಲ್ಲಿ ಈಗಷ್ಟೇ ರಿಲೀಸ್ ಆಗಿದ್ದು ಸಂಗೀತ ಪ್ರಿಯರಿಗೆ ಇಷ್ಟವಾಗುತ್ತಿದೆ.
ಶಶಾಂಕ್ ನಿರ್ದೇಶನದ “ಲವ್ 360” ಚಿತ್ರದ ಜಗವೇ ನೀನು ಎನ್ನುವ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಈ ಹಾಡು ಸಕತ್ ಸದ್ದು ಮಾಡುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿನ ಸಾಹಿತ್ಯವನ್ನು ಶಶಾಂಕ್ ಅವರು ಬರೆದಿದ್ದಾರೆ.