Karnataka Bhagya
Blogಅಂಕಣ

ಗಿಣಿರಾಮ ಸೀರಿಯಲ್ ಹೀರೋ ಹೊಸ ಸಿನಿಮಾಗೆ ‘ಉತ್ಸವ’ ಟೈಟಲ್

ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಕಥೆಗಳಿಂದ ಚಿತ್ರರಂಗಕ್ಕೆ ಹೊಸ ಮೆರಗು ಸಿಗುತ್ತಿದೆ. ಅಂಥಾದ್ದೇ‌ ಆವೇಗದಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ಉತ್ಸವ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಯುವ ನಿರ್ದೇಶಕರ ಆಗಮನವಾಗುತ್ತಿದೆ. ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅರುಣ್ ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಸದ್ದಿಲ್ಲದೆ ಶೂಟಿಂಗ್ ಮುಗಿಸಿರುವ ಉತ್ಸವ ಸಿನಿಮಾದಲ್ಲಿ ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದು, ಈ ಹಿಂದೆ ಆ ಎರಡು ವರ್ಷಗಳು, ಗಿಫ್ಟ್ ಬಾಕ್ಸ್ ಚಿತ್ರದಲ್ಲಿ ನಟಿಸಿದ್ದ ಇವರಿಗೆ ಇದು ಮೂರನೇ ಸಿನಿಮಾವಾಗಿದೆ. ಫೇಸ್ಟು ಪೇಸ್ ಸಿನಿಮಾ ಖ್ಯಾತಿಯ ಪೂರ್ವಿ ಜೋಷಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್, ಪ್ರಕಾಶ್ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ. ಪ್ರೇಮಕಥಾ ಹಂದರ ಹೊಂದಿರುವ ಉತ್ಸವ ಸಿನಿಮಾವನ್ನು ಅರಸ ಪ್ರೊಡಕ್ಷನ್ ನಡಿ ಉಷಾ ಶ್ರೀನಿವಾಸ ನಿರ್ಮಾಣ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಹಾಡುಗಳಿಗೆ ಎಮಿನಲ್ ಮಹಮ್ಮದ್ ಸಂಗೀತ ಒದಗಿಸಿದ್ದು, ಜಾವೀದ್ ಆಲಿ ಹಾಗೂ ಅಕಿಂತಾ ಕುಂಡು ಧ್ವನಿಯಾಗಿದ್ದಾರೆ. ಶಿವರಾಜ್ ಮೆಹೋ ಸಂಕಲನ, ಗೌತಮ್ ಮನು ಛಾಯಾಗ್ರಹಣ ಚಿತ್ರಕ್ಕಿದೆ. ಮನಾಲಿ ಹಾಗೂ ಗೋವಾದಲ್ಲಿ ಉತ್ಸವ ಶೂಟಿಂಗ್ ನಡೆಸಲಾಗಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

‘ಮೇಡ್ ಇನ್ ಚೈನಾ’ ಕಥೆ ಹೇಳಲು ಹೊರಟಿರೋ ನಾಗಭೂಷಣ.

Nikita Agrawal

ಒಟಿಟಿ ಕಡೆಗೆ ಹೆಜ್ಜೆ ಹಾಕಿದ್ದಾರೆ ‘ಮೇಜರ್’

Nikita Agrawal

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ,ಹಾಸ್ಟೆಲ್ ಒಳಗೆ ಸಿಕ್ಕಿಬಿದ್ದ ದೂದ್ ಪೇಡಾ ದಿಗಂತ್…!

kartik
Share via
Copy link
Powered by Social Snap