ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ-ವೀರಶೈವ ಮಹಾಸಭಾ ಖಂಡನೆ
ಕರ್ನಾಟಕ ಭಾಗ್ಯ ಸುದ್ದಿ ಯಾದಗಿರಿ : ಹಲಕರ್ಟಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಲಕರ್ಟಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಕಳೆದ ವರ್ಷ ಬಸವ ಜಯಂತಿಯAದು ಬಸವೇಶ್ವರ ಭಾವಚಿತ್ರವುಳ್ಳ ದೊಡ್ಡ ಫ್ಲೆಕ್ಸ್ ಕಟ್ಟಲಾಗಿತ್ತು. ಮಂಗಳವಾರ ರಾತ್ರಿ ವೇಳೆ ಕಿಡಿಗೇಡಿಗಳು ಫೋಟೋದ ಹಲವೆಡೆ ಸಿಗರೇಟ್‌ನಿಂದ ಸುಟ್ಟಿz್ದÁರೆ. ಮಹಾತ್ಮರ ಭಾವಚಿತ್ರಗಳಿಗೆ ನಿರಂತರ ಅವಮಾನವಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದವರನ್ನು ಪತ್ತೆ ಹಚ್ಚಿ, ಉಗ್ರಶಿಕ್ಷೆ ನೀಡಬೇಕು ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಹಾಸಭಾ ಪದಾಧಿಕಾರಿಗಳು ಒತ್ತಾಯಿಸಿದರು.
೧೨ನೇ ಶತಮಾನದ ಮಹಾನ್ ಶರಣ ವಿಶ್ವಗುರು ಬಸವಣ್ಣ, ಇಡೀ ಜಗತ್ತಿಗೆ ದಾರ್ಶನಿಕರು. ವಿಕೃತ ಮನಸ್ಸಿನವರು ಬಸವೇಶ್ವರರ ಭಾವಚಿತ್ರವನ್ನು ಸುಟ್ಟಿದ್ದಾರೆ. ಇದು ಸರಿಯಲ್ಲ, ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಇಲ್ಲದೆ ಹೋದರೆ ಎಲ್ಲೆಡೆ ಹೋರಾಟ ಮಾಡಬೇಕಾಗುತ್ತದೆ. ಶ್ರೇಷ್ಠರ ಮೂರ್ತಿ, ಭಾವಚಿತ್ರಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಸಮಾಜದ ಮುಖಂಡರಾದ ಅಯ್ಯಣ್ಣ ಹುಂಡೇಕಾರ, ಬಸವಂತ್ರಾಯಗೌಡ, ನೂರೊಂದಪ್ಪ ಲೇವಡಿ, ಬಸವರಾಜ ಮೋಟ್ನಳ್ಳಿ, ಅನ್ನಪೂರ್ಣ ಜವಳಿ, ಬಸವರಾಜ ಶಿವರಾಜ ಶಾಸ್ತಿç, ಶರಣು ಈಡ್ಲೂರ, ವಿಶ್ವನಾಥ ಕಾಜಗಾರ, ರಾಜಶೇಖರಪ್ಪ, ಶರಣಗೌಡ ಪಾಟೀಲ್, ಸಿದ್ದುಗೌಡ ಪಾಟೀಲ್, ನಾಗೇಂದ್ರಪ್ಪ ಜಾಜಿ, ಚನ್ನಪ್ಪ ಸಾಹು ಠಾಣಗುಂದಿ, ಬಸವರಾಜ ಸಾವೂರು ಇದ್ದರು.