26.2 C
Bengaluru
October 26, 2026
Karnataka Bhagya
ರಾಜಕೀಯ

ಸಾವಯವ ಕೃಷಿ, ಸ್ಥಳೀಯ ಉತ್ಪನ್ನಗಳ ಬಳಕೆ, ಜಲ ಸಂರಕ್ಷಣೆಗೆ ಮೋದಿ ಒತ್ತು

ಸಾವಯವ ಕೃಷಿ, ಸ್ಥಳೀಯ ಉತ್ಪನ್ನಗಳ ಬಳಕೆ, ಜಲ ಸಂರಕ್ಷಣೆಗೆ ಮೋದಿ ಒತ್ತು

ರೈತರೊಂದಿಗೆ ‘ಮನ್ ಕಿ ಬಾತ್’ ವೀಕ್ಷಿಸಿದ ರಾಚಣ್ಣಗೌಡ ಮುದ್ನಾಳ

ಸಾವಯವ ಕೃಷಿ, ಸ್ಥಳೀಯ ಉತ್ಪನ್ನಗಳ ಬಳಕೆ, ಜಲ ಸಂರಕ್ಷಣೆಗೆ ಮೋದಿ ಒತ್ತು

ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ಹುಲ್ಕಲ್ ಗ್ರಾಮದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಅವರು ಭಾನುವಾರ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ 139ನೇ ಸಂಚಿಕೆಯನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಸಾಧಕರು, ರೈತರ ಪರಿಶ್ರಮ, ಸ್ವದೇಶಿ ಉತ್ಪನ್ನಗಳ ಬಳಕೆ, ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನದ ಬಳಕೆಯಿಂದ ಜನಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಪ್ರಧಾನಿ ಹಂಚಿಕೊAಡ ವಿಚಾರಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಚಣ್ಣಗೌಡ ಮುದ್ನಾಳ, ‘ಮನ್ ಕಿ ಬಾತ್’ ಕಾರ್ಯಕ್ರಮದ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸಾಧನೆ ಮಾಡುತ್ತಿರುವ ಸಾಮಾನ್ಯ ಜನರ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸುತ್ತಿದ್ದಾರೆ. ರೈತರ ಪರಿಶ್ರಮ, ಗ್ರಾಮೀಣ ಜನರ ಕೌಶಲ ಹಾಗೂ ಸಮಾಜಮುಖಿ ಕಾರ್ಯಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಿಕೆ ದೊರೆಯುತ್ತಿರುವುದು ವಿಶೇಷ. ಇಂತಹ ಕಾರ್ಯಕ್ರಮಗಳು ರೈತರು ಮತ್ತು ಯುವಜನರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ‘ನವ್ ತ್ರಿಂಜನ್’ ಉಪಕ್ರಮದಡಿ ರಾಸಾಯನಿಕಗಳ ಬಳಕೆಯಿಲ್ಲದೆ ಸಾವಯವ ಹತ್ತಿ ಬೆಳೆಯುತ್ತಿರುವ ಪ್ರಯತ್ನವನ್ನು ಪ್ರಧಾನಿ ಪ್ರಸ್ತಾಪಿಸಿದರು. ನೈಸರ್ಗಿಕ ಬಣ್ಣದ ಹತ್ತಿ ಉತ್ಪಾದನೆ ಹಾಗೂ ಸಾಂಪ್ರದಾಯಿಕ ನೇಕಾರಿಕೆ ಕೌಶಲಕ್ಕೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿರುವುದನ್ನು ವಿವರಿಸಿದರು.

ಕರ್ನಾಟಕದ ಕಲಬುರಗಿಯಲ್ಲಿ ಬೆಳೆಯುವ ತೊಗರಿ ಬೇಳೆ ವಿದೇಶಗಳಿಗೆ ರಫ್ತಾಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶಗಳು ದೊರೆಯುತ್ತಿರುವುದನ್ನು ತಿಳಿಸಿದರು. ಬಿಹಾರದ ಪೂರ್ಣಿಯಾದ ಮಖಾನಾ ಉತ್ಪನ್ನವೂ ವಿದೇಶಿ ಮಾರುಕಟ್ಟೆ ತಲುಪುತ್ತಿರುವುದನ್ನು ಪ್ರಸ್ತಾಪಿಸಿದರು.

