Karnataka Bhagya

ರಾಜಕೀಯ

ಜೇಮ್ಸ್ ನ ‘ಪವರ್’ ಝಲಕ್ ಇದೀಗ ಅಭಿಮಾನಿಗಳ ಕಣ್ಮುಂದೆ

ಇಂದು, ಅಂದರೆ ಫೆಬ್ರವರಿ 11ರಂದು ಕನ್ನಡದ ಯುವರತ್ನ ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಚಿತ್ರ ಜೇಮ್ಸ್ ನ ಟೀಸರ್ ಬಿಡುಗಡೆಯಾಗಿದೆ. ಬೆಳ್ಳಿಪರದೆಯಲ್ಲಿ ಅಪ್ಪುವನ್ನ ನೋಡೋ ಪ್ರೇಕ್ಷಕರಿಗೆ ಅತಿಹೆಚ್ಚು ಸಂತೃಪ್ತಿ ನೀಡಬೇಕೆಂಬ ಚಿತ್ರತಂಡದ ಪ್ರಯತ್ನ ಚಿತ್ರದ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ.ಬಹದ್ದೂರ್ ಖ್ಯಾತಿಯ ಚೇತನ್ ಕುಮಾರ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶರತ್ ಕುಮಾರ್, ಶ್ರೀಕಾಂತ್ ರಂತಹ ದೊಡ್ಡದೊಡ್ಡ ಹೆಸರುಗಳು ತಾರಗಾಣದಲ್ಲಿವೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ತುಂಬಿದ್ದು, ಕಿಶೋರ್ ಪ್ರೊಡಕ್ಷನ್ಸ್ ಸಿನಿಮಾದ ಹಣಕಾಸಿನ ವ್ಯವಹಾರ ನೋಡಿಕೊಳ್ಳಲಿದೆ.ಇದು ಒಂದು ಸಂಪೂರ್ಣ ಕಮರ್ಷಿಯಲ್-ಆಕ್ಷನ್ ಚಿತ್ರ. ಸಂತೋಷ್ ಅನ್ನೋ ಪಾತ್ರಕ್ಕೆ ಪುನೀತ್ ಜೀವತುಂಬಿದ್ದು, ಕಥೆ ಆ ಪಾತ್ರದ ಸುತ್ತಲೇ ಸುತ್ತುತ್ತದಂತೆ. ಇದೊಂದು ಪಾನ್-ಇಂಡಿಯನ್ ಸಿನಿಮಾ ಆಗಿರಲಿದ್ದು, ಕನ್ನಡ ಮಾತ್ರವಲ್ಲದೆ ತಮಿಳ್, ತೆಲುಗು ಮಲಯಾಳಂ ಹಾಗೂ ಹಿಂದಿಯಲ್ಲಿ ಕೂಡ ಸಿನಿಮಾ ತೆರೆಮೇಲೆ ಬರಲಿದೆ. ಅಪ್ಪು ಜೀವತುಂಬಿರೋ ಪಾತ್ರಕ್ಕೆ ಶಿವಣ್ಣ ಸ್ವರ ತುಂಬಿರೋದು ಸಿನಿಮಾದ ಇನ್ನೊಂದು ವಿಶೇಷತೆ.ಒಟ್ಟಿನಲ್ಲಿ ಕೊನೆಯ ಭಾರಿ ಕರುನಾಡ ರಾಜರತ್ನನನ್ನ ನಾಯಕನಾಗಿ ತೆರೆಮೇಲೆ ಕಂಡು ಕಣ್ತುಂಬಿಸಿಕೊಳ್ಳಲು ಹಾತೊರೆಯುತ್ತಿದ್ದ ಅಭಿಮಾನಿ ಬಳಗಕ್ಕೆ ಟೀಸರ್ ನೋಡಿದ ಮೇಲೆ ಕಾತುರತೆ ಹೆಚ್ಚಾಗುವುದಂತೂ ಖಂಡಿತ. ಜೇಮ್ಸ್ ಚಿತ್ರ ಮಾರ್ಚ್ 17ರಂದು ಬೆಳ್ಳಿತೆರೆಗೆ ಬಣ್ಣ ತುಂಬಲಿದೆ.

