23.5 C
Bengaluru
October 23, 2026
Karnataka Bhagya
ಕರ್ನಾಟಕ

ರಾಜ್ಯದ ಇತಿಹಾಸದಲ್ಲಿಯೇ ೧೦ ದಿನಗಳವರೆಗೆ ನಡೆಯುವ ನಾಡಹಬ್ಬ ವಿಜಯದಶಮಿಗೆ ಅದ್ದೂರಿ ತೆರೆ, ಶ್ರೀ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ,

ಸರಪಳಿ ಹರಿಯುವಿಕೆ, ದಶದಿನಗಳ ಧಾರ್ಮಿಕ ಕಾರ್ಯಕ್ರಮ


ಹಾಲಗೇರಾ ಐತಿಹಾಸಿಕ ದಸರಾ ಮಹೋತ್ಸವ ಸಂಪನ್ನ


ಕರ್ನಾಟಕ ಭಾಗ್ಯ ವಾರ್ತೆ ಯಾದಗಿರಿ

ಯಾದಗಿರಿ : ಘಂಟೆ, ಜಾಗಟೆ, ಡೊಳ್ಳು, ಭಾಜಾ ಭಜಂತ್ರಿ ನಾದ ನಿನಾದದೊಂದಿಗೆ ಕಳೆದ ೧೦ ದಿನಗಳಿಂದ ಪ್ರಾರಂಭವಾದ ವಡಗೇರಾ ತಾಲೂಕಿನ ದೇವರ ಹಾಲಗೇರಾ ಐತಿಹಾಸಿಕ ದಸರಾ ಹಬ್ಬವು ಅತ್ಯಂತ ಶ್ರದ್ಧೆ ಭಕ್ತಿ ಸಂಭ್ರಮದಿAದ ಸಹಸ್ರಾರು ಭಕ್ತರ ಮಧ್ಯೆ ಜರುಗಿತು.
ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ನಡೆದ ಸರಪಳಿ ಹರಿಯುವ ಕಾರ್ಯಕ್ರಮದಲ್ಲಿ ಗ್ರಾಮದ ನಿಂಗಪ್ಪ ಪೂಜಾರಿ ಸರಪಳಿ ಹರಿಯುವುದರೊಂದಿಗೆ ಸಂಭ್ರಮದ ಹಬ್ಬದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ದೇವರ ಹಾಲಗೇರಾ ಹಿನ್ನಲೆ :
ಗ್ರಾಮದ ಶೇ೮೦ರಷ್ಟು ಮನೆಗಳಲ್ಲಿ ದೇವರ ಮೂರ್ತಿಯನ್ನು ಹೊಂದಿದ್ದ ಗ್ರಾಮದಲ್ಲಿ ಹಲವು ಮಂದಿರಗಳಿವೆ. ಸುತ್ತಲಿನ ನೂರು ಹಳ್ಳಿಗಳಲ್ಲಿ ದೇವರ ಹಾಲಗೇರಾ ವೆಂದರೆ ಪ್ರಸಿದ್ದವಾದ ಈ ಗ್ರಾಮದಲ್ಲಿ ದಸರಾ ಹಬ್ಬ ಅತ್ಯಂತ ಸಂಭ್ರಮದಿAದ ಜರುಗಲಿದ್ದು, ಇದರಿಂದ ಈ ಗ್ರಾಮವೂ ಸುತ್ತಲಿನ ಗ್ರಾಮಗಳಿಗೆ ಇದು ದೇವರ ಹಾಲಗೇರಾವೆಂದೇ ಖ್ಯಾತಿ ಪಡೆದಿದ್ದು, ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸಂಭ್ರಮವಿರಲಿ ಎನ್ನುವ ದೃಷ್ಠಿಯಿಂದ ದಸರಾ ವೈಭವಕ್ಕೆ ಕಳೆ ತರಲು ಮನೆ ಮನೆಯಿಂದ ದೇವರ ಪಲ್ಲಕ್ಕಿಯನ್ನು ಹೊತ್ತು ಎಲ್ಲಾ ದೇವರ ಪಲ್ಲಕ್ಕಿಗಳನ್ನು ಹೊತ್ತವರು ಸೇರಿದಂತೆ ಎಲ್ಲರಿಂದ ವಿಜಯದಶಮಿ ದಿನ ರಾತ್ರಿ ಬನ್ನಿ ಮುಡಿಯಲು ಶಿಬಿರ ಮಲ್ಲಯ್ಯನ ಕಟ್ಟೆ ಹತ್ತಿರ ವಿರುವ ಬನ್ನಿಗಿಡಕ್ಕೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಅಂದು ರಾತ್ರಿ ಎಲ್ಲ ದೇವರ ಪಲ್ಲಕ್ಕಿಗಳೊಂದಿಗೆ ಗ್ರಾಮದ ಹನುಮಾನ್ ದೇವರ ಮಂದಿರಕ್ಕೆ ತೆರಳಿ ಅಲ್ಲಿ ರಾತ್ರಿ ತಂಗಿ ನಂತರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಜನರ ದೇವ ಘೋಷಣೆಗಳೊಂದಿಗೆ ಪೂಜಾರಿಯಿಂದ ಸರಪಳಿ ಹರಿಯುವ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ.
