Karnataka Bhagya
Blogಅಂಕಣ

ಮತ್ತೆ ಮದುವೆ ನೈಜ ಕಥೆ

ರಾಜ್ಯಾದ್ಯಂತ ಮತ್ತೆ ಮದುವೆ ಸಿನಿಮಾ ಬಿಡುಗಡೆಯಾಗಿ ವೀಕ್ಷಕರಿಂದ ಉತ್ತಮ‌ ಪ್ರತಿಕ್ರಿಯೆ ಪಡೆಯುತ್ತಿದೆ‌.ಪ್ಯಾಮಿಲಿ ಕಂಟೆಂಟ್ ಸಿನಿಮಾ‌ ಇದಾಗಿದ್ದು ಮನೆಯ ಒಡೆಯ ಮತ್ತು ಒಡತಿ ಕೂತು ನೋಡುವಂತ ಸಿನಿಮಾ ಇದಾಗಿದೆ.ಸಣ್ಣ ಸಣ್ಣ ವಿಷಯಕ್ಕು ಗಂಡ ಹೆಂಡತಿಯರ ನಡುವೆ ಬಿರುಕು ಉಂಟಾಗಿ ಡಿವೋರ್ಸ್ನ ಕಡೆ ಮುಖ ಮಾಡುವವರಿಗೆ ಈ ಸಿನಿಮಾ‌ ಅರ್ಪಣೆ.ಒಂದು ಗಂಡು ಹೆಣ್ಣನ್ನ ಮದುವೆಯಾದ ಮಾತ್ರಕ್ಕೆ ಎಲ್ಲವು ಮುಗಿದಂತೆ ಅಲ್ಲ. ಹೆಂಡತಿ ಎಂದರೆ ಅರ್ಧಾಂಗಿ ಇದ್ದಂತೆ ಕೇವಲ ಮನೆ ಕೆಲಸ ಅಷ್ಟೇ ಅಲ್ಲದೆ ಗಂಡನ ಕಷ್ಟ ಸುಖದಲ್ಲಿಯು ಅವಳಿಗೆ ಹಕ್ಕಿದೆ ಎಂಬುದು ಕಥೆಯ ಸಾರಾಂಶ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ಎಕ್ಸ್ ಕ್ಲೂಸಿವ್ ಕಥೆಯನ್ನೆ ತೆರೆಯ ಮೇಲೆ ತರಲಾಗಿದೆ. ಪ್ರೀತಿ ಯಾವಾಗ ಯಾರ ಮೇಲಾದರು ಹುಟ್ಟಬಹುದು, ಪ್ರೀತಿಗೆ ವಯಸ್ಸಿನ ಕಂಡೀಶನ್ ಇಲ್ಲ ಎಂಬದು ಮೇಲ್ನೋಟಕ್ಕೆ ಕಾಣುತ್ತದೆ.ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನ ಪವಿತ್ರಾ ಲೋಕೇಶ್ ,ನರೇಶ್ ತುಂಬಾ ಅಧ್ಬತವಾಗಿ ಮಾಡಿದ್ದಾರೆ. ಕಾನೂನಿನ‌ ಚೌಕಟ್ಟಿನಲ್ಲಿ ಹೆಣ್ಣು ಇಷ್ಟಪಟ್ಟವರೊಡನೆ ಸಂಸಾರ ಮಾಡುಬಹುದು ಎಂಬುದನ್ನ ನಿರ್ದೇಶಕರು ತುಂಬಾ ಸ್ಪಷ್ಟವಾಗಿ ತೋರಿಸಿದ್ದಾರೆ.ನಟ ನರೇಶ್ ಮಾತನಾಡಿ.ಒಂದೋಳ್ಳೆ ಸಂದೇಶ ಇರುವ ಸಿನಿಮಾವನ್ನ ನಾವು ಮಾಡಿದ್ದೇವೆ.ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ನಾನು ಸಿನಿಮಾದಲ್ಲಿ ಮಾತಾಡಿದ್ದೇನೆ. ಪ್ರತಿಯೊಬ್ಬರಿಗು ತಮಗೆ ಇಷ್ಟ ಬಂದಂತೆ ಬದುಕುವ ಹಕ್ಕಿದೆ.ಈ ಸಿನಿಮಾಗಾಗಿ ಹಗಲು ರಾತ್ರಿ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರಿಗೆ ಧನ್ಯವಾದ ಹೇಳುತ್ತೇನೆ.ದಯಮಾಡಿ ಪ್ರತಿಯೊಬ್ಬರು ಸಿನಿಮಾವನ್ನ ಥಿಯೇಟರ್ ಗೆ ಬಂದು ನೋಡಿ ಎಂದರು.

Related posts

‘ಕಿರಿಕ್ ಪಾರ್ಟಿ 2’ ನಲ್ಲಿ ಏನಾಗಲಿದೆ ಕರ್ಣನ ಕಥೆ!! ರಕ್ಷಿತ್ ಶೆಟ್ಟಿ ಮಾತು.

Nikita Agrawal

ಒಂದೇ ಸ್ಕ್ರೀನ್ ಮೇಲೆ ಬಾಲಿವುಡ್ ಸ್ಟಾರ್ ನಟರು

Nikita Agrawal

ಬಾಯ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ಗುಟ್ಟನ್ನು ರಟ್ಟು ಮಾಡಿದ ಶ್ರುತಿ ಹಾಸನ್

Nikita Agrawal
Share via
Copy link
Powered by Social Snap