ಜೇಮ್ಸ್ ನ ‘ಪವರ್’ ಝಲಕ್ ಇದೀಗ ಅಭಿಮಾನಿಗಳ ಕಣ್ಮುಂದೆ Read More »

ಮುಂಬಯಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ರಾಕಿ ಭಾಯ್

ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ಕುಂದಾಪುರದಲ್ಲಿ ಕೆಜಿಎಫ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ರು… ಅದಾದ ನಂತರ ಅಲ್ಲೆ ಇರುವ ದೇವಾಲಯಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ರು…ಆದ್ರೆ ಈಗ ಯಶ್ ಏಕಾಏಕಿ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ… ಯಶ್ ಏರ್ ಪೋರ್ಟ್ ನಲ್ಲಿರುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ… ಅಷ್ಟಕ್ಕೂ ಯಶ್ ಮುಂಬೈಯಲ್ಲಿ ಏನ್ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಸಾಕಷ್ಟು ಜನರಿಗಿತ್ತು ಅದಕ್ಕೆ ಉತ್ತರ ಕೆಜಿಎಫ್ ಎನ್ನುತ್ತಿದ್ದಾರೆ ಮುಂಬೈ ಮಂದಿ… ಹೌದು ಈಗಾಗಲೇ ಸಿನಿಮಾತಂಡ ಅನೌನ್ಸ್ ಮಾಡಿರುವಂತೆ ಕೆಜಿಎಫ್ ಚಾಪ್ಟರ್ 2ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.. ಈಗ ಸಿನಿಮಾ ಬಿಡುಗಡೆ ಆಗಲು ಇನ್ನೂ 2ತಿಂಗಳು ಬಾಕಿ ಇದ್ದು ಸಿನಿಮಾತಂಡ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ… ಎಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾಗೆ ಹೊಂಬಾಳೆ ಸಂಸ್ಥೆ ಬಂಡವಾಳ ಹಾಕಿದ್ದು ಅದರ ಜತೆಗೆ ಬಾಲಿವುಡ್ ಮಂದಿಯೂ ಕೂಡ ಸಿನಿಮಾ ಮೇಲೆ ಹೂಡಿಕೆ ಮಾಡಿದ್ದಾರೆ… ಆದ್ದರಿಂದ ಮೊದಲಿಗೆ ಕೆಜಿಎಫ್ ಸಿನಿಮಾದ ಪ್ರಚಾರ ಮುಂಬಯಿಯಿಂದಲೇ ಆರಂಭವಾಗುತ್ತಿದೆ … ಇನ್ನು ಕಳೆದ ಬಾರಿ ಕೆಜಿಎಫ್ ಚಾಪ್ಟರ್ 1 ಸಿನಿಮಾ ಹಿಂದಿಯಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು ಹಾಗಾಗಿ ಈ ಬಾರಿಯೂ ಕೂಡ ಅಲ್ಲಿಯ ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ ಅದಕ್ಕಾಗಿ ಮೊದಲಿಗೆ ಅಲ್ಲಿಂದಲೇ ಪ್ರಚಾರ ಶುರು ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದ್ದು ಅದಕ್ಕಾಗಿ ರಾಕಿಂಗ್ ಸ್ಟಾರ್ ಈಗಾಗಲೇ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ಕೆಜಿಎಫ್ ಸಿನಿಮಾದಲ್ಲಿ ಯಶ್, ಶ್ರೀನಿಧಿ ಶೆಟ್ಟಿ ,ಪ್ರಕಾಶ್ ರೈ ,ಮಾಳವಿಕಾ, ಸಂಜಯ್ ದತ್ ,ರವೀನಾ ಟಂಡನ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ಅಭಿನಯ ಮಾಡಿದ್ದಾರೆ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ರೆ ಭುವನ್ ಗೌಡ ಕ್ಯಾಮೆರಾ ವರ್ಕ್ ಸಿನಿಮಾಗಿದೆ ಒಟ್ಟಾರೆ ಸಿನಿಮಾ ಏಪ್ರಿಲ್ ನಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಲಿದ್ದು ಪ್ರೇಕ್ಷಕರು ಇಷ್ಟು ದಿನದಿಂದ ಕಾಯುತ್ತಿದ್ದಂತ ಕಾತುರಕ್ಕೆ ತೆರೆ ಬೀಳಲಿದೆ

ಮುಂಬಯಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ರಾಕಿ ಭಾಯ್ Read More »

