ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಈಗಾಗಲೇ ಟೀಸರ್ ಹಾಗೂ ಪೋಸ್ಟರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ ಇದಾಗಿದ್ದು.. ಪ್ರೇಕ್ಷಕರು ವಿಕ್ರಂತಾ ರೋಣನನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ ..
ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದ್ದು …ಇದೇ ಮೊಟ್ಟಮೊದಲ ಬಾರಿಗೆ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಇಂಗ್ಲಿಷ್ ವರ್ಷನ್ ಸಿನೆಮಾಗೆ ತಾವೇ ಡಬ್ ಮಾಡಿದ್ದಾರೆ …ಈ ಮೂಲಕ ಇಂಗ್ಲಿಷ್ ಸಿನಿಮಾಗೆ ಡಬ್ ಮಾಡಿದ ಮೊದಲ ಹಾಗೂ ಏಕೈಕ ಕನ್ನಡದ ನಟ ಕಿಚ್ಚ ಸುದೀಪ್ ಆಗಿದ್ದಾರೆ..
ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅಭಿನಯ ಮಾಡಿದ್ದಾರೆ…ವಿಕ್ರಾಂತ್ ರೋಣವನ್ನು ಜೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತದೆ, ಜಾಕ್ ಮಂಜುನಾಥ್ ಅವರು ತಮ್ಮ ನಿರ್ಮಾಣದ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.