ವಿನೋದ್ ಪ್ರಭಾಕರ್ ಅಭಿನಯದ ವರದ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ…ಚಿತ್ರಕ್ಕೆ ಉದಯ್ ಪ್ರಕಾಶ್ ನಿರ್ದೇಶನ ಮಾಡಿದ್ದು ವಿನೋದ್ ಪ್ರಭಾಕರ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರೆ ಈಗಾಗಲೇ ಚಿತ್ರರಂಗದ ಕೆಲ ಗಣ್ಯರು ಸಿನಿಮಾದ ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ವರ್ಗ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ …
ವರದ ಸಿನಿಮಾ ಒಳ್ಳೆ ಪ್ರಚಾರ ಗಿಟ್ಟಿಸಿಕೊಂಡಿತು ತೆರೆಗೆ ಬರಲು ಸಿದ್ಧವಾಗಿದೆ ಆದರೆ ಸಿನಿಮಾ ಬಗ್ಗೆ ಸ್ವತಃ ನಟ ವಿನೋದ್ ಪ್ರಭಾಕರ್ ರವರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ …ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ವೇದಿಕೆಯ ಮೇಲೆಯೇ ನಟ ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಉದಯ್ ಪ್ರಕಾಶ್ ನಡುವೆ ವೈಮನಸ್ಸು ಇರುವುದು ವ್ಯಕ್ತವಾಗಿದೆ …
ವೇದಿಕೆ ಮೇಲೆಯೇ ಅಸಮಾಧಾನ ಹೊರ ಹಾಕಿದಾರೆ ವಿನೋದ್ ಪ್ರಭಾಕರ್….
ಚಿತ್ರದ ಟ್ರೈಲರ್ ನಲ್ಲಿ ಪುನೀತ್ ನಮನ ಭಾವಚಿತ್ರ ಹಾಕಿಲ್ಲ ಎಂದು ವಿನೋದ್ ಬೇಸರ ವ್ಯಕ್ತ ಪಡಿಸಿದ್ದಾರೆ….ನಾನು ಕೆಲವು ಕೆಲಸದಲ್ಲಿ ಬ್ಯುಸಿಯಾಗಿದ್ದೆ …ಅದಕ್ಕೆ ಈಗ ಟ್ರೈಲರ್ ರಿಲೀಸ್ ಆದಾಗ ಗೊತ್ತಾಯ್ತು…ನಿಯತ್ತಾಗಿರೋನಿಗೆ ಎದೆ ತುಂಬಾ ಪ್ರೀತಿ ಕೊಡ್ತಿನಿ ನಿಯತ್ತಾಗಿಲ್ದಿರೋನಿಗೆ ಎದೆ ಬಗೆದು ಪ್ರಾಣ ತೆಗೀತಿನಿ ಎಂದು ರಿಯಲ್ ಲೈಫ್ ನಲ್ಲಿಯೂ ಡೈಲಾಗ್ ಹೊಡೆದಿದ್ದಾರೆ ವಿನೋದ್ ಪ್ರಭಾಕರ್