ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಶಾಸಕ ಚನ್ನಾರಡ್ಡಿ ತುನ್ನೂರ ಮನವಿ
ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ : ವಿವಿಧ ಕಾಲೇಜುಗಳಿಗೆ ಭೇಟಿ
. ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ: ಈಶಾನ್ಯ ವಲಯದ ಶಿಕ್ಷಕರ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಶನಿವಾರ ನಗರದ ಜವಾಹರ ಶಿಕ್ಷಣ ಸಂಸ್ಥೆ, ಸರ್ಕಾರಿ ಡಿಗ್ರಿ ಕಾಲೇಜು,ಲಿಂಗೇರಿ ಕೊನಪ್ಪ ಮಹಿಳಾ ಮಹಾ ವಿದ್ಯಾಲಯ ಮತ್ತು ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜುಗಳಿಗೆ ಭೇಟಿ ನೀಡಿದ ಅವರು, ಮಟ್ಟೂರ ಪರ ಮತಯಾಚನೆ ಮಾಡಿ ಮಾತನಾಡಿದರು.
ಅ.23 ರಂದು ನಡೆಯಲಿರುವ ಈ ಮಹತ್ವದ ಚುನಾವಣೆಯಲ್ಲಿ ಅನುಭವಿ, ಕೆಲಸಗಾರ ಮತ್ತು ವಕೀಲರೂ ಆಗಿರುವ ಮಟ್ಟೂರ ಅವರಿಗೆ ಮತ ನೀಡುವ ಮೂಲಕ ತಮ್ಮ ಎಲ್ಲ ಬೇಡಿಕೆ ಈಡೆರಿಸಿಕೊಳ್ಳಬೇಕೆಂದರು.
ಈಗಾಗಲೇ ಒಮ್ಮೆ ಎಂಎಲ್ ಸಿ ಆಗಿ ಕೆಲಸ ಮಾಡಿರುವ ಅವರು, ಆಗಿನ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಈಗಂತೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಶಿಕ್ಷಕರ, ಅತಿಥಿ ಶಿಕ್ಷಕರ, ಉಪನ್ಯಾಸಕರ, ಅತಿಥಿ ಉಪನ್ಯಾಸಕರ ಹೀಗೆ ಸಂಬಂಧಿತ ಎಲ್ಲ ಮತದಾರ ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಕ್ರೀಯಾಶೀಲ ವ್ಯಕ್ತಿ ಅವರು ಆಗಿದ್ದಾರೆಂದು ಶಾಸಕ ತುನ್ನೂರ ವಿವರಿಸಿದರು.
ಜಿಲ್ಲೆಯ ಮತದಾರರ ಅಹವಾಲು ಕೇಳಲು ನಾನಂತೂ ಇಲ್ಲಿಯೇ ಇರುತ್ತೆನೆ. ನಾವು ಅವರು ಕೂಡಿಯೇ ಈ ಕ್ಷೇತ್ರದ ಮತದಾರರ ಕೆಲಸಗಳನ್ನು ಮಾಡುವುದಾಗಿ ಹೇಳಿದರು.
ಕಾರಣ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಶ್ಯಾಮಸನ್ ಮಾಳಿಕೇರಿ,ಇದು ಬುದ್ದಿವಂತರ ಚುನಾವಣೆ ಇದೆ. ಅಭ್ಯರ್ಥಿ ಮಟ್ಟೂರ ಅವರು ಕೂಡಾ ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವವರಾಗಿದ್ದಾರೆ. ಕಾರಣ,ಅ.23 ರಂದು ನಡೆಯಲಿರುವ ಚುನಾವಣೆಯಲ್ಲಿ ಶರಣಪ್ಪ ಮಟ್ಟೂರ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕೆಂದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಸಾಯಿಬಣ್ಣಾ ಕೆಂಗೂರಿ, ಮರೆಪ್ಪ ಬಿಳ್ಹಾರ, ಮೈನೋದ್ದಿನ್ ಮಿರ್ಚಿ, ಡಾ ಪರ್ವೇಶ್ ಕಾಡ್ಲೂರು , ಮಲ್ಲಿಕಾರ್ಜುನ ಈಟೆ ಇದ್ದರು