ಬುದ್ದಿಮಾಂದ್ಯನಾಗಿ ತೆರೆ ಮೇಲೆ ಬರಲಿದ್ದಾರೆ ಕೊಡಗಿನ ಕುವರ

ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ಇಂದು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿಯಾದ ಸಂಗತಿ‌. ಆದರೆ ತಾರಕ್ ಪೊನ್ನಪ್ಪ ವಿಷಯದಲ್ಲಿ ಇದು ಕೊಂಚ ಭಿನ್ನ. ಯಾಕೆಂದರೆ ಹಿರಿತೆರೆ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ತಾರಕ್ ಪೊನ್ನಪ್ಪ ಮುಂದೆ ಕಿರುತೆರೆಯಲ್ಲೂ ಕಮಾಲ್ ಮಾಡಿದ ಪ್ರತಿಭೆ. ಅಜರಾಮರ ಸಿನಿಮಾ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಕೊಡಗಿನ ಕುವರ ತಾರಕ್ ಬೃಹಸ್ಪತಿ ಸಿನಿಮಾದಲ್ಲಿ ಖಳನಾಯಕನಾಗಿ ಮೋಡಿ ಮಾಡಿದರು. ಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಧಾರಾವಾಹಿಯಲ್ಲಿ ಎಕ್ಸ್ ಆರ್ಮಿ ಆಫೀಸರ್ ಒಂಕಾರ್ ಆಗಿ ಕಾಣಿಸಿಕೊಂಡಿದ್ದರು. ತದ ನಂತರ ಕನ್ನಡ ಸಿನಿರಂಗದ ಬ್ಲಾಕ್ ಬಾಸ್ಟರ್ ಸಿನಿಮಾ ಕೆಜಿಎಫ್ ನಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡ ತಾರಕ್ ಪೊನ್ನಪ್ಪ ಯುವ ರತ್ನ ಹಾಗೂ ಮೋಕ್ಷ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂತಿಪ್ಪ ಹ್ಯಾಂಡ್ ಸಮ್ ಹುಡುಗ ಇದೀಗ ಬುದ್ದಿಮಾಂದ್ಯನಾಗಿ ನಿಮ್ಮನ್ನು ರಂಜಿಸಲು ತಯಾರಾಗಿದ್ದಾರೆ. ಹೌದು, ಗಿಲ್ಕಿ ಎನ್ನುವ ಸಿನಿಮಾದಲ್ಲಿ ನಾಯಕ ಗಿಲ್ಕಿ ಆಗಿ ತಾರಕ್ ಪೊನ್ನಪ್ಪ ನಟಿಸುತ್ತಿದ್ದು ಬುದ್ದಿಮಾಂದ್ಯನಾಗಿ ಅಭಿನಯಿಸಿದ್ದಾರೆ.ಪ್ರೀತಿಯ ಆಳ ಅಗಲಗಳನ್ನು ತಿಳಿಸುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಸಿನಿಮಾ ಫೆಬ್ರವರಿ 18 ರಂದು ಬಿಡುಗಡೆಯಾಗಲಿದ್ದು ಸಿನಿಪ್ರಿಯರು ಮೆಚ್ಚಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಬುದ್ದಿಮಾಂದ್ಯನಾಗಿ ತೆರೆ ಮೇಲೆ ಬರಲಿದ್ದಾರೆ ಕೊಡಗಿನ ಕುವರ Read More »

ಹಾಟ್ ಅವತಾರದ ಮೂಲಕ ಸದ್ದು ಮಾಡುತ್ತಿದ್ದಾರೆ ಮೌನಿ ರಾಯ್

ಬಾಲಿವುಡ್ ನಟಿ ಮೌನಿ ರಾಯ್ ಮೊನ್ನೆಯಷ್ಟೇ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವರಿಸಿದ್ದರು. ಇದೀಗ ಪತಿಯೊಂದಿಗೆ ಕಾಶ್ಮೀರದ ಗುಲ್ಮರ್ಗ್ ಗೆ ಹನಿಮೂನ್ ಗೆ ತೆರಳಿರುವ ಮೌನಿ ತಮ್ಮ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೌನಿಯ ಈ ಅವತಾರಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಮೌನಿ ಪೂಲ್ ಬಳಿ ನಿಂತುಕೊಂಡಿದ್ದ ಹಾಟ್ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು “ಚುಂಬನಗಳು ಸ್ನೋಫ್ಲೇಕ್ ಗಳಾಗಿದ್ದರೆ ನಾನು ನಿಮಗೆ ಹಿಮಪಾತವನ್ನು ಕಳುಹಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಮತ್ತೊಂದು ಪೋಸ್ಟ್ ನಲ್ಲಿ” ಬೇಬಿ ,ಹೊರಗೆ ತಂಪಾಗಿದೆ” ಎಂದು ಬರೆದುಕೊಂಡಿದ್ದಾರೆ. ಕಿರುತೆರೆಯಲ್ಲಿ ದೇವೂನ್ ಕಿ ದೇವ್ ಮಹಾದೇವ್ , ನಾಗಿನ್ , ಕಸ್ತೂರಿ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿರುವ ಮೌನಿ ರಾಯ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ಗೋಲ್ಡ್ , ಮೇಡ್ ಇನ್ ಚೈನಾ ಚಿತ್ರಗಳಲ್ಲಿ ನಟಿಸಿರುವ ಮೌನಿ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿರುವ ಮೌನಿ ರಾಯ್ ಸದ್ಯ ಬೋಲ್ಡ್ ಅವತಾರದ ಮೂಲಕ ನೆಟ್ಟಿಗರ ಮನ ಸೆಳೆಯುತ್ತಿದ್ದಾರೆ.