ಸ್ಥಳೀಯ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವುದು ಅಗತ್ಯವಾಗಿದೆ. ಗುಣಮಟ್ಟದ ಉತ್ಪಾದನೆ, ಸೂಕ್ತ ಪ್ಯಾಕೇಜಿಂಗ್ ಮತ್ತು ಮೌಲ್ಯವರ್ಧನೆಗೆ ಆದ್ಯತೆ ನೀಡಿದರೆ ರೈತರ ಆದಾಯ ಹೆಚ್ಚಿಸಲು ಅವಕಾಶಗಳಿವೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರು, ಸಣ್ಣ ಉದ್ಯಮಿಗಳು ಹಾಗೂ ಕುಶಲಕರ್ಮಿಗಳಿಗೆ ಬೆಂಬಲ ನೀಡಬೇಕು ಎಂದು ಮುದ್ನಾಳ ಹೇಳಿದರು.

ಉತ್ತರಾಖಂಡದ ತೆಹ್ರಿ ಗಢ್ವಾಲ್ ಪ್ರದೇಶದಲ್ಲಿ ಹೆವಲ್ ನದಿಯ ಪುನರುಜ್ಜೀವನಕ್ಕಾಗಿ ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರು ಕೈಗೊಂಡ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ ಹಾಗೂ ಸಸಿಗಳನ್ನು ನೆಡುವ ಮೂಲಕ ನದಿ ಮತ್ತು ನೈಸರ್ಗಿಕ ಜಲಮೂಲಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಜಲ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ನೀರಿನ ಮೂಲಗಳನ್ನು ಉಳಿಸುವುದು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದರು.

ಮೇಘಾಲಯದ ಖಂಡುಲಿ ಗ್ರಾಮದಲ್ಲಿ ಸಿರಿಧಾನ್ಯಗಳಿಂದ ಕುಕೀಸ್, ಕೇಕ್, ಮಫಿನ್ ಹಾಗೂ ಮಕ್ಕಳ ಆಹಾರ ಪದಾರ್ಥಗಳನ್ನು ತಯಾರಿಸುವ ಮೂಲಕ ಅವುಗಳ ಬೇಡಿಕೆ ಹೆಚ್ಚಿಸಿರುವ ಪ್ರಯತ್ನವನ್ನು ಪ್ರಧಾನಿ ಪ್ರಸ್ತಾಪಿಸಿದರು. ನಾಗಾಲ್ಯಾಂಡ್‌ನ ಕೆಜೋಮಾ ಗ್ರಾಮದಲ್ಲಿ ಸಿರಿಧಾನ್ಯ ಕೃಷಿಯನ್ನು ಪುನರಾರಂಭಿಸಿರುವುದನ್ನೂ ಉಲ್ಲೇಖಿಸಿದರು. ಸಾಂಪ್ರದಾಯಿಕ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವುದರಿಂದ ರೈತರಿಗೆ ಹೆಚ್ಚುವರಿ ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂಬುದನ್ನು ಈ ಪ್ರಯತ್ನಗಳು ತೋರಿಸುತ್ತವೆ.

‘ಇ-ಸಂಜೀವಿನಿ’ ಟೆಲಿಕನ್ಸಲ್ಟೇಶನ್ ಸೇವೆಯ ಮೂಲಕ ಕೋಟ್ಯಂತರ ವೈದ್ಯಕೀಯ ಸಮಾಲೋಚನೆಗಳು ನಡೆದಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ದೂರದ ಪ್ರದೇಶಗಳ ಜನರಿಗೂ ತಜ್ಞ ವೈದ್ಯರ ಸಲಹೆ ದೊರೆಯಲು ತಂತ್ರಜ್ಞಾನ ನೆರವಾಗುತ್ತಿದೆ ಎಂದು ತಿಳಿಸಿದರು. ಯುವಜನರು ಕೃತಕ ಬುದ್ಧಿಮತ್ತೆ, ವೈದ್ಯಕೀಯ ಸಂಶೋಧನೆ, ವೇಗವಾಗಿ ಚಾರ್ಜ್ ಆಗುವ ಬ್ಯಾಟರಿಗಳು ಸೇರಿದಂತೆ ನೂತನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಾಡುತ್ತಿರುವ ಪ್ರಯತ್ನಗಳ ಬಗ್ಗೆಯೂ ಮಾತನಾಡಿದರು.