ಅದ್ದೂರಿ ಪಲ್ಲಕ್ಕಿ ಉತ್ಸವ : ವಿಜಯದಶಮಿ ದಿನದಂದು ಪ್ರಾರಂಭವಾದ ಪಲ್ಲಕ್ಕಿ ಉತ್ಸವ ಮೆರವಣಿಗೆ ಮರುದಿನ ಸಂಜೆವರೆಗೆ ನಡೆಯಲಿದ್ದು, ಗ್ರಾಮದೇವತೆ ಯಲ್ಲಮ್ಮದೇವಿ ದೇವಸ್ಥಾನದಿಂದ ಶ್ರೀಯಲ್ಲಮ್ಮ ದೇವಿ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊರಬರಲಿದ್ದು, ನಂತರ ಗ್ರಾಮದ ಸಿದ್ದೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊರಬರಲಿದೆ. ತದ ನಂತರ ಪಲ್ಲಕ್ಕಿ ಮೆರವಣಿಗೆ ವಿಶ್ವಕರ್ಮ ಸಮುದಾಯದವರು ತಯಾರಿಸಿದ ವಿಶೇಷ ಸರಪಳಿಗೆ ಪೂಜೆ ಸಲ್ಲಿಸಿ ನಂತರ ಆ ಸರಪಳಿಯನ್ನು ಶ್ರೀಯಲ್ಲಮ್ಮ ದೇವಿ ಉತ್ಸವ ಮೂರ್ತಿಯ ಪಲ್ಲಕ್ಕಿಯಲ್ಲಿಟ್ಟು ತರಲಾಗುತ್ತದೆ. ಅಲ್ಲಿಂದ ತೆರಳಿದ ಮೆರವಣಿಗೆ ಅಂಬಾಭವಾನಿ ಮತ್ತು ಹನುಮಾನ್ ದೇವಸ್ಥಾನದ ಆವರಣದಲ್ಲಿ ಗ್ರಾಮದ ಹಲವು ಭಕ್ತರ ಮನೆಗಳಲ್ಲಿರುವ ಶ್ರೀ ಮೈಲಾರಲಿಂಗೇಶ್ವರನ ಉತ್ಸವ ಮೂರ್ತಿ ಹೊತ್ತ ಭಕ್ತರು ಆವರಣಕ್ಕಾಗಮಿಸಿದ ನಂತರ ವಿಜಯ ದಶಮಿ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಬನ್ನಿ ಮಹಾಕಾಳಿಗೆ ಪೂಜೆ :
ಗ್ರಾಮದಲ್ಲಿ ಎಲ್ಲ ಸಮುದಾಯಗಳೊಂದಿಗೆ ಉತ್ತಮ ಸಂಬAಧವಿರಲಿ ಎನ್ನುವ ಉದ್ದೇಶದಿಂದ ಪ್ರಾರಂಭವಾದ ಈ ಬನ್ನಿ ಬಂಗಾರ ಸಂಪ್ರದಾಯವು ವಿಜಯದಶಮಿಯ ದಿನವು ಗ್ರಾಮದ ಯಲ್ಲಮ್ಮದೇವಿ ಬನ್ನಿ ಪೂಜೆಯ ನಂತರ ಗ್ರಾಮಸ್ಥರೆಲ್ಲರೂ ಬನ್ನಿ ವಿನಿಮಯ ಮಾಡಿಕೊಳ್ಳುತ್ತಾರೆ. ಜಾತಿ, ಮತ, ಪಂಥ, ಮೇಲು ಕೀಳು ಭೇಧವಿಲ್ಲದೆ ಸರ್ವರು ಬನ್ನಿ ವಿನಿಮಯ ಮಾಡಿಕೊಂಡು ಹಬ್ಬವನ್ನು ಸಂಭ್ರಮದಿAದ ಆಚರಿಸಲಾಗುತ್ತದೆ. ಗ್ರಾಮದ ಪ್ರತಿಯೊಂದು ಸಮುದಾಯಗಳು ಒಗ್ಗಟ್ಟಾಗಿರಲಿ ಎನ್ನುವ ಉದ್ದೇಶದಿಂದ ದಸರಾ ಆಚರಣೆ ಅದ್ದೂರಿಯಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳಲು ಪ್ರತಿಯೊಂದು ಸಮುದಾಯಕ್ಕೆ ವಿಳ್ಳೆ ನೀಡಲಾಗುತ್ತದೆ. ಗ್ರಾಮದ ಪೊಲೀಸ್‌ಗೌಡರು, ಮಾಲಿಗೌಡರು, ವಿಶ್ವಕರ್ಮ ಸಮುದಾಯ, ಕುರುಬ ಸಮುದಾಯ, ಕಬ್ಬಲಿಗ ಸಮುದಾಯ, ಮಡಿವಾಳ, ಮಾತಂಗ ಸಮುದಾಯ ಹೀಗೆ ಪ್ರತಿಯೊಂದು ಸಮುದಾಯವು ಒಂದೊAದು ಸಂಪ್ರದಾಯಬದ್ಧವಾದ ಕಾರ್ಯಗಳನ್ನು ಮಾಡುವುದರೊಂದಿಗೆ ದಸರಾ ಹಬ್ಬಕ್ಕೆ ಕಳೆ ತರುತ್ತಾರೆ. ಹತ್ತು ಹಲವು ಧಾರ್ಮಿಕ ಕಾರ್ಯಗಳನ್ನು ಒಬ್ಬೊಬ್ಬರಾಗಿ ತಲಾ ಆಯ್ಕೆಯೊಂದಿಗೆ ಪ್ರಾರಂಭವಾದ ವೈಭವದ ದಸರಾ ಸರಪಳಿ ಹರಿಯುವುದರೊಂದಿಗೆ ಸಂಪನ್ನಗೊAಡಿತು.
ಪರಸ್ಪರ ಬನ್ನಿ ವಿನಿಮಯ :
ಭಕ್ತಿ ಭಾವನೆಗಳ ಸಂಕೇತವಾದ ಮಹಾನವಮಿ ಹಬ್ಬದಲ್ಲಿ ಗ್ರಾಮದ ಸಮಸ್ತ ಜನತೆ ಜಾತಿ, ಮತ, ಪಂಥ, ಬೇಧ ಮರೆತು ಬನ್ನಿ ವಿನಿಮಯ ಮಾಡಿಕೊಂಡರು. ಈ ಸಂಭ್ರಮದಲ್ಲಿ ದೊಡಪ್ಪ ಮುತ್ಯಾ, ಪರಪ್ಪ ಮುತ್ಯಾ, ವಿರುಪಣ್ಣಗೌಡ ಮಾಲಿಪಾಟೀಲ, ನರಸರಡ್ಡಿಗೌಡ ದೇಸಾಯಿ, ಚಂದ್ರುಗೌಡ ಹಾಲಗೇರಾ, ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ, ಮಲ್ಲಣಗೌಡ ಕೆಳಮನಿ, ಭೀಮರಾಯ ನಾಟೇಕಾರ, ಹುಸೇನ್‌ಸಾಬ ನಾಶಿ, ಮಲ್ಲನಗೌಡ ಮಾಲಿ ಪಾಟೀಲ, ರೆಡ್ಡೆಪ್ಪ ನಾಟೇಕಾರ, ಸಂಗಪ್ಪ ಮಾಜಿ ಚೇರಮನ್, ರಾಮು ನಾಟೇಕಾರ, ಅಯ್ಯಪ್ಪ ನಾಯ್ಕೋಡಿ, ಆವಣ್ಣ ಪೂಜಾರಿ, ಬಸಪ್ಪ ಪೂಜಾರಿ, ಯಲ್ಲಪ್ಪ ನಾಯ್ಕೋಡಿ, ಬಸವಲಿಂಗಪ್ಪ ಕಲಾಲ, ಭೀಮರಾಯ ನಾಯ್ಕೋಡಿ ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು.