ಹಾಟ್ ಅವತಾರದ ಮೂಲಕ ಸದ್ದು ಮಾಡುತ್ತಿದ್ದಾರೆ ಮೌನಿ ರಾಯ್ Read More »

ತಾಯಿಯ ಮಡಿಲು ಸ್ವರ್ಗ ಎಂದ ಸಲ್ಮಾನ್ ಖಾನ್

ಬಾಲಿವುಡ್ ನ ಸುಲ್ತಾನ್ ಎಂದೇ ಜನಪ್ರಿಯರಾಗಿರುವ ಸಲ್ಮಾನ್ ಖಾನ್ ತನ್ನ ತಾಯಿಯೊಂದಿಗೆ ಇರುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ತಾಯಿ ಸಲ್ಮಾ ಖಾನ್ ಜೊತೆ ಮಧುರ ಕ್ಷಣದ ಫೋಟೋವೊಂದನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದು ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ತನ್ನ ತಾಯಿ ಮಡಿಲಿನಲ್ಲಿ ತಲೆಯನ್ನಿಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಸಲ್ಮಾನ್ ಖಾನ್ “ತಾಯಿಯ ಮಡಿಲು ಸ್ವರ್ಗ” ಎಂದು ಬರೆದುಕೊಂಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರು ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ 18 ಲಕ್ಷಕ್ಕೂ ಅಧಿಕ ಜನರು ಲೈಕ್ಸ್ ಬಂದಿದೆ. ಮಾತ್ರವಲ್ಲ ಅನೇಕರು ಈ ಫೋಟೋ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಮ್ಮಾ ಮಗ ಜೋಡಿಯನ್ನು ಜನ ಇಷ್ಟ ಪಟ್ಟಿದ್ದು ಮಗ ಎಂದರೆ ಈ ರೀತಿ ಇರಬೇಕು ಎಂದು ಕಮೆಂಟ್ ಕೂಡಾ ಮಾಡುತ್ತಿದ್ದಾರೆ. ಸಲೀಂ ಖಾನ್ ಹಾಗೂ ಸಲ್ಮಾ ಖಾನ್ ಪುತ್ರನಾಗಿರುವ ಸಲ್ಮಾನ್ ಖಾನ್ ಬಾಲಿವುಡ್ ನಟ ಬೇಡಿಕೆಯ ನಟರಲ್ಲಿ ಒಬ್ಬರು. ಆಯುಷ್ ಶರ್ಮಾ ಅವರ “ಅಂತಿಮ್” ಚಿತ್ರದಲ್ಲಿ ನಟಿಸಿದ್ದ ಸಲ್ಮಾನ್ ಖಾನ್ ಅವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಮೊನ್ನೆಯಷ್ಟೇ ರಿಲೀಸ್ ಆದ “ಮೈನ್ ಚಲಾ” ಎಂಬ ಹಾಡಿನಲ್ಲಿ ಅಭಿನಯಿಸಿದ್ದು ಇದನ್ನು ಜನ ಮೆಚ್ಚಿಕೊಂಡಿದ್ದರು.

ತಾಯಿಯ ಮಡಿಲು ಸ್ವರ್ಗ ಎಂದ ಸಲ್ಮಾನ್ ಖಾನ್ Read More »

ಬಾಲಿವುಡ್ ಬೆಡಗಿಗೆ ಸ್ಟೈಲಿಶ್ ಸ್ಟಾರ್ ಜೊತೆಗೆ ನಟಿಸುವ ಬಯಕೆ!

