Karnataka Bhagya
ಕರ್ನಾಟಕ

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬಾಂಗ್ಲಾದೇಶದಲ್ಲಿ ನಡೆಯಿತ್ತಿರುವ ಹಿಂದೂಗಳ ಮೇಲಿನ ಆತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ಯಾದಗಿರಿ ನಗರದ ಆಂಜನೇಯ ದೇವಸ್ಥಾನದಿಂದ ಸುಭಾಷ್ ಚಂದ್ರ ಬೋಸ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಬಾಂಗ್ಲಾದಲ್ಲಿ ಹಿಂದುಗಳ ಪರವಾಗಿ ಹೋರಾಟ ನಡೆಸಿದ್ದಾರೆ ಎಂಬ ಕಾರಣಕ್ಕೆ ಇಸ್ಮ್ಕಾನ್‌ನ ಚಿನ್ಮಯ್ ಕೃಷ್ಣದಾಸ್ ಪ್ರಭು ಅವರನ್ನು ಬಂಧಿಸಿರುವುದು ಖಂಡನೀಯ. ಬಾಂಗ್ಲಾದ ಅಭಿವೃದ್ಧಿಗೆ ಭಾರತ ಸಹಕಾರ ನೀಡಿದೆ. ಕೋವಿಡ್ ಅವಧಿಯಲ್ಲೂ ನರೇಂದ್ರ ಮೋದಿ ಸರ್ಕಾರ ಬಾಂಗ್ಲಾದೇಶಕ್ಕೆ ನೆರವಾಗಿತ್ತು. ಆದರೆ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಬಾಂಗ್ಲಾದಲ್ಲಿ ಮತೀಯವಾದದ ಆಧಾರದಲ್ಲಿ ಹಿಂದುಗಳ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ. ಬಾಂಗ್ಲಾದ ಮಹಮ್ಮದ್ ಯೂನಸ್ ಸರ್ಕಾರ ಹಿಂಸಾಕೋರರ ಪರ ಹೇಳಿಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ರಾಯಚೂರು ಮಾತನಾಡಿದ ಅವರು ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಾಗೂ ಹಿಂದುಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಮೂಲಭೂತವಾದಿಗಳು ನಡೆಸುತ್ತಿರುವ ದಾಳಿ ಖಂಡನೀಯ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ತಾಂಡವವಾಡುತಿದ್ದು ಜಗತ್ತು ಅದರತ್ತ ಕಣ್ಣು ಹಾಯಿಸುತ್ತಿಲ್ಲ. ಅಲ್ಲಿನ ನೊಂದ ಹಿಂದುಗಳ ಪರವಾಗಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ,ಜಿಲ್ಲಾ ವಕ್ತಾರ ಹಣಮಂತ ಇಟಗಿ,ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ವೆಂಕಟರೆಡ್ಡಿ ಅಬ್ಬೆತುಮಕೂರು,ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ,ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ,ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ ಮತ್ತು ವಿಜಯಲಕ್ಷ್ಮಿ ನಾಯಕ, ಮಂಜುನಾಥ ದಾಸನಕೆರಿ,ವೀಣಾ ಮೋದಿ,ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರ,ಮೋನೇಶ ಬೆಳಿಗೇರ,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಅಪ್ಪಣ್ಣ ಜೈನ,ಶರಣುಗೌಡ ಅಲಿಪುರ,ಮಲ್ಲು ಕೊಲಿವಾಡ, ನಾಗಪ್ಪ ಗಚ್ಚಿನಮನಿ,ಭೀಮಬಾಯಿ ಶೆಂಡೀಗಿ, ಚಂದ್ರಕಲಾ ಕಿಲ್ಲಕೇರಿ,ಸ್ನೇಹ ರಾಸಳಕರ,ಕಲ್ಪನ ಜೈನ್,ಮರಲಿಂಗ ಕಿಲ್ಲಕೇರಿ,ವಿಕಾಸ ಚೌವ್ಹಾಣ್, ಮಲ್ಲು ಸ್ವಾಮಿ ಗುರುಸುಣಗಿ,ಚಂದ್ರಶೇಖರ ಕಡೆಸೂರ,ಬಸ್ಸು ಬಳಿಚಕ್ರ ಸೇರಿದಂತೆ ಅನೇಕ ಯುವ ಮೋರ್ಚಾ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರು ಇದ್ದರು..

ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ..

Related posts

“ಬಿಡುಗಡೆಗೂ ಮುನ್ನವೇ ಚಾರ್ಲಿ ನಮ್ಮನ್ನು ಗೆಲ್ಲಿಸಿದ್ದಾಳೆ”- ರಕ್ಷಿತ್ ಶೆಟ್ಟಿ.

Nikita Agrawal

ಮಹಾಸಭಾಕ್ಕೆ ಹಲವರ ನೇಮಕಸಂಘಟನೆ ಆನೆಬಲ : ಸುರೇಶ ಜಾಕಾ

Mahesh Kalal

ಹೊಸ ಚಿತ್ರದೊಂದಿಗೆ ಒಟಿಟಿಗೆ ಬರಲಿದ್ದಾರೆ ಸತೀಶ್ ನೀನಾಸಂ.

Nikita Agrawal

Leave a Comment

Share via
Copy link
Powered by Social Snap