ಹಾಲಗೇರಾದಲ್ಲಿ ಐತಿಹಾಸಿಕ ದಸರಾ
ಹಾಲಗೇರಾ ಗ್ರಾಮದಲ್ಲಿ ಐತಿಹಾಸಿಕ ದಸರಾ ಹಬ್ಬವನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಗುತ್ತಿದೆ. ಕಳೆದ ಹಲವು ದಶಕಗಳಿಂದ ಆಚರಿಸಲಾಗುವ ಈ ಹಬ್ಬವು ಅತ್ಯಂತ ವೈಭವದಿಂದ ಕೂಡಿರುತ್ತದೆ. ಈ ಹಬ್ಬವನ್ನು ಆಚರಿಸುವುದರಿಂದ ನಮ್ಮೂರಿನಲ್ಲಿ ಕಾಲ ಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಜನರು ಸುಖಃ ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಈ ಉದ್ದೇಶದಿಂದ ನಮ್ಮ ಪೂರ್ವಜರು ಮಾಡಿಕೊಂಡು ಬಂದ ಸಂಪ್ರದಾಯವನ್ನು ನಾವು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.
 ಚಂದ್ರುಗೌಡ ಪೊಲೀಸ್ ಪಾಟೀಲ ಹಾಲಗೇರಾ ಮುಖಂಡರು.

