
ವಡಗೇರಾ ತಾಲೂಕಿನ ಹಾಲಗೇರಾ, ಗೋಡಿಹಾಳ, ಕುಮನೂರು, ಅರ್ಜುಣಗಿ ಕಂದಳ್ಳಿ ರಸ್ತೆಗೆ ಯಾದಗಿರಿ ನಗರಸಭೆ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಕು.ಲಲಿತಾ ಮೌಲಾಲಿ ಅನಪೂರ ಭೇಟಿ
ಯಾದಗಿರಿ : ರಸ್ತೆ ಸಂಪರ್ಕ ಕಡಿತದಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಯಾದಗಿರಿ ಶಾಸಕರು ಅರ್ಜುಣಗಿ ರೋಡ್ ನೋಡಬೇಕು, ಈ ರೋಡ್ ಮ್ಯಾಲ ಶಾಲಾ ಮಕ್ಕಳು ಕೂಡ ಸಂಚರಿಸುತ್ತಾರೆ, ರೋಡ್ ತುಂಬಾ ನೀರ್ ನಿಂತಾದ ಎಲ್ಲರೂ ಏನ್ ನಿದ್ದೇ ಮಾಡುತ್ತಿದ್ದೀರಾ ಎಂದು ಯಾದಗಿರಿ ನಗರಸಭೆ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಕು.ಲಲಿತಾ ಮೌಲಾಲಿ ಅನಪೂರ ಆಕ್ರೋಶವ್ಯಕ್ತಪಡಿಸಿದರು.
ವಡಗೇರಾ ತಾಲೂಕಿನ ಹಾಲಗೇರಾ, ಗೋಡಿಹಾಳ, ಕುಮನೂರು, ಅರ್ಜುಣಗಿ ಕಂದಳ್ಳಿ ರಸ್ತೆಗೆ ಯಾದಗಿರಿ ನಗರಸಭೆ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಕು.ಲಲಿತಾ ಮೌಲಾಲಿ ಅನಪೂರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.ವಡಗೇರಾ ತಾಲೂಕಿನ ಹಾಲಗೇರಾ, ಗೋಡಿಹಾಳ, ಕುಮನೂರು, ಅರ್ಜುಣಗಿ ಕಂದಳ್ಳಿ ಯಿಂದ ನೇರವಾಗಿ ಸೈದಾಪೂರ ತಲುಪುವ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆಗೆ ನೂರಾರು ಗ್ರಾಮಗಳ ಸಂಪರ್ಕ ಇದೆ, ಈ ಪ್ರಮುಖ ರಸ್ತೆ ಹಾಳಾಗಿರುವುದಲ್ಲದೇ ನೀರು ನಿಂತು ರಸ್ತೆ ಹದಗೆಟ್ಟಿದ್ದು, ಈ ಸ್ಥಳದಲ್ಲಿ ಸೇತುವೆ ಎತ್ತರಿಸಲಾಗಿದ್ದು, ರಸ್ತೆಯೂ ಕೂಡ ಎತ್ತರಿಸಬೇಕಲ್ವಾ ಎಂದು ಪ್ರಶ್ನಿಸಿದರು.
ಅಸಮರ್ಪಕ ವ್ಯವಸ್ಥೆಯಿಂದ ಶಾಸಕರು ಜನಸಾಮಾನ್ಯರ ನಿದ್ದೆಗೆಡಿಸುತ್ತಿದ್ದಾರೆ ಜನಪ್ರತಿನಿಧಿಗಳು ಸೇತುವೆ ನಿರ್ಮಾಣವಾದಾಗ ಕೇವಲ ಉದ್ಘಾಟನೆಗೆ ಸೀಮಿತವಾಗದೇ ಅದರ ಉಪಯೋಗವನ್ನು ಕೂಡ ಗಮನಿಸಬೇಕು, ಸೇತುವೆ ಎತ್ತರಿಸಿದ ಮೇಲೆ ರಸ್ತೆಯು ಕೂಡ ಎತ್ತರಿಸಬೇಕು ಎನ್ನುವ ಸಾಮಾನ್ಯ ಜ್ಞಾನವನ್ನು ಅರಿತುಕೊಳ್ಳಬೇಕಿದೆ ಇದರಿಂದ ನಿತ್ಯ ಈ ಭಾಗದ ನೂರಾರು ಗ್ರಾಮಗಳ ಜನರು ಹೈರಾಣಾಗುತ್ತಿರುವುದು ಕಂಡು ಬರುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ವಡಗೇರಾ ತಾಲೂಕಿನಲ್ಲಿ ಅತಿಹೆಚ್ಚು ಬೆಳೆಹಾನಿ ಆಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೆ ಅತಿವೃಷ್ಠಿಯಿಂದ ಹಾಗೂ ಭೀಮಾನದಿ ಪ್ರವಾಹದಿಂದ ರೈತರ ಜಮೀನಿನಲ್ಲಿ ಬೆಳೆಹಾನಿಯಾಗಿರುವ ವರದಿಯನ್ನು ಸಂಪೂರ್ಣವಾಗಿ ಮಾಡಬೇಕು, ಯಾವುದಾದರೂ ಒಂದು ಮನೆಯಲ್ಲಿ ಕುಳಿತು ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ವರದಿ ತಯಾರಿಸಬಾರದು, ಪ್ರತಿಯೊಬ್ಬ ರೈತನ ಜಮೀನು ಬೆಳೆಹಾನಿ ಸಮೀಕ್ಷೆಗೆ ನೇರವಾಗಿ ಜಮೀನಿಗೆ ತೆರಳಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಭಾಗದ ರೈತರ ಬೆಳೆಹಾನಿ ಕುರಿತು ಯಾದಗಿರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ನೀವು ಧೈರ್ಯದಿಂದ ಇರಬೇಕು, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಕು.ಲಲಿತಾ ಅನಪೂರ ರೈತರಲ್ಲಿ ಆತ್ಮಸ್ಥೆöÊರ್ಯ ತುಂಬಿದರು.
