Karnataka Bhagya
Blogಅಂಕಣ

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ,ಹಾಸ್ಟೆಲ್ ಒಳಗೆ ಸಿಕ್ಕಿಬಿದ್ದ ದೂದ್ ಪೇಡಾ ದಿಗಂತ್…!

ಇತ್ತಿಚಿನ‌ ದಿನಗಳಲ್ಲಿ ಸಿನಿಮಾ ಮಾಡುವುದು ಊಹೆಗೂ ನಿಲುಕದ ವಿಷಯವಾಗಿದೆ. ದೊಡ್ಡದಾಗಿ ಸಿನಿಮಾ ಮಾಡಬೇಕು ಸಿನಿಮವಾದ ಬಳಿಕ ಸಿನಿಮಾದ ಪ್ರಚಾರ ದೊಡ್ಡ ಮಟ್ಟದಲ್ಲಿ ಮಾಡಬೇಕು, ಪ್ರತಿ ವೀಕ್ಷಕನಿಗೂ ಸಿನಿಮಾದ ಮುಟ್ಟ ಬೇಕು ಅಂತಾ ಈಗಲೂ ಹಗಲು ರಾತ್ರಿ ಸಿನಿಮಾಗಾಗಿ‌ ಕಷ್ಟ ಪಡುವವರನ್ನ ನಾವು ಕಂಡಿದ್ದೇವೆ.

ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವುದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾತಂಡ.
ಕೊನೆಗು ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ ಚಿತ್ರ ತಂಡಕ್ಕೆ ಸ್ಟಾರ್ ನಟ ದೂದ್ ಪೇಡಾ ದಿಗಂತ್ ಅಡ್ಮಿಶನ್ ಆಗಿದ್ದಾರೆ. ಇದರಿಂದ ಹಾಸ್ಟೆಲ್ ಹುಡುಗರಿಗೆ ದೂದ್ ಪೇಡಾ ಸಿಹಿ ಸಿಕ್ಕಿದೆ. ಅಂದರೆ ದೂದ್ ಪೇಡಾ ದಿಗಂತ್ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್ ಬೆಂಬಲ ಕೊಟ್ಟಿರುವ ಈ ಚಿತ್ರದಲ್ಲಿ ದಿಗ್ಗಿ ಬಣ್ಣ ಹಚ್ಚಿದ್ದಾರೆ. ಆದ್ರೆ ದಿಗ್ಗಿಯ ಪಾತ್ರ ಏನು ಎಂಬುದನ್ನ ಚಿತ್ರತಂಡ ಗೌಪ್ಯವಾಗಿಟ್ಟಿದೆ.
ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದಾರೆ.

ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರಕ್ಕೆ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ.
ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ.ಪ್ರತಿ ಬಾರಿ ಯುನಿಕ್ ಕಾನ್ಸಎಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಖಲನವಿರಲಿದೆ.

ನ್ಯೂಸ್ ಡೆಸ್ಕ್ ಫಿಲ್ಮಿ ಸ್ಕೂಪ್

Related posts

ಕತ್ರಿನಾ‌-ವಿಕ್ಕಿ ಕೌಶಲ್ ಹೊಸ‌ಮನೆಯ ಬಾಡಿಗೆ ಕೇಳಿ ಶಾಕ್ ಆದವರೇ ಹೆಚ್ಚು!

Nikita Agrawal

ಪ್ರಶಸ್ತಿ-ಪುರಸ್ಕಾರಗಳೆಡೆಗೆ ಸಾಗುತ್ತಿರೋ ‘ಗರುಡ ಗಮನ’

Nikita Agrawal

ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರ

Karnatakabhagya
Share via
Copy link
Powered by Social Snap