ಅಲಿಯಾ ಭಟ್‌.. ಬಾಲಿವುಡ್ ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಎನಿಸಿಕೊಂಡಿರುವ ಅಲಿಯಾ ಭಟ್ ತನ್ನ ಮನೋಜ್ಞ ಅಭಿನಯದಿಂದ ಮನಸೆಳೆದವರು. ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದಿಂದ ಕೆರಿಯರ್ ಆರಂಭಿಸಿದ ಅಲಿಯಾ ಭಟ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಬಾಲಿವುಡ್ ನ ಜನಪ್ರಿಯ ನಟರೊಂದಿಗೆ ನಟಿಸಿರುವ ಅಲಿಯಾ ಭಟ್ ಗೆ ಇದೀಗ ಮತ್ತೋರ್ವ ಮಹಾನ್ ನಟನೊಂದಿಗೆ ತೆರೆ ಹಂಚಿಕೊಳ್ಳುವ ಮಹಾದಾಸೆ! ಹೌದು, ಅಲಿಯಾ ಭಟ್ ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸುವ ಬಯಕೆ ಇದೆ. ಪುಷ್ಪ ಮೂಲಕ ಬಣ್ಣದ ಜಗತ್ತಿನಲ್ಲಿ ಹೊಸ ಹವಾ ಎಬ್ಬಿಸಿರುವ ಅಲ್ಲು ಅರ್ಜುನ್ ಜೊತೆ ನಟಿಸಬೇಕು ಎಂಬುದು ಅಲಿಯಾ ಆಸೆ. ಇನ್ನು ಪುಷ್ಪ ಸಿನಿಮಾ ನೋಡಿದ ಅಲಿಯಾ ಭಟ್ ಮನೆಯವರು ಕೂಡಾ “ನೀನು ಯಾವಾಗ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡುತ್ತೀಯಾ? ಎಂದು ಅಲಿಯಾ ಬಳಿ ಕೇಳುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡುವ ಬಯಕೆ ಮಾಮೂಲಿಯಾಗಿ ಎಲ್ಲಾ ಹೀರೋಯಿನ್ ಗಳಿಗೂ ಇದ್ದೇ ಇದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, ಬ್ರಹ್ಮಾಸ್ತ್ರ, ಗಂಗೂಬಾಯಿ ಕಠಿಯಾವಾಡಿ ಚಿತ್ರದಲ್ಲಿ ನಟಿಸಿರುವ ಅಲಿಯಾ ಮುಂದೆ ಅಲ್ಲು ಅರ್ಜುನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡರೂ ಅಚ್ಚರಿ ಏನಿಲ್ಲ.

ಬಾಲಿವುಡ್ ಬೆಡಗಿಗೆ ಸ್ಟೈಲಿಶ್ ಸ್ಟಾರ್ ಜೊತೆಗೆ ನಟಿಸುವ ಬಯಕೆ! Read More »

ಮಹೇಶ್ ಬಾಬು ವೆಡ್ಡಿಂಗ್ ಆ್ಯನಿವರ್ಸರಿ ಗೆ ಸಿಕ್ತು ಭರ್ಜರಿ ಗಿಫ್ಟ್

ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನಮ್ರತಾ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ….17 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಮಹೇಶ್ ಬಾಬು ಅವರಿಗೆ ಈ ವರ್ಷ ಮರೆಯಲಾಗದಂತಹ ಉಡುಗೊರೆ ಸಿಕ್ಕಿದೆ … ಅಷ್ಟಕ್ಕೂ ಮಹೇಶ್ ಬಾಬು ಅವರಿಗೆ ಈ ಮೆಮೋರೆಬಲ್ ಗಿಫ್ಟ್ ಸಿಕ್ಕಿರುವುದು ಪತ್ನಿ ನಮ್ರತಾ ಅವರಿಂದ ಅಲ್ಲ… ಟಾಲಿವುಡ್ ದಿಗ್ಗಜರು ಮಹೇಶ್ ಬಾಬು ಅವರ ವಿವಾಹ ವಾರ್ಷಿಕೋತ್ಸವವನ್ನ ಎಂದೆಂದಿಗೂ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಿದ್ದಾರೆ … ಮಹೇಶ್ ಬಾಬು ಅವರ ವಿವಾಹ ವಾರ್ಷಿಕೋತ್ಸವದ ದಿನ ಟಾಲಿವುಡ್ ನ ದಿಗ್ಗಜ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ,ಕೊರಟಾಲ ಶಿವ ಹಾಗೂ ಕಲಾವಿದರಾದ ಪ್ರಭಾಸ್ .ಚಿರಂಜೀವಿ ಮತ್ತು ನಿರಂಜನ್ ರೆಡ್ಡಿ ಇವರೆಲ್ಲರೂ ಭೇಟಿ ಮಾಡಿ ಶುಭ ಹಾರೈಸಿದ್ದಾರೆ… ಎಲ್ಲರೊಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿರುವಂತಹ ಮಹೇಶ್ ಬಾಬು ಇದು ಎಂದೆಂದಿಗೂ ನೆನಪಿನಲ್ಲಿ ಉಳಿದು ಕೊಳ್ಳುವ ವಾರ್ಷಿಕೋತ್ಸವ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ …

ಮಹೇಶ್ ಬಾಬು ವೆಡ್ಡಿಂಗ್ ಆ್ಯನಿವರ್ಸರಿ ಗೆ ಸಿಕ್ತು ಭರ್ಜರಿ ಗಿಫ್ಟ್ Read More »

2022 ರ ಬೆಸ್ಟ್ ಸಿನಿಮಾ ಲವ್ ಮಾಕ್ಟೈಲ್2 – ಅಮೃತ ಅಯ್ಯಂಗಾರ್

ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಸಿನಿರಂಗಕ್ಕೆ ಪರಿಚಿತರಾದ ಬ್ಯೂಟಿಫುಲ್ ಬೆಡಗಿ ಅಮೃತಾ ಅಯ್ಯಂಗಾರ್ ಗೆ ಹೆಸರು ತಂದು ಕೊಟ್ಟಿದ್ದು ಜೋಶಿತಾ ಪಾತ್ರ. ಲವದ ಮಾಕ್ಟೈಲ್ ಸಿನಿಮಾದಲ್ಲಿ ಜೋಶಿತಾ ಆಲಿಯಾಸ್ ಜೋ ಆಗಿ ನಟಿಸಿ ಸಿನಿಪ್ರಿಯರ ಮನ ಮನೆ ಗೆದ್ದ ಸುಂದರಿ ಅಮೃತಾ ಅಯ್ಯಂಗಾರ್ ಇದೀಗ ಲವ್ ಮಾಕ್ಟೈಲ್ 2 ರಲ್ಲಿಯೂ ನಟಿಸುತ್ತಿದ್ದಾರೆ. ಲವ್ ಮಾಕ್ಟೈಲ್ 2 ಬಗ್ಗೆ ಕಾತುರರಾಗಿರುವ ಅಮೃತಾ “ನಾನು ನಿಜವಾಗಿಯೂ ನನ್ನ ಪಾತ್ರದ ಬಗ್ಗೆ ತುಂಬಾ ಹೆದರಿದ್ದೆ. ಸಿನಿಮಾ ರಿಲೀಸ್ ಆಗುವ ಹಿಂದಿನ ರಾತ್ರಿಯವರೆಗೂ ಜನ ನನ್ನ ಪಾತ್ರವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ ಎಂಬ ಭಯ ಇತ್ತು. ಯಾಕೆಂದರೆ ಜೋ ಪಾತ್ರ ನೆಗೆಟಿವ್ ಆಗಿ ಪ್ರಭಾವ ಬೀರಬಹುದೆಂಬ ಭಯ ಕೊಂಚ ಕಾಡಿತ್ತು” ಎನ್ನುತ್ತಾರೆ ಅಮೃತಾ‌. “ನಾನು ನಟಿ ಎಂಬುದನ್ನು ಬದಿಗಿಟ್ಟು ಪ್ರೇಕ್ಷಕಿಯಾಗಿ ಸಿನಿಮಾ ನೋಡಿದಾಗ ತುಂಬಾ ಸಂತಸಪಟ್ಟೆ. ಆದರೂ ನನಗೆ ಈ ಸಿನಿಮಾ, ಈ ಪಾತ್ರ ಇಷ್ಟೊಂದು ಹಿಟ್ ಆಗಬಹುದೆಂಬ ಯೋಚನೆ ಇರಲಿಲ್ಲ. ಇನ್ನು ಲವ್ ಮಾಕ್ಟೈಲ್ ಸೀಕ್ವೆಲಿನಲ್ಲಿ ಅದೇ ಮುಗ್ಧತೆ ಕಾಣಬಹುದು. ಆದರೆ ಈಗ ಕಾಲ ಸರಿದಿದೆ. ಹೀಗಾಗಿ ಪಾತ್ರದಲ್ಲಿ ಪ್ರಬುದ್ಧತೆಯಿದೆ. ಮೊದಲ ಭಾಗದಲ್ಲಿದ್ದಂತೆ ಹತಾಶೆ ಇಲ್ಲಿಯೂ ಇದೆ” ಎಂದಿದ್ದಾರೆ. “ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಅದು ಕೂಡಾ ಚೆನ್ನಾಗಿದೆ. ಅದರಲ್ಲಿ ಯಾವುದನ್ನೂ ಬಹಿರಂಗಪಡಿಸಿಲ್ಲ. ಇದು ಭಾವನೆಗಳ ಏರಿಳಿತ. ಫಸ್ಟ್ ಹಾಫ್ ನಗಿಸಿದರೆ , ಸೆಕೆಂಡ್ ಹಾಫ್ ಭಾವನಾತ್ಮಕವಾಗಿ ಇದೆ. ಭಾಗ ಒಂದರಲ್ಲಿ ಕ್ಲೈಮಾಕ್ಸ್ ನಲ್ಲಿ ಇರುವಂತಹ ಮೌನ ಹಾಗೂ ನೋವು ಇದರಲ್ಲಿಯೂ ಇದೆ. ಲವ್ ಸ್ಟೋರಿಗೆ ಸೀಕ್ವೆಲ್ ಮಾಡುವುದು ತುಂಬಾ ಕಷ್ಟ ಹಾಗೂ ದೊಡ್ಡ ಜವಾಬ್ದಾರಿ. ಕೃಷ್ಣ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. 2022ರ ಬೆಸ್ಟ್ ಸಿನಿಮಾ ಆಗಿರಲಿದೆ” ಎಂದಿದ್ದಾರೆ ಅಮೃತಾ ಅಯ್ಯಂಗಾರ್‌.

