November 18, 2026
Karnataka Bhagya
ಕರ್ನಾಟಕ

ಉದ್ಯೋಗ ಖಾತ್ರಿ ಹಣ ಗುಳುಂ : ಗ್ರಾಪಂ ಮಾಜಿ ಅಧ್ಯಕ್ಷನಿಗೆ 3 ವರ್ಷ ಜೈಲು

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ :
ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ: ಸುರಪುರ ತಾಲ್ಲೂಕಿನ ಹೇಮನೂರು ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ, ಎನ್.ಎಂ.ಆರ್ ರಚಿಸದೆ, ಎಮ್.ಬಿ ದಾಖಲಿಸದೆ ಹಾಗೂ ನಗದು ಪುಸ್ತಕ ಬರೆಯದೆ, ಪಿ.ಡಿ.ಒ ಅವರ ಅಧ್ಯಕ್ಷರ ಸಂಗಡ ಶಾಮೀಲಾಗಿ ಸುಮಾರು ೧೩,೫೭,೦೦೦/- ರೂ.ಗಳ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಈ ಕುರಿತು ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: ೦೧/೨೦೧೩ ಕಲಂ ೧೩(೧) (ಸಿ) ಪಿ.ಸಿ. ಕಾಯ್ದೆ ಮತ್ತು ಕಲಂ ೪೨೦, ೪೦೬, ೪೦೮, ೪೦೯ ಐಪಿಸಿ ರಡಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಯಾದ ಬಿ.ಬಿ. ಪಾಟೀಲ್ (ಪೊಲೀಸ್ ನಿರೀಕ್ಷಕರು) ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮರುಳಸಿಧ್ದಾರಾಧ್ಯ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ೧ನೇ ಆರೋಪಿ ಹಾಗೂ ಹೇಮನೂರು ಗ್ರಾಮ ಪಂಚಾಯತಿಯ ಪಿ.ಡಿ.ಒ ಆದ ಮಾನಪ್ಪ ಕೊಂಗAಡಿಕರ್ ಮತ್ತು ಪ್ರಕರಣದ ೪ನೇ ಆರೋಪಿ ರಾಜ ರಾಮಪ್ಪ ನಾಯಕ (ಮೃತಪಟ್ಟಿರುತ್ತಾರೆ).
ಪ್ರಕರಣದ ೨ನೇ ಆರೋಪಿಯಾದ ದೇವನಗೌಡ ನಿಡುಗುಂದಿ (ಅಧ್ಯಕ್ಷರು, ಹೇಮನೂರು ಗ್ರಾಮ ಪಂಚಾಯತಿ) ಇವರ ಮೇಲಿನ ಅಪರಾಧ ಸಾಬೀತಾಗಿದ್ದು, ಇವರಿಗೆ ೨೦,೦೦೦/- ರೂ.ಗಳು ದಂಡ ಹಾಗೂ ೩ ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ೩ನೇ ಆರೋಪಿಯಾದ ಶ್ರೀ ಸಿದ್ಧಪ್ಪ ಸಾ|| ಹೇಮನೂರು ಇವರಿಗೆ ೨,೦೦೦/- ರೂ.ಗಳು ದಂಡ ಹಾಗೂ ಒಂದು ವರ್ಷ ಶಿಕ್ಷೆ ವಿಧಿಸಿ ನವೆಂಬರ್ ೧೩ರಂದು ತೀರ್ಪು ನೀಡಲಾಗಿರುತ್ತದೆ.
ಕರ್ನಾಟಕ ಲೋಕಾಯುಕ್ತರ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ವಿಶ್ವನಾಥ ಉಭಾಳೆ ಅವರು ವಾದ ಮಂಡಿಸಿದ್ದು, ಲೋಕಾಯುಕ್ತ ಠಾಣೆಯ ಪೊಲೀಸ್ ಸಿಬ್ಬಂದಿ ರಾಮುನಾಯಕ ಎಚ್.ಸಿ. ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Related posts

ಬಸವೇಶ್ವರ ಭಾವಚಿತ್ರ ವಿರೂಪ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

Mahesh Kalal

ಹೊಸ ಹವಾ ಸೃಷ್ಟಿ ಮಾಡಲಿದೆ ಚಾರ್ಲಿ 777 ಸಿ‌ನಿಮಾದ ಇಮೋಜಿ

Nikita Agrawal

ವಿಕ್ರಾಂತ್ ರೋಣ ಮೆಚ್ಚಿದ ರಮೇಶ್ ಅರವಿಂದ್ ಹೇಳಿದ್ದೇನು ಗೊತ್ತಾ?

Nikita Agrawal

Leave a Comment

Share via
Copy link
Powered by Social Snap