ಒಟಿಟಿ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ಹೀಗಾಗಿ ತಾರೆಯರು ಈಗ ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಪಟ್ಟಿಗೆ ನಟ ವರುಣ್ ಧವನ್ ಸೇರ್ಪಡೆಯಾಗಿದೆ. ದೊಡ್ಡ ವೆಬ್ ಸಿರೀಸ್ ನಲ್ಲಿ ನಟಿಸಲಿರುವ ವರುಣ್ ಪ್ರಿಯಾಂಕ ಚೋಪ್ರ ಅಥವಾ ಸಮಂತಾ ಅವರೊಂದಿಗೆ ಒಟಿಟಿಯಲ್ಲಿ ಡೆಬ್ಯುಟ್ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ವರುಣ್ ಕೂಡಾ ತಾನು ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂಬ ಸುಳಿವು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ವರುಣ್ ” ನನಗೆ ಒಟಿಟಿ ಪ್ಲಾಟ್ ಫಾರ್ಮ್ ಇಷ್ಟ. ಸದ್ಯದಲ್ಲಿಯೇ ಆಸಕ್ತಿದಾಯಕ ಕಾರ್ಯಕ್ರಮಗಳು ಬರಲಿವೆ. ನಾನು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
ಪ್ರಿಯಾಂಕ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡೆನ್ ನಟಿಸಿರುವ ಅಮೆರಿಕನ್ ಸ್ಪೈ ಥ್ರಿಲ್ಲರ್ “ಸಿಟಾಡೆಲ್ “ನಲ್ಲಿ ಭಾರತೀಯ ಸ್ಪಿನ್ ಆಫ್ ನಲ್ಲಿ ವರುಣ್ ಕಾಣಿಸಿಕೊಳ್ಳಬಹುದು. ಆದರೆ ವರುಣ್ ಅವರನ್ನು ನೋಡಲು ಕಾಯಬೇಕಾಗಿದೆ. ಈ ವರ್ಷ ಶೋ ಬಿಡುಗಡೆ ಆಗುವುದಿಲ್ಲ. ಈ ಶೋ ವಿವರಗಳನ್ನು ವರುಣ್ ನೀಡಿಲ್ಲ. ಈ ಸಿರೀಸ್ ಗಾಗಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ. ಈ ಶೋನಲ್ಲಿ ನಟಿ ಸಮಂತಾ ಕೂಡಾ ನಟಿಸಲಿದ್ದಾರಂತೆ.
ಸದ್ಯ “ಜಗ್ ಜಗ್ ಜಿಯೋ” ಹಾಗೂ “ಭೇಲಿಯಾ” ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.