ಸ್ಥಳದಿAದಲೇ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಲವೀಶ್ ಒರಡಿಯಾ ಅವರೊಂದಿಗೆ ಪೋನ್ ಮುಖಾಂತರ ಮಾತನಾಡಿದ ಕು.ಲಲಿತಾ ಮೌಲಾಲಿ ಅನಪೂರ ರಸ್ತೆ ಅವ್ಯವಸ್ಥೆ ಕುರಿತು ಗಮನಕ್ಕೆ ತಂದರು ಕೂಡಲೇ ಅಧಿಕಾರಿಗಳನ್ನು ಕಳಿಸಿ ರಸ್ತೆ ಕೆಲಸ ಮಾಡಲು ಸೂಚಿಸುತ್ತೇನೆ ಎಂದು ಸಿಇಒ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಅಯ್ಯಪ್ಪ ನಾಯ್ಕೋಡಿ, ಮಲ್ಲಿಕಾರ್ಜುನ ಹೆಡಗಿಮದ್ರಾ, ತಾಲೂಕು ಅಧ್ಯಕ್ಷರಾದ ಬಸವರಾಜ ಕೋಕ್ಲರ್, ಅರ್ಜುಣಗಿ ಗ್ರಾಮದ ಹಣಮಂತ ಬಾಗ್ಲಿ, ಸಿದ್ದಪ್ಪ ಬಾಗ್ಲಿ ಸೇರಿದಂತೆ ಇತರರಿದ್ದರು.
ಅರ್ಜುಣಗಿ ರಸ್ತೆ ಮೇಲ್ದರ್ಜೆಗೇರಿಸಿ
ಸೇತುವೆ ನಿರ್ಮಿಸಿದ ಮ್ಯಾಲ್ ಸೇತುವೆ ಎತ್ತರಕ್ಕೆ ತಕ್ಕಂತೆ ರಸ್ತೆಯನ್ನೂ ಕೂಡ ಮೇಲ್ದರ್ಜೆಗೇರಿಸಬೇಕಿರುವುದು ಸ್ಥಳಿಯ ಶಾಸಕರ ಕರ್ತವ್ಯ ಇದು ಆಗದಿರುವುದರಿಂದ ಹಲವು ಗ್ರಾಮಗಳಿಗೆ ಸಂರ್ಪಕ ಕಲ್ಪಿಸಬೇಕಿರುವು ರಸ್ತೆ ಮೇಲೆ ನೀರು ನಿಂತು ಜನರಿಗೆ ತೊಂದರೆಯಾಗುತ್ತಿದೆ, ಈ ಭಾಗದಲ್ಲಿ ಅತಿವೃಷ್ಠಿಯಿಂದ ಹಾಗೂ ಭೀಮಾನದಿ ಪ್ರವಾಹದಿಂದ ಸಾಕಷ್ಟು ರೈತರ ಜಮೀನಿನಲ್ಲಿ ಬೆಳೆಹಾನಿಯಾಗಿದೆ ಕೇವಲ ಕಾಟಾಚಾರಕ್ಕೆ ಕೆಲವು ಹಳ್ಳಿಗಳಿಗೆ ಭೇಟಿ ನೀಡಿ ಕೈತೊಳೆದುಕೊಂಡ ಶಾಸಕರು ಕ್ಷೇತ್ರದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ.
- ಕು.ಲಲಿತಾ ಮೌಲಾಲಿ ಅನಪೂರ ಯಾದಗಿರಿ ನಗರಸಭೆ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರು



