Karnataka Bhagya
ಇತರೆ

ನೀರಿಗಾಗಿ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ

ನೀರಿಗಾಗಿ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ವಡಗೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಕುಡಿವ ನೀರಿಗಾಗಿ ಜನ ಜಾನುವಾರುಗಳ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ೨೪ ತಾಸುಗಳಲ್ಲಿ ಗ್ರಾಮದ ಸಮಸ್ಯೆಗಳು ಪರಿಹರಿಸದಿದ್ದರೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಎಚ್ಚರಿಸಿದ್ದಾರೆ.

ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರೊಂದಿಗೆ ಸೇರಿ ಪ್ರತಿಭಟನೆ ನಡೆಸಿ ಬಾರಕೋಲು, ಖಾಲಿ ಕೊಡ ಪ್ರದರ್ಶನ ಮಾಡಿದ ನಂತರ ಮಾತನಾಡಿ, ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ ತಗ್ಗು ಗುಂಡಿಗಳಲ್ಲಿ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ದನಕರುಗಳು ಇದೇ ಹೊಲಸು ನೀರು ಕುಡಿಯುತ್ತಿವೆ. ಇದರ ಜೊತೆಗೆ ಗ್ರಾಮದಲ್ಲಿ ಹಳೆ ಕಾಲದ ತೆರೆದ ಬಾವಿ ಇದ್ದು ಇದರಲ್ಲಿ ಸಾಕಷ್ಟು ಮಲೀನ ನೀರು ತುಂಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರ ಬಾಯಿಗೆ ಹೋಗದಂತೆ ಬಾಗಿಲು ನಿರ್ಮಿಸಿದರೆ ಸಾವುನೋವು ತಪ್ಪುತ್ತದೆ ಈ ಕಾರ್ಯ ಮಾಡಬೇಕು ಎಂದಿದ್ದಾರೆ.

ಇನ್ನು ಜೆಜೆಎಂ ಯೋಜನೆಯಡಿ ಆರು ತಿಂಗಳ ಹಿಂದೆಯೇ ನಿರ್ಮಿಸಿದ ಟ್ಯಾಂಕ್ ಅನಾಥವಾಗಿ ನಿಂತಿದೆ. ಇದಕ್ಕಾಗಿ ಅಳವಡಿಸಲಾಗಿದ್ದ ಪಂಪ್‌ಸೆಟ್ಟ ನ ಮೋಟರ್ ಅನ್ನು ಗ್ರಾಮ ಪಂಚಾಯಿತಿಯವರು ಜೆಜೆಎಂ ಗುತ್ತೇದಾರರು ಬಿಚ್ಚಿಕೊಂಡು ಹೋಗಿದ್ದಾರೆ. ಇದರಿಂದ ಈ  ಯೋಜನೆಯೂ ಗ್ರಾಮಕ್ಕೆ ಇದ್ದೂ ಇಲ್ಲದಂತಾಗಿದೆ. ಗ್ರಾಮದ ಬೊರವೆಲ್ ಗಳು ಕೆಟ್ಟ ಪರಿಣಾಮ ದೂರದ ಸರ್ಕಾರಿ ಶಾಲೆಯಲ್ಲಿರುವ ಬೋರವೆಲ್ ಕೈ ಪಂಪ್ ನಿಂದ ನೀರು ತರವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕುಡಿವ ನೀರಿಗೆ ಇನ್ನಷ್ಟು ಭೀಕರವಾಗಿದೆ. ರೈತರು ಹೊಲದಲ್ಲಿ ಸಜ್ಜೆ ಬೆಳೆಯ ರಾಶಿಗಾಗಿ ತೆರಳುತ್ತಿರುವುದರಿಂದ ಅಲ್ಲಿಯೂ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಶಾಲೆಯ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಮಕ್ಕಳು ಸಹ ಕುಡಿವ ನೀರಿನ ದಾಹದಿಂದ ಬಳಲುವಂತಾಗಿದೆ. ಶೀಘ್ರ ಹೋಲಿ ಹುಣ್ಣಿಮೆ ಇರುವುದರಿಂದ ಪ್ರತಿಯೊಂದ ಮನೆಗಳು ಸ್ವಚ್ಛತೆ ಮಾಡುವ ಹಿಂದಿನಿAದ ನಡೆದುಕೊಂಡು ಬಂದ ಸಂಪ್ರದಾಯ ಹಿನ್ನೆಲೆಯಲ್ಲಿ ಮನೆ ಹಾಗೂ ಎತ್ತುಗಳು ದನಗಳು ಮೈತೊಳೆಯುವ ಪದ್ಧತಿ ಇದ್ದು, ಈದೀಗ ನೀರಿಗೆ ಬರ ಉಂಟಾಗಿದೆ. ಇದರಿಂದ ಎಲ್ಲರಿಗೂ ಸಂಕಷ್ಟ ಬಂದೊದಗಿದೆ. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ತಮಗೆ ಇದಕ್ಕೆ ಸಂಬAಧವೇ ಇಲ್ಲವೆಂಬAತೆ ವರ್ತಿಸಿ ಎಸಿ ರೂಮಿನಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅತ್ತ ಗ್ರಾಮದಲ್ಲಿ ತ್ಯಾಜ್ಯ ನೀರು ರಸ್ತೆಗೆ ಹರಿದಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಸೊಳ್ಳೆಗಳ ಹಾವಳಿ ಮಿತಿಮೀರಿದೆ, ಇದಕ್ಕಾಗಿ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಫಾಗಿಂಗ್ ಮಾಡಬೇಕು ಕೂಡಲೇ ೨೪ ತಾಸಿನಲ್ಲಿಯೇ ಕ್ರಮ ಕೈಗೊಳ್ಳದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದಲ್ಲಿ ಸುಮಾರು ೫೨೦ ಮನೆಗಳು ಇದ್ದು ಸುಮಾರು ೨೩೦೦ ಜನಸಂಖ್ಯೆ ಇದ್ದು, ಅಂದಾಜು ೧೪೦೦ ಮತದಾರರು ಇದ್ದರೂ ತಾಪಂ ಇಓ, ಪಿಡಿಓಗಳು ಜೆಇಗಳು ಸೇರಿದಂತೆ ಅಧಿಕಾರಿಗಳು ನಿರ್ಲಕ್ಷö್ಯದಿಂದಾಗಿ ಕುಗ್ರಾಮವಾಗಿ ಮಾರ್ಪಟ್ಟಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದೊಡ್ಡಪ್ಪಗೌಡ, ಗೋವಿಂದಪ್ಪಗೌಡ, ಶರಣಪ್ಪ ಪೊಪಾ, ಮಲ್ಲಪ್ಪ, ನಿಂಗಪ್ಪ, ಪದ್ಮಣ್ಣ, ದೊಡ್ಡಪ್ಪ, ಚಂದ್ರಾಮ, ನಿಂಗಪ್ಪ, ಹಣಮಂತ್ರಾಯ ಶಿವಪ್ಪ, ಮಲ್ಲಮ್ಮ, ಶಾಂತಮ್, ದೇವಿಂದ್ರಮ್ಮ, ನಿಂಗಮ್ಮ, ದುರುಗಮ್ಮ, ಅಂಬ್ರಮ್ಮ, ದೇವಕೆಮ್ಮ, ದೇವಮ್ಮ, ಬಡ್ಡೆಮ್ಮ, ಮೌಲಮ್ಮ ಸೇರಿ ಅನೇಕರು ಇದ್ದರು.

Related posts

ಪುಟ್ಟಕ್ಕನ ಮಗಳಾಗಿ ಸಂಜನಾ ಬುರ್ಲಿ

Nikita Agrawal

ಮತ್ತೆ ಬರಲಿದ್ದಾನೆ ಸೂಪರ್ ಹೀರೋ ‘ಶಕ್ತಿಮಾನ್’

Nikita Agrawal

ಸುದೀಪ್ ಅವರೊಂದಿಗೆ ಸಿನಿಮಾ ಮಾಡುವುದು ನನ್ನ 26 ವರ್ಷಗಳ ಕನಸು – ಅನೂಪ್ ಭಂಡಾರಿ

Nikita Agrawal

Leave a Comment

Share via
Copy link
Powered by Social Snap