Karnataka Bhagya

ಹೊಸ ತಂತ್ರಜ್ಞಾನದ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾದ ‘ವಿಕ್ರಾಂತ್ ರೋಣ’.

ಸದ್ಯ ಕನ್ನಡಿಗರಷ್ಟೇ ಅಲ್ಲದೇ ದೇಶದಾದ್ಯಂತ ಸಿನಿರಸಿಕರು ಕಾಯುತ್ತಿರುವ ಸಿನಿಮಾಗಳಲ್ಲಿ ‘ವಿಕ್ರಾಂತ್ ರೋಣ’ಕೂಡ ಒಂದು. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅವರು ನಟಿಸಿರುವ ಈ ಸಿನಿಮಾ ಇದೇ ಜುಲೈ 28ರಿಂದ ವಿವಿಧ ಭಾಷೆಗಳಲ್ಲಿ,3ಡಿ ಯಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಸದ್ಯ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿ ಆಗಿರುವ ಚಿತ್ರತಂಡ ತನ್ನ ಹೊಸ ಯೋಜನೆಯೊಂದನ್ನು ಹೊರಹಾಕಿದೆ.

‘ವಿಕ್ರಾಂತ್ ರೋಣ’ ಹಲವು ಭಾಷೆಗಳಲ್ಲಿ ತೆರೆಕಾಣುತ್ತಿರುವ ಚಿತ್ರ. ಕನ್ನಡದ ಸ್ವಂತವಾಗಿ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಹಾಗು ಇಂಗ್ಲೀಷ್ ನಲ್ಲೂ ಸಿನಿಮಾ ಸಿದ್ಧವಾಗಿದೆ. ಇದಕ್ಕೆ ಸಂಭಂಧಿಸಿದಂತೆ ಹೊಸ ತಂತ್ರಜ್ಞಾನವನ್ನು ಚಿತ್ರತಂಡ ಸಿದ್ದಪಡಿಸಿದೆ. ‘ಸಿನಿಡಬ್’ ಎಂಬ ಆಪ್ ಒಂದರ ಮೂಲಕ ತಮಗೆ ಬೇಕಾದ ಭಾಷೆಯಲ್ಲಿ ಚಿತ್ರಮಂದಿರದಲ್ಲೇ ಸಿನಿಮಾವನ್ನು ಪ್ರೇಕ್ಷಕರು ನೋಡಬಹುದಾಗಿದೆ. ಈ ಬಗ್ಗೆ ಸುದೀಪ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದು ಅದರ ಪ್ರಕಾರ, “ಈಗ ಒಬ್ಬ ಪ್ರೇಕ್ಷಕ ಆಂಧ್ರದಲ್ಲಿದ್ದಾರೆ. ಅವರಿಗೆ ಕನ್ನಡದಲ್ಲಿ ಸಿನಿಮಾ ನೋಡೋ ಇಚ್ಛೆಯಿರುತ್ತದೆ. ಆದರೆ ಅವರಿಗೆ ಸರಿಯಾಗುವ ಸಮಯದಲ್ಲಿ ಕನ್ನಡ ಆವೃತ್ತಿ ಅವರಿಗೆ ಅಲ್ಲಿ ಸಿಗುವುದಿಲ್ಲ.

ಆಗ ಅವರು ತೆಲುಗು ಆವೃತ್ತಿಯ ಶೋ ಪ್ರವೇಶಿಸಿ, ಅಲ್ಲಿ ಈ ಆಪ್ ಓಪನ್ ಮಾಡಿ ಅಲ್ಲಿನ ಸಮಯ ಹಾಗು ಸ್ಥಳ ಹಾಕಿದಾಗ, ಆ ಆಪ್ ಅವರಿಗೆ ಕನ್ನಡ ಆವೃತ್ತಿಯ ಡೈಲಾಗ್ ಗಳನನ್ನು ನೀಡುತ್ತದೆ. ಈ ಪ್ರೇಕ್ಷಕರು ಅದನ್ನ ಈಯರ್ ಫೋನ್ ಬಳಸಿ ಕೇಳಬಹುದು. ಅಲ್ಲಿನ ಪರದೆ ಮೇಲೆ ಮೂಡುತ್ತಿರುವ ದೃಶ್ಯಕ್ಕೆ ಸರಿಯಾಗಿ ಈ ಆಪ್ ಡೈಲಾಗ್ ಗಳನ್ನು ನೀಡುತ್ತದೆ, ಅದು ಕೂಡ ಮ್ಯೂಸಿಕ್ ಸಮೇತ. ಆದರೆ ಇದಕ್ಕೆ ಥೀಯೇಟರ್ ನ ಒಳಗಿರುವುದು ಅವಶ್ಯಕ. ಹೊರಗಡೆಯಿಂದ ಈ ಸೌಲಭ್ಯ ಪಡೆಯಲಾಗುವುದಿಲ್ಲ” ಎಂದಿದ್ದಾರೆ.

ಅನೂಪ್ ಭಂಡಾರಿ ಅವರ ನಿರ್ದೇಶನದ ‘ವಿಕ್ರಾಂತ್ ರೋಣ’ ಆರಂಭದಿಂದಲೂ ದೊಡ್ಡ ಮಟ್ಟದಲ್ಲೇ ಹೊಸ ಹೊಸ ಪ್ರಯತ್ನಗಳಿಗೆ ಹೆಸರಾಂದಂತ ಸಿನಿಮಾ. ಕಿಚ್ಚ ಸುದೀಪ್ ನಾಯಕನಾಗಿ ಹಾಗು ಅವರ ಜೊತೆಗೆ, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ ಫೆರ್ನಾಂಡಿಸ್ ಹಾಗು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಜುಲೈ 28kke ಸಿನಿಮಾ ಬಿಡುಗಡೆಯಗುತ್ತಿದ್ದು, ಸಿನಿಮಾದ ಮೇಲೆ ಎಲ್ಲರ ನಿರೀಕ್ಷೆ ಮುಗಿಲಿನೆತ್ತರದಲ್ಲಿದೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap