Karnataka Bhagya
Blogಅಂಕಣ

“ಕಂಗುವ” ಸಿನಿಮಾದಲ್ಲಿ ಕೆಜಿಎಫ್ ವಿಲನ್ಬರೋಬ್ಬರಿ ‌300 ಕೋಟಿ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಖಳನಾಯಕ‌, ಯಾರದು ಇಲ್ಲಿದೆ ಕಂಪ್ಲೀಟ್ ಡೀಟೇಲ್…!

ಕಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಕಂಗುವ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ನಟನ ಎಂಟ್ರಿಯಾಗಿದೆ. ವಿಜಯ್‌ ಎದುರು ಖಳನಟನಾಗಿ ಕೆಜಿಎಫ್‌ ಸಿನಿಮಾ ಖ್ಯಾತಿಯ ಆಂಡ್ರಿವ್ಸ್‌ ಅಲಿಯಾಸ್‌ ಅವಿನಾಶ್‌ ಅಬ್ಬರಿಸಲಿದ್ದಾರೆ.

ಸೂರ್ಯ ಅಭಿನಯದ ‘ಕಂಗುವ’ ಚಿತ್ರದಲ್ಲಿ ಸ್ಯಾಂಡಲ್ ವುಡ್ ವಿಲನ್ ಕೆಜಿಎಫ್ ಆ್ಯಂಡ್ರಿವ್ಸ್ (ಅವಿನಾಶ್) ಖಡಕ್ ವಿಲನ್ ಆಗಿ‌ ಮಿಂಚಲಿದ್ದಾರೆ. ಕೆ.ಇ. ಜ್ಞಾನವೇಲರಾಜ ನಿರ್ಮಾಣದ, ಸ್ಟುಡಿಯೋ ಗ್ರೀನ್ ಅಡಿಯಲ್ಲಿ‌, ಶಿವ ನಿರ್ದೇಶಿಸುತ್ತಿರುವ ‘ಕಂಗುವ’ ಚಿತ್ರದಲ್ಲಿ ನಾಯಕ ಸೂರ್ಯನಿಗೆ ನಾಯಕಿಯಾಗಿ ಬಾಲಿವುಡ್ ಬ್ಯೂಟಿ ದಿಶಾ ಪಠಾಣಿ ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಏಕಕಾಲಕ್ಕೆ ಸಿನಿಮಾ‌‌ 10 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿ ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅಷ್ಟಕ್ಕು ‘ಕಂಗುವ’ ಎಂದರೆ ಫೈರ್ ಮ್ಯಾನ್ ಎಂದರ್ಥ. ಬೆಂಕಿಯಷ್ಟು ಶಕ್ತಿ ಹೊಂದಿರುವ ನಾಯಕ ಸಿನಿಮಾದಲ್ಲಿ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾನೆ.

ಆ್ಯಂಡ್ರೀವ್ಸ್ ತೆಲುಗಿನಲ್ಲಿ ವಾಲ್ತೇರು ವೀರಯ್ಯ ಮತ್ತು ವೀರಸಿಂಹ ರೆಡ್ಡಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ವಿಜಯ್‌ ಸೇತುಪತಿ ಜತೆಗಿನ ತಮಿಳು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಬಿಗ್ ಬಜೆಟ್‌ನ ಮತ್ತೊಂದು ತಮಿಳು ಸಿನಿಮಾದ ಭಾಗವಾಗಿದ್ದಾರೆ, ಪಳನಿ ಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು 300 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ.

Related posts

ಹೇಗಿರಲಿದೆ ಅಪ್ಪು ನಿರ್ಮಾಣದ ಮುಂದಿನ ಸಿನಿಮಾ?

Nikita Agrawal

ಅಪ್ಪು ನೆನಪಿನಲ್ಲಿ ಕರುನಾಡ ರತ್ನ. ಕಾರ್ಯಕ್ರಮ

Nikita Agrawal

ಮನಬಿಚ್ಚಿ ಮಾತನಾಡಿದ ಕಾರ್ತಿಕ್ ಆರ್ಯನ್

Nikita Agrawal
Share via
Copy link
Powered by Social Snap