26.2 C
Bengaluru
March 28, 2026
Karnataka Bhagya
ಇತರೆ

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್

ಯಾದಗಿರಿ : ತುಂತುರು ನೀರಾವರಿ ಘಟಕಗಳಿಂದ ರೈತರು ಹೆಚ್ಚಿನ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮುಂದೇ ಬರಬೇಕೆಂದು ಶಾಸಕ‌ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯಿಂದ 2024-25 ನೇ ಸಾಲಿನ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಉತ್ಪಾದನಾ ಪದ್ದತಿ ಅಡಿಯಲ್ಲಿ 385 ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಣೆ ಮಾಡಿದರು.

ಈಗ 11 ಗ್ರಾಮಗಳ ರೈತರಿಗೆ ವಿತರಣೆ ಮಾಡಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಇವುಗಳನ್ನು ವಿತರಿಸಲಾಗುವುದೆಂದರು.
ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಮುಟ್ಟಿಸಬೇಕೆಂದು ಶಾಸಕರು ಸೂಚಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಮಾತನಾಡಿ, ಕೃಷಿಯಲ್ಲಿ ಬೆಳೆಗಳನ್ನು ಬೆಳೆಯಲು ತುಂತುರು ನೀರಾವರಿ ಘಟಕಗಳು ತುಂಬಾ ಅನುಕುಲವಾಗಿದ್ದು, ಸಕಾಲದಲ್ಲಿ ಮತ್ತು ಸರಿಯಾದ ಪ್ರಮಾಣದ ನೀರನ್ನು ಬೆಳೆಗಳಿಗೆ ಸಿಗುವುದರಿಂದ ರೈತರಿಗೆ ಹೆಚ್ಚಿನ ಇಳುವರಿ ಬರುತ್ತದೆ ಎಂದರು.

ಉತ್ತಮ ಇಳುವರಿ ಮತ್ತು ಆದಾಯವನ್ನು ನೀಡಲು ತುಂತುರು ನೀರಾವರಿ ಸಹಕಾರಿಯಾಗಿದ್ದು, ರೈತರ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ‌ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿಗಳಾದ ಯಾಮರೆಡ್ಡಿ, ಮದುಕಾಂತ, ಜಯಪ್ಪ, ಕಭೇರಿ ಅಧೀಕ್ಷಕರಾದ ವೆಂಕಟೇಶ ಎಂ ಹಿರೆನೂರ್, ಕೃಷಿ ಅಧಿಕಾರಿಗಳಾದ ಅಯ್ಯಣ್ಣ, ನರೇಶ ಇದ್ದರು.

ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ‌ ತುನ್ನೂರ್

Related posts

ವಿಭಿನ್ನವಾದ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ

Nikita Agrawal

ಹೋದ್ರೆ ಹೋಗ್ಲಿ ಬಿಡಿ ಹಾಡಿನ ಮೂಲಕ ಮತ್ತೆ ಎಂಟ್ರಿ ಕೊಟ್ಟ ಬ್ರೋ ಗೌಡ

Nikita Agrawal

ಉಪ್ಪಿ ಅಖಾಡ ಸೇರಿದ ಕೆಜಿಎಫ್ ಬೆಡಗಿ.

Nikita Agrawal

Leave a Comment

Share via
Copy link
Powered by Social Snap