Karnataka Bhagya
Blogಅಂಕಣ

ಖುಷಿ ಸಿನಿಮಾದ ಎರಡನೇ ಹಾಡು ರಿಲೀಸ್..ವಿಜಯ್ ದೇವರಕೊಂಡ ಸಮಂತಾ ಜೋಡಿಯ ಪ್ರೇಮಗೀತೆ ಹೇಗಿದೆ?

ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಬಹುನಿರೀಕ್ಷಿತ ಖುಷಿ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಪ್ರೇಮಗೀತೆ ಇದಾಗಿದ್ದು, ಸ್ಯಾಮ್ ಹಾಗೂ ವಿಜಯ್ ಕೆಮಿಸ್ಟ್ರೀ ನೋಡುಗರ ಗಮನಸೆಳೆಯುತ್ತಿದೆ. ಕನ್ನಡದಲ್ಲಿಯೂ ಅನಾವಣಗೊಂಡಿರುವ ಆರಾಧ್ಯ ಸಿಂಗಿಂಗ್ ಮಸ್ತಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರಿಚರಣ್ ಹಾಗೂ ಚಿನ್ಮಯಿ ಶ್ರೀಪಾದ್ ಧ್ವನಿಯಾಗಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಟ್ಯೂನ್ ಹಾಕಿದ್ದಾರೆ. ಈಗಾಗ್ಲೇ ರಿಲೀಸ್ ಆಗಿದೆ ನನ್ನ ರೋಜಾ ನೀನೇ ಎಂಬ ಹಾಡಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದ್ದು, ಈಗ ಆರಾಧ್ಯ ಗೀತೆಯ ಸರದಿ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಮಜಿಲಿ ಹಿಟ್ ನಿರ್ದೇಶಕ ಶಿವ ನರ್ವಣ ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ಘೋಷಣೆಗೆ ಕಾಯುತ್ತಿವೆ ಶಿವಣ್ಣನ ಸಾಲು ಸಾಲು ಸಿನಿಮಾಗಳು.

Nikita Agrawal

ಬಾಡಿ ಶೇಮಿಂಗ್ ಕುರಿತು ಅನುಭವಗಳನ್ನು ತೆರೆದಿಟ್ಟ ಅವಿಕಾ ಗೋರ್‌ ಹೇಳಿದ್ದೇನು ಗೊತ್ತಾ?

Nikita Agrawal

ಅಮೂಲ್ ಸಂಸ್ಥೆಯೂ ಮಾಡ್ತಿದೆ ಪುಷ್ಪ‌ ಚಿತ್ರದ ಸಾಮಿ‌ಸಾಂಗ್ ಜಪ !

Nikita Agrawal
Share via
Copy link
Powered by Social Snap