Karnataka Bhagya
ಕರ್ನಾಟಕ

ಬಿಜೆಪಿ ಜೆಡಿಎಸ್ ಮೈತ್ರಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಬೆಂಬಲ

ಜಾಧವ್ ನಾಮಪತ್ರ ಸಲ್ಲಿಕೆಯಲ್ಲಿ ಶಾಸಕ ಕಂದಕೂರ ಭಾಗಿ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ರಾಯಚೂರು ಲೋಕಸಭಾ ಕ್ಷೇತ್ರ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರ ಹಾಗೂ ಸುರಪುರ ಉಪ ಚುನಾವಣೆ ಕ್ಷೇತ್ರಗಳಲ್ಲಿ ನಾನು ಸಂಪೂರ್ಣ ಸಮಯ ಕೊಟ್ಟು ಅವರ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತ್ತು ಸುರಪೂರ ವಿಧಾನಸಭೆ ಅಭ್ಯರ್ಥಿ ರಾಜುಗೌಡ ಕೂಡ ಭೇಟಿಯಾಗಿ ಬೆಂಬಲ ಕೋರಿದ್ದಾರೆ ಹಾಗೆ ನಮ್ಮ ರಾಜ್ಯ ಜೆಡಿಎಸ್ ನಾಯಕರು ಕೂಡ ನನ್ನ ಜೊತೆ ಚರ್ಚೆ ಮಾಡಿದ್ದು, ಮೈತ್ರಿ ಕುರಿತು ಪರ ವಿರೋಧ ಚರ್ಚೆ ಮಾಡಲಾಗಿ ಸುದೀರ್ಘವಾಗಿ ನಾಯಕರ ಜೊತೆ ಹಾಗೂ ಕುಟುಂಬದವರ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.

ಕಲಬುರಗಿ, ಯಾದಗಿರಿ ಜೆಡಿಎಸ್‌ನ ನಾಯಕರು ಕೂಡ ಒಟ್ಟಿಗೆ ಸೇರಿ ಸ್ಥಳಿಯ ಸಾಧಕ ಬಾಧಕಗಳ ಚರ್ಚೆ ನಡೆಸಿದ್ದು, ಮಾಜಿ ಸಚಿವರಾದ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ, ದೊಡ್ಡಪ್ಪಗೌಡ ನರಬೋಳಿ ಸೇರಿದಂತೆ ಹಲವು ನಾಯಕರ ಜೊತೆ ಚರ್ಚೆ ನಡೆಸಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಜೊತೆ ಮೈತ್ರಿಮಾಡಿಕೊಂಡ ಕಾರಣ ನನಗೆ ವೈಯಕ್ತಿಕವಾಗಿ ಅಸಮಧಾನವಿತ್ತು ಆದರೇ ನಮ್ಮ ರಾಜ್ಯದ ನಾಯಕರ ಆದೇಶದಂತೆ ನಡೆಯಬೇಕಾಗುತ್ತಿದ್ದು, ಅದರ ಜೊತೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜೆಯೇಂದ್ರ ಅವರು ನನಗೆ ಕರೆ ಮಾಡಿ  ನಾಳೆ ನಡೆಯುವ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರ ನಾಮಪತ್ರ ಸಲ್ಲಿಸಲು ತಮ್ಮ ಉಪಸ್ಥಿತಿ ಅಗತ್ಯವಿದೆ ಆದ್ದರಿಂದ ತಾವು ಆಗಮಿಸಬೇಕು ಎಂದು ಹೇಳಿದ್ದಾರೆ ನಾನು ಕೂಡ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.

ಮೈತ್ರಿ ಅನಿವಾರ್ಯತೆ ಇರುವುದನ್ನು ನಮ್ಮ ನಾಯಕರು ನನಗೆ ತಿಳಿಸಿದ್ದರಿಂದ ನಾನು ಜಾಧವ್ ನಾಮಿನೇಶನ್ ಸಂದರ್ಭದಲ್ಲಿ ನಾನು ಉಪಸ್ಥಿತಿ ಇರುತ್ತಿದ್ದು ಬಿಜೆಪಿಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.

ಕಾರ್ಯಕರ್ತರ ಅಭಯ : ತಂದೆಯವರ ಅನುಪಸ್ಥಿತಿಯಲ್ಲಿ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ ಜೆಡಿಎಸ್ ಬಿಜೆಪಿ ಹೊಂದಾಣಿಕೆಯಾದ ಮೇಲೆ ಮೈತ್ರಿ ಸಾಧಕ ಬಾಧಕಗಳ ಚರ್ಚೆ ನಡೆಸಲಾಗಿತ್ತು. ಗುರುಮಠಕಲ್ ಕ್ಷೇತ್ರದ ಜನರೊಂದಿಗೆ ಚರ್ಚೆ ಮಾಡಿ ಅವರೊಡನೆ ಕೇಳಿದಾಗ ನಿಮ್ಮ ನಿರ್ಧಾರ ಕ್ಕೆ ಬದ್ದರಾಗಿದ್ದೇವೆ ಎಂದು ತಿಳಿಸಿದ್ದು, ಜೆಡಿಎಸ್ ಪಕ್ಷದ ಗುರಮಿಠಕಲ್ ಮತಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದಾಗ ನೀವು ಶಾಸಕರಾಗಿ ರಾಜಕೀಯವಾಗಿ ಏನೆ ನಿರ್ದಾರ ತೆಗೆದುಕೊಂಡರು ಅದಕ್ಕೆ ನಾವು ಬದ್ದರಿದ್ದೇವೆ ಎಂದು ನಮ್ಮ ಪಕ್ಷದ  ಕಾರ್ಯಕರ್ತರು ಹೇಳಿದ್ದಾರೆ ಎಂದು ಕಂದಕೂರ ತಿಳಿಸಿದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿದ್ದರು.

Related posts

“ಪೆಟ್ರೋಮ್ಯಾಕ್ಸ್”ಗೆ ನಿಗದಿಯಾಯ್ತು ದಿನಾಂಕ.

Nikita Agrawal

ವಿಭಿನ್ನ ಪ್ರಯತ್ನದತ್ತ ಮುಖ ಮಾಡಿದ ರಂಗಿತರಂಗ ಬೆಡಗಿ

Nikita Agrawal

ಘಟಾನುಘಟಿ ಸಿನಿಮಾಗಳನ್ನ ಹಿಂದಿಕ್ಕಿದ ‘777 ಚಾರ್ಲಿ’.

Nikita Agrawal

Leave a Comment

Share via
Copy link
Powered by Social Snap