ಅಪ್ಪು ಅಭಿಮಾನಿಗಳು ನನ್ನ ಬಿಟ್ಟು ಆಗಲೇ ಹದಿನೈದು ದಿನಗಳೇ ಕಳೆದಿವೆ ಆದರೆ ಅವರ ನೆನಪು ಮಾತ್ರ ಇನ್ನೂ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಹಾಗೇ ಉಳಿದುಕೊಂಡಿದೆ ನಿನ್ನೆಯಷ್ಟೆ ಚಿತ್ರರಂಗದ ವತಿಯಿಂದ ಅಪ್ಪು ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ವಿಶಾಲ್ ಇಂದು ಅಪ್ಪು ಸಮಾಧಿಗೆ ಭೇಟಿ ಕೊಟ್ಟಿದ್ದಾರೆ ….
ಸಮಾಧಿ ಬಳಿಯಲ್ಲಿ ಅಪ್ಪು ಭಾವ ಚಿತ್ರ ಕಂಡು ಭಾವುಕರಾಗಿದ್ದಾರೆ ವಿಶಾಲ್ ಕಣ್ಣೀರಿಟ್ಟಿದ್ದಾರೆ.. ನಂತ್ರ ಮಾಧ್ಯಮದ ಜೊತೆ ಮಾತನಾಡಿದ ವಿಶಾಲ್ …ಪುನೀತ್ ಸಾಮಾನ್ಯ ವ್ಯಕ್ತಿಯಂತೆ ಇರ್ತಿದ್ರು..ಸೂಪರ್ ಸ್ಟಾರ್ ಆಗಿದ್ರೂ ಸ್ಟಾರಿಸಂ ತೋರಿಸ್ತಿರಲಿಲ್ಲ …ಪುನೀತ್ ಇಲ್ಲ ಅನ್ನೋ ವಿಷಯ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ..ಅವರ ಅಗಲಿಕೆ ಸಮಾಜಕ್ಕೂ ಫಿಲ್ಮ್ ಇಂಡಸ್ಟ್ರಿಗೂ ಲಾಸ್ ..ಅವರು ಒಳ್ಳೇ ನಟರಷ್ಟೇ ಅಲ್ಲ್ ಒಳ್ಳೆಯ ವ್ಯಕ್ತಿಯೂ ಹೌದು ಎಂದಿದ್ದಾರೆ….
ದೇವರು ಅಶ್ವಿನಿಯವರಿಗೂ ಮಕ್ಕಳಿಗೂ ಶಕ್ತಿ ಕೊಡಬೇಕು…ಪುನೀತ್ ಅಗಲಿಕೆ ಒಳ್ಳೆಯ ಮಿತ್ರ ನನ್ನ ಜೊತೆ ಇಲ್ಲ ಅನ್ನುವಂತಾಗಿದೆ..ಎಂದಿದ್ದಾರೆ..