ಖಾದಿ ಉತ್ಪನ್ನಗಳ ಬಳಕೆ, ಸ್ಥಳೀಯ ಕುಶಲಕರ್ಮಿಗಳ ಕೌಶಲಕ್ಕೆ ಪ್ರೋತ್ಸಾಹ, ಅಂಗಾAಗ ದಾನ, ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ‘ರನ್ ಫಾರ್ ಯೂನಿಟಿ’ ಹಾಗೂ ಮಹರ್ಷಿ ವಾಲ್ಮೀಕಿ ಅವರ ಜೀವನಮೌಲ್ಯಗಳ ಕುರಿತ ವಿಚಾರಗಳನ್ನೂ ಕಾರ್ಯಕ್ರಮದಲ್ಲಿ ಹಂಚಿಕೊAಡರು.

ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಸಾಂಪ್ರದಾಯಿಕ ಕೃಷಿ ಜ್ಞಾನಕ್ಕೂ ಮಹತ್ವ ನೀಡಬೇಕು. ನೀರಿನ ಸಂರಕ್ಷಣೆ, ಸ್ಥಳೀಯ ಉತ್ಪನ್ನಗಳ ಬಳಕೆ ಮತ್ತು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು. ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದೆ ಎಂದು ರಾಚಣ್ಣಗೌಡ ಮುದ್ನಾಳ ಹೇಳಿದರು.

ಈ ಸಂದರ್ಭದಲ್ಲಿ ನೀಲಕಂಠ ಗುತ್ತೇದಾರ್, ದೊಡ್ಡಪ್ಪ ಬಿ. ನಾಯಕ್, ದೇವರಾಜ್ ಎಚ್., ಹೊನ್ನಪ್ಪ ಅಗಸಿಮನಿ, ತಿಪ್ಪಣ್ಣ ಪೂಜಾರಿ, ದೇವೇಂದ್ರಪ್ಪ ಚೆನ್ನುರ, ಹನುಮಂತ ಅಗಸಿಮನಿ, ದೇಸಾಯಿ ಅಗಸಿಮನಿ, ಸಿದ್ದಲಿಂಗಪ್ಪ ರಾಮಸ್ವಾಮಿ, ದಂಡಪ್ಪ ಅಗಸಿಮನಿ, ಮಾನಪ್ಪ ನಾಟೇಕರ್, ಹುಲಿಯಪ್ಪ ಗುರಸಣಗಿ, ಶಿವಕುಮಾರ ಗುರಸಣಗಿ, ತಿಪ್ಪಣ್ಣ ಕಾವಲಿ, ಬಸಲಿಂಗಪ್ಪ ಸಾಧು, ಬಾಲಪ್ಪ ವಡರು, ಸಾಬಣ್ಣ ಅಗಸಿಮನಿ, ಹುಸೇನ್ ಪಾಟೀಲ್, ರಾಮಣ್ಣ ಠಾಣಗುಂಧಿ, ಹಣಮಂತ ಭಜಂತ್ರಿ, ವೆಂಕಟರೆಡ್ಡಿ ಗುರಸಣಗಿ, ಸುರೇಶ್ ರಾಥೋಡ್, ಮಲ್ಲಪ್ಪ ಸಣ್ಣ ಸಾಬಣ್ಣನೂರ, ವಿಶ್ವರಾಧ್ಯ ನಾಯಕ್, ದೇವಪ್ಪ ಅಗಸಿಮನಿ ಮೇಸ್ತ್ರಿ, ಹಣಮಂತ ಪೂಜಾರಿ ಸೇರಿದಂತೆ ಇತರರು ಇದ್ದರು.

ಸಾವಯವ ಕೃಷಿ, ಸ್ಥಳೀಯ ಉತ್ಪನ್ನಗಳ ಬಳಕೆ, ಜಲ ಸಂರಕ್ಷಣೆಗೆ ಮೋದಿ ಒತ್ತು

Related posts

ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್

Nikita Agrawal

ಶಿವರಾಜ್ ಕುಮಾರ್ ಎನರ್ಜಿ ಲೆವೆಲ್ ಗೆ ಯಾರೂ ಸರಿಸಾಟಿಯಿಲ್ಲ ಎಂದು ಶ್ವೇತಾ ಚೆಂಗಪ್ಪ ಹೇಳಿದ್ಯಾಕೆ ಗೊತ್ತಾ?

Nikita Agrawal

‘ಬೈ ಟು ಲವ್’ ಬಿಡುಗಡೆಗೆ ಡೇಟ್ ಫಿಕ್ಸ್. !

Nikita Agrawal

Leave a Comment

Share via
Copy link
Powered by Social Snap