Karnataka Bhagya

ಕೆವಿಎನ್ ತೆಕ್ಕೆಗೆ ಬಾಹುಬಲಿ ಸೂತ್ರಧಾರ ರಾಜಮೌಳಿಯ ‘RRR’ ಸಿನಿಮಾ ವಿತರಣೆ ಹಕ್ಕು…

ಬಾಹುಬಲಿ ಸೃಷ್ಟಿಕರ್ತ ಎಸ್.ಎಸ್ ರಾಜಮೌಳಿ ಸಿನಿಮಾ ಅಂದ್ರೆ ಜಗದಗಲ‌ ನಿರೀಕ್ಷೆ ಇರುತ್ತೆ. ಈಗ ಅಷ್ಟೇ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್ ಆರ್ ಆರ್. ಪೋಸ್ಟರ್, ಮೇಕಿಂಗ್, ಟೀಸರ್ ಹಾಗೂ ಸಾಂಗ್ ಮೂಲಕ ಕುತೂಹಲದ ಕಾರ್ಮೋಡದಂತಿರುವ ಆರ್ ಆರ್ ಆರ್ ಅಂಗಳದಿಂದ ಬಡಾ ಬ್ರೇಕಿಂಗ್‌ ನ್ಯೂಸ್ ವೊಂದು‌ ರಿವೀಲ್ ಆಗಿದೆ.


ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್, ಬ್ಯೂಟಿಫುಲ್ ಆಲಿಯಾ ಭಟ್ ಹೀಗೆ ಬಹುದೊಡ್ಡ ತಾರಾಗಣ‌ ನಟಿಸಿರುವ ತ್ರಿಬಲ್ ಆರ್ ಸಿನಿಮಾ ಕನ್ನಡ, ತೆಲುಗು, ಹಿಂದಿ,‌ತಮಿಳು ಹಾಗೂ‌ ಮಾಲಯಾಳಂ ಭಾಷೆಯಲ್ಲಿ‌ ಮೂಡಿ ಬರ್ತಿದೆ. ಪಂಚ ಭಾಷೆಯಲ್ಲಿ ತೆರೆಗಪ್ಪಳಿಸಲಿರುವ ಆರ್ ಆರ್ ಆರ್ ಸಿನಿಮಾದ‌ ಕರ್ನಾಟಕ ಡಿಸ್ಟ್ರಿಬ್ಯೂಷನ್ ಹಕ್ಕು‌ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತೆಕ್ಕೆಗೆ ಸೇರ್ಪಡೆಯಾಗಿದೆ.
ರಾಜ್ಯಾದ್ಯಂತ ಆರ್ ಆರ್ ಆರ್ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ಕೆವಿಎನ್ ಪ್ರೊಡಕ್ಷನ್ ಹೊತ್ತುಕೊಂಡಿದೆ.

ಈಗಾಗ್ಲೇ ಕೆವಿಎನ್ ಪ್ರೊಡಕ್ಷನ್ ಹೌಸ್ , ಸಖತ್, ಬೈ‌ ಟು‌‌ ಲವ್ ಹಾಗೂ ನಿಖಿಲ್ ಕುಮಾರಸ್ವಾಮಿ, ಧ್ರುವ ಸರ್ಜಾಗೂ ಒಂದು ಸಿನಿಮಾ ಮಾಡ್ತಿದೆ. ಈ ಸಿನಿಮಾಗಳ ನಿರ್ಮಾಣದ‌ ಜೊತೆಗೆ ವಿತರಣೆ ಹಕ್ಕಿನ ಜವಾಬ್ದಾರಿಯನ್ನು ಕೆವಿಎನ್ ಅದ್ಭುತವಾಗಿ‌ ನಿರ್ವಹಿಸ್ತಿದೆ.


ಒಂದ್ಕಡೆ ಆರ್ ಆರ್ ಆರ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ಪ್ರೊಡಕ್ಷನ್ ಹೌಸ್ ಸೇರ್ಪಡೆಯಾದ್ರೆ ಮತ್ತೊಂದ್ಕಡೆ ಆರ್ ಆರ್ ಆರ್ ಸಿನಿಮಾದ ಹಳ್ಳಿ ನಾಟು ಯೂಟ್ಯೂಬ್ ನಲ್ಲಿ‌ ಧೂಳ್ ಎಬ್ಬಿಸ್ತಿದೆ. ರಾಮ್ ಚರಣ್ ಹಾಗೂ ತಾರಕ್ ಭರ್ಜರಿ ಸ್ಟೆಪ್ಸ್ ಜೊತೆಗೆ ಕೀರವಾಣಿ‌ ಮ್ಯೂಸಿಕ್ ಕಿಕ್ ಮತ್ತೊಂದು‌ ಲೆವೆಲ್. ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿರುವ ಆರ್ ಆರ್ ಆರ್ ಸಿನಿಮಾ ಜನವರಿ 7 ರಂದು ವಿಶ್ವಾದ್ಯಂತ ತೆರೆಗೆ ಬರ್ತಿದೆ

Scroll to Top
Share via
Copy link
Powered by Social Snap