ಕಲ್ಲದೇವನಹಳ್ಳಿಯಲ್ಲಿ ಅ.೧೭ ರಿಂದ ಅ.೨೧ ರವರೆಗೆ ಖಾಸ್ಗತೇಶ್ವರ ಶಾಂತಾಶ್ರಮದ ಜಾತ್ರಾ ಮಹೋತ್ಸವ
ಕುಂಭೋತ್ಸವ, ಆನೆ ಮರವಣಿಗೆ ; ಶ್ರೀ ಸಿದ್ದಲಿಂಗದೇವರು
ಕರ್ನಾಟಕ ಭಾಗ್ಯ ವಾರ್ತೆ
ಹುಣಸಗಿ: ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಖಾಸ್ಗತೇಶ್ವರ ಶಾಂತಾಶ್ರಮದ ೨ ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ನಾಳೆ ಅ.೧೭ ರಿಂದ ಅ.೨೧ ರವರೆಗೆ ಜರುಗಲಿದೆ ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ದೇವರು ಹೇಳಿದರು.
ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಖಾಸ್ಗತೇಶ್ವರ ಶಾಂತಾಶ್ರಮದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಿತ್ತಿಪತ್ರಗಳ ಬಿಡುಗಡೆಗೊಳಿಸಿ ಮಾತನಾಡುತ್ತ ಅ.೨೧ ರಂದು ಸಂಜೆ ೭ ಗಂಟೆಗೆ ‘ ತಿಳಿದು ಬದುಕು’ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ವೇ.ಮೂ.ವೀರೂಪಾಕ್ಷಯ್ಯ ಶಾಸ್ತಿç ಜಿಗಳೂರ ಪ್ರವಚನ ನಡೆಸಿಕೊಡಲಿದ್ದು, ಅಂದೇ ಬೆಳಗ್ಗೆ ೧೦ ಗಂಟೆಗೆ ಗ್ರಾಮದಿಂದ ಶಾಂತಾಶ್ರಮದವರೆಗೂ ಕುಂಭೋತ್ಸವ ಹಾಗೂ ಆನೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ನಂತರ ಸಂಜೆ ಧರ್ಮಸಭೆ ಕಾರ್ಯಕ್ರಮ ನಡೆಯಲಿದೆ, ಶ್ರೀಮಠಕ್ಕೆ ಭಕ್ತಸಮೂಹವೇ ಬಹು ದೊಡ್ಡ ಆಸ್ತಿ ಇದ್ದಂತೆ. ಧಾರ್ಮಿಕ ಭಕ್ತಿ, ಭಾವನೆಗೆ ಕಲ್ಲದೇವನಹಳ್ಳಿ ಗ್ರಾಮಸ್ಥರು ಶ್ರೀಮಂತರಾಗಿದ್ದಾರೆ. ಸ್ವಯಂ ಮನಸ್ಸು, ತನು-ಮನ ಧನದಿಂದ ಭಕ್ತರ ಇಚ್ಚೆಯಂತೆ ಧಾರ್ಮಿಕ ಕರ‍್ಯಕ್ರಮ ಯಶಸ್ವಿಯಾಗಲಿದೆ ಎಂದು ಹಾರೈಸಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಂತರ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸೌಕರ್ಯಗಳ ಕುರಿತಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದನಗೌಡ ಪೊಲೀಸ್ ಪಾಟೀಲ್, ಚೆನ್ನಪ್ಪ ಕೊಡೇPಲ್, ಭೀಮನಗೌಡ ದ್ಯಾಮನ, ಚಂದ್ರಶೇಖರ, ಶಾಂತಗೌಡ ಪೊಲೀಸ್ ಪಾಟೀಲ್, ಶಿವರಾಯಗೌಡ ಮೇಟಿ, ರಾಜ್ಯ ಜಾನಪದ ಅಕಾಡೆಮಿಯ ನಿಕಟ ಪೂರ್ವ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಸೇರಿದಂತೆ ಗ್ರಾಮಸ್ಥರು ಇದ್ದರು.