ಸದ್ಯ ಎಲ್ಲೆಡೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಯದ್ದೆ ಸುದ್ದಿ ..ಮದುವೆ ಆ ರೀತಿ ಇರುತ್ತಂತೆ ಈ ರೀತಿ ಇರುತ್ತಂತೆ..ಮದ್ವೆಗೆ ಬರುವವರಿಗೆ ಏಳು ಷರತ್ತು ಇರುತ್ತಂತೆ ಅಂತೆಲ್ಲಾ ಸುದ್ದಿಯಾಗ್ತಿದೆ..ಅದ್ರ ಜೊತೆಗೆ ಮದುವೆ ಫೋಟೋ – ವಿಡಿಯೋ 100ಕೋಟಿಗೆ ಸೇಲ್ ಮಾಡಿದ್ದಾರಂತೆ ಅನ್ನೋ ಸುದ್ದಿ ಕೂಡ ಜೋರಾಗಿದೆ…ಆದ್ರೆ ಕತ್ರಿನಾ ಮಾತ್ರವಲ್ಲ ಬಾಲಿವುಡ್ ನ ಸಾಕಷ್ಟು ಸ್ಟಾರ್ ಗಳು ತಮ್ಮ ಮದುವೆ ಫೋಟೋ ವಿಡಿಯೋದಿಂದ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..ಹಾಗಾದ್ರೆ ಯಾರೆಲ್ಲಾ ಆ ಲೀಸ್ಟ್ ನಲ್ಲಿದ್ದಾರೆ ..
ಕತ್ರಿನಾ-ವಿಕ್ಕಿ ಕೌಶಲ್ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ…ಇಲಗಲಿ ತನಕ ಮದುವೆ ಸಂಭ್ರಮದ ವಿಡಿಯೋ ಆಗಲಿ ಫೋಟೊ ಆಗಲಿ ಲೀಕ್ ಆಗಿಲ್ಲ ..ಇಬ್ಬರ ಮದ್ವೆ ವಿಡಿಯೋ ಫೋಟೋವನ್ನ ಓಟಿಟಿಗೆ ಸೇಲ್ ಮಾಡಲು ವಿಕ್ಕಿ ಮತ್ತು ಕತ್ರಿನಾ ನಿರ್ಧಾರ ಮಾಡಿದ್ದು ಅದಕ್ಕಾಗಿ 100ಕೋಟಿ ಪಡೆದಿದ್ದಾರಂತೆ…
2018 ರಲ್ಲಿ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 5 ದಿನ ಅದ್ದೂರಿಯಾಗಿ ಮದುವೆಯಾಗಿದ್ರು… ದಂಪತಿಗಳು ತಮ್ಮ ಮದುವೆಯ ಫೋಟೋಗಳ ಹಕ್ಕುಗಳನ್ನು ಅಂತರರಾಷ್ಟ್ರೀಯ ಮ್ಯಾಗಜೀನ್ ಗೆ 18 ಕೋಟಿಗೆ ಮಾರಾಟ ಮಾಡಿದ್ರು…ಇದು ಬಿ-ಟೌನ್‌ನ ಮೊದಲ ಭಾರಿ ಹಣಗಳಿಸಿದ ವಿವಾಹಗಳಲ್ಲಿ ಒಂದಾಗಿತ್ತು…
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಇಟಲಿಯ ಟಸ್ಕಾನಿಯಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ರು…, ದಂಪತಿಗಳು ತಮ್ಮ ಮದುವೆಯ ಫೋಟೋ ಗಳನ್ನ ಸುತ್ತಲಿನ ಪ್ರಚಾರವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಲು ನಿರ್ಧರಿಸಿದರು…. ವಧು ಮತ್ತು ವರನ ಬೆರಳೆಣಿಕೆಯಷ್ಟು ಚಿತ್ರಗಳನ್ನು ರಿವಿಲ್ ಮತ್ತಷ್ಟು ಫೋಟೋಗಳನ್ನ ಮ್ಯಾಗಜೀನ್‌ಗೆ ಮಾರಾಟ ಮಾಡಲಾಗಿತ್ತು ಅದರಿಂದ ಬಂದಹಣವನ್ನ ಚಾರಿಟಿಗೆ ದಾನ ಮಾಡಿದ್ರು ವಿರುಕ್ಷಾ ಜೋಡಿ…
ನಟಿ ಪ್ರೀತಿ ಜಿಂಟಾ ಇವರೆಲ್ಲರನ್ನೂ ಮೀರಿ ಒಂದು ಹೆಜ್ಜೆ ಮುಂದು ಹೋಗಿ ತಮ್ಮ ಮದುವೆ ಫೋಟೋಗಳನ್ನ ಹರಾಜು ಮಾಡಿದ್ರು ಅದರಿಂದ ಬಂದ ಕೋಟಿ ಕೋಟಿ ಹಣವನ್ನ ಮಕ್ಕಳಿಗೆ ಶಿಕ್ಷಣ ಮತ್ತು ವೃದ್ಧಾಶ್ರಮ ಪುನರ್ವಸತಿಗಾಗಿ ಕೆಲಸ ಮಾಡುವ ಪ್ರತಿಷ್ಠಾನಕ್ಕೆ ನೀಡಿದ್ರು..