2022 ರ ಬೆಸ್ಟ್ ಸಿನಿಮಾ ಲವ್ ಮಾಕ್ಟೈಲ್2 – ಅಮೃತ ಅಯ್ಯಂಗಾರ್ Read More »

ದಾಖಲೆ ಸೃಷ್ಟಿಸಿದ ಎಡವಟ್ಟು ರಾಣಿ… ಅದೇನು ಗೊತ್ತಾ?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯನ್ನು ಇಷ್ಟಪಡದವರಿಲ್ಲ. ಎಡವಟ್ಟು ಲೀಲಾ ಹಾಗೂ ಪರ್ಫೆಕ್ಟ್ ಎಜೆ ಜೋಡಿ ಕಿರುತೆರೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಇಂತಿಪ್ಪ ಹಿಟ್ಲರ್ ಕಲ್ಯಾಣದ ಎಟವಟ್ಟು ಲೀಲಾ ಹೆಸರು ಮಲೈಕಾ ವಸುಪಾಲ್. ಮೂಲತಃ ದಾವಣಗೆರೆಯವರಾದ ಮಲೈಕಾ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಥಿಯೇಟರ್ ನಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಲೈಕಾ ಅವರ ನಟನಾ ಕೆರಿಯರ್ ಗೆ ಮನೆಯವರೆಲ್ಲರ ಪ್ರೋತ್ಸಾಹ ಇದೆ. ದಾವಣಗೆರೆಯ ಬೆಡಗಿ ಹಲವು ಆಡಿಷನ್ ಗಳ ನಂತರ ಸೆಲೆಕ್ಟ್ ಆಗಿದ್ದು ಲೀಲಾ ಪಾತ್ರಕ್ಕೆ. ತನ್ನ ಮುದ್ದಾದ ಅಭಿನಯದಿಂದ ಜನರ ಮನಗೆದ್ದು ಫೇವರಿಟ್ ಅನಿಸಿಕೊಂಡರು ಮಲೈಕಾ. ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಮಲೈಕಾ ಸದಾ ತಮ್ಮ ಫೋಟೋಗಳನ್ನು ಹಂಚಿಕೊಂಡೇ ಇರುತ್ತಾರೆ. ಟ್ರಡಿಷನಲ್, ಮಾಡರ್ನ್ , ಕ್ಯಾಶುಯಲ್ ಹೀಗೆ ಎಲ್ಲಾ ರೀತಿಯ ಫೋಟೋಗಳಲ್ಲಿಯೂ ಸುರಸುಂದರಿಯಾ್ಇ ಕಂಗೊಳಿಸುವ ಎಟವಟ್ಟು ರಾಣಿಯ ಸೌಂದರ್ಯ ಕಂಡು ಅಭಿಮಾನಿಗಳು ಸೋತಿದ್ದಾರೆ. ಇನ್ನು ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಚೆಂದುಳ್ಳಿ ಚೆಲುವೆ ಮಲೈಕಾ ಆಲಿಯಾಸ್ ಲೀಲಾ ಅವರಿಗಾಗಿ ಅಭಿಮಾನಿಗಳು ಪೇಜ್ ಕೂಡಾ ಆರಂಭಿಸಿದ್ದಾರೆ. ಹೌದು, ಈಗಾಗಲೇ ಹತ್ತು ಹದಿನೈದಕ್ಕೂ ಹೆಚ್ಚು ಫ್ಯಾನ್ ಪೇಜ್ ಗಳನ್ನು ಹೊಂದಿರುವ ಮಲೈಕಾ ಇನ್ನುಳಿದ ಕಿರುತೆರೆ ನಟಿಯರನ್ನು ಹಿಂದಿಕ್ಕಿದ್ದಾರೆ. ಒಟ್ಟಿನಲ್ಲಿ ಅಧಿಕ ಅಭಿಮಾನಿ ಪೇಜ್ ಗಳನ್ನು ಹೊಂದಿರುವಂತಹ ಕಿರುತೆರೆ ನಟಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ ಮಲೈಕಾ.