೧೦ ದಿನಗಳ ವಿಜಯದಶಮಿ
ರಾಜ್ಯದ ಎಲ್ಲಡೆ ದಸರಾ ಹಬ್ಬವು ೯ದಿನಗಳವರೆಗೆ ನಡೆದರೆ ಹಾಲಗೇರಾ ಗ್ರಾಮದಲ್ಲಿ ವಿಶೇಷವಾಗಿ ೧೦ ದಿನಗಳ ವರೆಗೆ ನಡೆಯುತ್ತದೆ. ೯ ದಿನಗಳಿಂದ ನವ ದುರ್ಗೆಯರ ಪೂಜೆಯೊಂದಿಗೆ ಮುಕ್ತಾಯಗೊಳ್ಳುವ ದಸರಾ ಹಬ್ಬವು ೧೦ನೇ ದಿನ ನಮ್ಮೂರಲ್ಲಿ ಸರಪಳಿ ಹರಿಯುವ ಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳುವುದರಿAದ ನಮ್ಮೂರಲ್ಲಿ ೧೦ ದಿನಗಳ ವರೆಗೆ ಹಬ್ಬದ ಸಂಭ್ರಮ ಮನೆ ಮಾಡಿರುವುದು ಹಾಗೇ ರಾಜ್ಯದ ಇತಿಹಾಸದಲ್ಲೇ ವಿಶೇಷವಾಗಿ ಈ ಹಬ್ಬವನ್ನು ನಾವು ಆಚರಿಸುತ್ತೇವೆ.
 ಭೀಮರಾಯ ನಾಟೇಕಾರ ಗ್ರಾಪಂ ಮಾಜಿ ಸದಸ್ಯರು ಹಾಲಗೇರಾ

Related posts

ನಕಲಿ ವೈಧ್ಯರ ಆಸ್ಪತ್ರೆಗಳ ಮೇಲೆ ಅಧಿಕಾರಿಗಳ ದಾಳಿ

Karnataka Bhagya

ಮಾಡೆಲ್ ನಿಂದ ನಟನೆಯವರೆಗೆ ಕೃಷ್ಣಾ ಪಯಣ

Nikita Agrawal

‘ವೀರಲೋಕ’ ಎಂಬ ಪುಸ್ತಕಪ್ರಪಂಚ; ರಮೇಶ್ ಅರವಿಂದ್, ಸುದೀಪ್ ಸಾಥ್.

Nikita Agrawal

Leave a Comment

Share via
Copy link
Powered by Social Snap