ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಸುರೇಶ ಲೇಂಗಟಿ ಆಯ್ಕೆ….
ಕರ್ನಾಟಕ ರಾಜ್ಯ ಸರಕಾರಿ ಮಹಿಳೆಯರ ನೌಕರ ಸಂಘ (ರಿ) ಬೆಂಗಳೂರು ಅವರು ಕೊಡ ಮಾಡುವ ರಾಣಿ ಅಬ್ಬಕ್ಕದೇವಿ ರಾಜ್ಯ ಪ್ರಶಸ್ತಿಗೆ ಕಮಲಾಪುರ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಸುರೇಶ್ ಲೇಂಗಟಿ ಆಯ್ಕೆಯಾಗಿದ್ದಾರೆ.
ಮಾರ್ಚ್ 9 ರಂದು ಕಲಬುರ್ಗಿ ನಗರದ ಪೂಜ್ಯ ಡಾ. ಬಸವರಾಜ ಅಪ್ಪ ಮೆಮೋರಿಯಲ್ ಹಾಲ್ , ಅಪ್ಪ ಪಬ್ಲಿಕ್ ಶಾಲೆಯಲ್ಲಿ ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಕಲ್ಬುರ್ಗಿ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ, ಸುಭದ್ರ ರೇಖೆ ಕವನ ಸಂಕಲನ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ರಾಣಿ ಅಬ್ಬಕ್ಕದೇವಿ ರಾಜ್ಯ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಪತ್ರಿಕಾ ರಂಗದಲ್ಲಿ ಸುರೇಶ ಲೇಂಗಟಿ ಅವರ ಗ್ರಾಮೀಣ ಪ್ರದೇಶಗಳಲ್ಲಿನ ಜನಪರ ವರದಿಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಮಹಿಳೆಯರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ನಂದಿನಿ ಸನಬಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