ದಾಖಲೆ ಸೃಷ್ಟಿಸಿದ ಎಡವಟ್ಟು ರಾಣಿ… ಅದೇನು ಗೊತ್ತಾ? Read More »

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕ್ರೇಜಿಸ್ಟಾರ್

ಕ್ರೇಜಿಸ್ಟಾರ್ ರವಿಚಂದ್ರನ್ ಸದ್ಯ ಯಾವುದೇ ಸಿನಿಮಾಗಳನ್ನ ಬಿಟ್ಟು ಕಿರುತೆರೆ ಕಡೆ ಗಮನ ಹರಿಸುತ್ತಿದ್ದಾರೆ…ಕೋವಿಡ್ ಮುನ್ನ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿಕೊಟ್ಟಿರುವ ರವಿಚಂದ್ರನ್ ಸದ್ಯ ರಿಯಾಲಿಟಿ ಶೋ ನತ್ತ ಮುಖ ಮಾಡಿದ್ದಾರೆ.. ಹೌದು ಇದೇ ಮೊದಲ ಬಾರಿಗೆ ರವಿಚಂದ್ರನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ … ಜೀ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಜಡ್ಜ್ ಆಗಿ ಭಾಗಿಯಾಗಲಿದ್ದಾರೆ… ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ವಿಜಯ ರಾಘವೇಂದ್ರ, ಟಿ ಎನ್ ಸೀತಾರಾಂ, ಯೋಗರಾಜ್ ಭಟ್, ಲಕ್ಷ್ಮೀ ತೀರ್ಪುಗಾರರಾಗಿ ಭಾಗಿಯಾಗಿದ್ದರು… ಆದರೆ ಈಗ ವಿಜಯರಾಘವೇಂದ್ರ ಅವ್ರು ಬೇರೆ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಯೋಗರಾಜ್ ಭಟ್ ಹಾಗೂ ಟಿಎನ್ ಸಿತಾರಾಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ… ಹಾಗಾಗಿ ಅವರ ಸ್ಥಾನದಲ್ಲಿ ಇನ್ನು ಮುಂದೆ ರವಿಚಂದ್ರನ್ ಅವರನ್ನ ಕಾಣಬಹುದಾಗಿದೆ.. ಇನ್ನು ರವಿಮಾಮ ಕಿರುತೆರೆಗೆ ಮೊದಲ ಬಾರಿಗೆ ಎಂಟ್ರಿ ಕೊಡ್ತಾ ಇರೋದ್ರಿಂದ ಜೀ ವಾಹಿನಿಯವರು ವಿಭಿನ್ನ ರೀತಿಯಲ್ಲಿ ಅವರ ಎಂಟ್ರಿಯನ್ನು ಸೆಲೆಬ್ರೇಟ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ… ಈಗಾಗಲೇ ರವಿಚಂದ್ರನ್ ಅವ್ರನ್ನ ಕಿಡ್ನಾಪ್ ಮಾಡುವಂತಹ ಪ್ರೋಮೋವನ್ನ ರಿಲೀಸ್ ಮಾಡಿರುವ ಜೀ ಕನ್ನಡ ತಂಡ ಹೊಸ ಶೂಗಾಗಿ ಈ ರೀತಿಯ ಪ್ರೋಮೋಗಳನ್ನ ಶೂಟ್ ಮಾಡಿದ್ದಾರೆ …ಇಷ್ಟು ದಿನಗಳು ಬಿಗ್ ಸ್ಕ್ರೀನ್ ನಲ್ಲಿ ರವಿಚಂದ್ರನ್ ನೋಡಿ ಎಂಜಾಯ್ ಮಾಡ್ತಿದ್ದ ಅಭಿಮಾನಿಗಳು ಇನ್ಮುಂದೆ ಸ್ಮಾಲ್ ಸ್ಕ್ರೀನ್ ನಲ್ಲೂ ನೋಡಿ ಖುಷಿ ಪಡಬಹುದಾಗಿದೆ

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕ್ರೇಜಿಸ್ಟಾರ್ Read More »

Scroll to Top