ನಿನ್ನೆ ವಾಣಿಜ್ಯ ಮಂಡಳಿ ನಡೆಸಿದ ಅಪ್ಪು ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ವಿಶಾಲ್ … ಇಂದು ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟಿದ್ದಾರೆ ವಿಶೇಷ ಎಂದರೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರ ಬಳಿ ಒಂದು ಮನವಿ ಮಾಡಿದ್ದಾರೆ…
ಪುನೀತ್ ಇಷ್ಟು ದಿನಗಳ ಕಾಲ ನಡೆಸಿಕೊಂಡು ಬಂದ ಅವರ ಕಾರ್ಯ ಮುಂದುವರೆಸಲು ಅನುಮತಿ ಕೇಳಿದ್ದಾರೆ..ಈ ಬಗ್ಗೆ ಮಾತನಾಡಿರೋ ವಿಶಾಲ್ ಅಶ್ವಿನಿ ಮೇಡಮ್ ಹತ್ರ ಪರ್ಮಿಷನ್ ಕೇಳಿದ್ದೇನೆ
1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳೋಕೆ ಅನುಮತಿ ಕೇಳಿದ್ದೇನೆ..ಇನ್ನು ಕೆಲವೇ ದಿನದಲ್ಲಿ ಅವರ ಅಭಿಪ್ರಾಯ ತಿಳಿಸುತ್ತಾರೆ ಎಂದಿದ್ದಾರೆ…
ಮೈಸೂರಿನಲ್ಲಿರುವ ಶಕ್ತಿಧಾಮವನ್ನು ಪುನೀತ್ ಅಷ್ಟೇ ಅಲ್ಲದೆ ಶಿವರಾಜ್ ಕುಮಾರ್ ಕೂಡ ನೋಡಿಕೊಳ್ಳುತ್ತಿದ್ದು ಹಾಗಾಗಿ ಈ ವಿಚಾರವಾಗಿ ಶಿವರಾಜ್ ಕುಮಾರ್ ಗೀತಾ ಶಿವರಾಜ್ ಕುಮಾರ್ ಮತ್ತು ಅಶ್ವಿನಿ ಹಾಗೂ ಅಣ್ಣಾವ್ರ ಮನೆಯಲ್ಲಿ ಮನೆಯ ಪ್ರತಿಯೊಬ್ಬರು ಮಾತನಾಡಿ ತೀರ್ಮಾನ ತೆಗೆದುಕೊಂಡು ನಂತರ ವಿಶಾಲ್ ಅವರಿಗೆ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ….