ನಟಿ ರಾಧಿಕಾ ಪಂಡಿತ್ ಹಾಗೂ ರಾಕಿಂಗ್*ಯಶ್ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಈ ಸಮಯದಲ್ಲಿ ಯಶ್ ಮತ್ತು ರಾಧಿಕಾ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ
ಯಶ್ ಮತ್ತು ರಾಧಿಕಾ ಇಬ್ಬರ ಪರಿಚಯವಾಗಿದ್ದು ನಂದಗೋಕುಲ ಎನ್ನುವ ಧಾರಾವಾಹಿ ಮೂಲಕ ಧಾರಾವಾಹಿಯಲ್ಲಿ ರಾಧಿಕಾ ಸಹೋದರನಾಗಿ ಯಶ್ ಅಭಿನಯ ಮಾಡಿದ್ದರು
ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಇಬ್ಬರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ನಟನೆ ಮಾಡಿದ್ದರು
ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದರು ಕೂಡ ಯಶ್ ತಮ್ಮ ಪ್ರೀತಿಯನ್ನ ಫೋನ್ ನ ಮೂಲಕ ರಾಧಿಕಾಗೆ ವ್ಯಕ್ತಪಡಿಸಿದ್ದರು
ರಾಧಿಕಾರನ್ನ ವರಮಹಾಲಕ್ಷ್ಮಿ ಹಬ್ಬದಂದು ಮನೆಗೆ ಕರೆದುಕೊಂಡು ಹೋಗಿ ಮನೆಯವರಿಗೆ ಸೊಸೆ ಎಂದು ಪರಿಚಯ ಮಾಡಿಸಿದ್ರು ಯಶ್
ರಾಧಿಕಾ . ಯಶ್ ಮನೆಗೆ ಬಂದಾಗ ಅವ್ರ ತಾಯಿ ಮನೆಯ ಸೊಸೆಗೆ ಮಾತ್ರ ಕೊಡುವ ಗೊಂಬೆಯನ್ನೂ ಕೊಟ್ಟು ತಮ್ಮ ಸೊಸೆಯನ್ನಾಗಿ ಸ್ವಾಗತ ಮಾಡಿದ್ರಂತೆ…
2016ರ ಆಗಸ್ಟ್ ನಲ್ಲಿ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಪ್ರೀತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು… ಯಶ್ ರಾಧಿಕಾ ನಂತರ ಅದೇ ವರ್ಷದಲ್ಲಿ ಡಿಸೆಂಬರ್ 99ರಂದು ಇಬ್ಬರೂ ಸಪ್ತಪದಿ ತುಳಿದರು..
ಯಶ್ ಪ್ರೀತಿಯಿಂದ ರಾಧಿಕಾ ಅವರನ್ನ ಬುರ್ಶಿ ಎಂದು ಕರೆಯುತ್ತಾರೆ ..ರಾಧಿಕಾ ಯಶ್ ಎಂದೇ ಕರೆಯುತ್ತಾರೆ..
ಯಶ್ ಮತ್ತು ರಾಧಿಕಾ ಇಬ್ಬರಿಗೂ ಸಮುದ್ರ ತೀರ ಎಂದರೆ ತುಂಬಾ ಇಷ್ಟ ..ಅದರಲ್ಲಿಯೂ ಗೋವಾ ಇಬ್ಬರ ಮೋಸ್ಟ್ ಫೆವರೇಟ್ ಪ್ಲೇಸ್