Karnataka Bhagya

ರಾಜಕೀಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ “ಮೆಜೆಸ್ಟಿಕ್” ಮರು ಬಿಡುಗಡೆ.

ಸೂಪರ್ ಹಿಟ್ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮೆಜೆಸ್ಟಿಕ್”. 2002 ರ ಫೆಬ್ರವರಿ 8 ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಭರ್ಜರಿ ಯಶಸ್ಸು ಕಂಡಿತ್ತು. ಪಿ.ಎನ್ ಸತ್ಯ ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ ಕಳೆದಿದೆ. ಇದೇ ಹದಿನಾರನೇ ತಾರೀಖು ದರ್ಶನ್ ಅವರ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನದೊಂದಿಗೆ “ಮೆಜೆಸ್ಟಿಕ್” ಚಿತ್ರ ಮರು ಬಿಡುಗಡೆಯಾಗಲಿದೆಎಂದು ನಿರ್ಮಾಪಕ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ “ಮೆಜೆಸ್ಟಿಕ್” ಮರು ಬಿಡುಗಡೆ. Read More »

ತೆಲುಗು ಸಿನಿರಂಗ ಹೊಸತು ಎಂದ ಸುಪ್ರೀತಾ ಸತ್ಯನಾರಾಯಣ… ಯಾಕೆ ಗೊತ್ತಾ?

ಸೀತಾವಲ್ಲಭ ಧಾರಾವಾಹಿಯ ಮೈಥಿಲಿ ಖ್ಯಾತಿಯ ನಟಿ ಸುಪ್ರೀತಾ ಸತ್ಯನಾರಾಯಣ ಇದೀಗ ತೆಲುಗು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅನುಷ್ ಶೆಟ್ಟಿ ಬರೆದ ನೀನು ನಿನ್ನೊಳಗಿನ ಖೈದಿ ಎಂಬ ಕನ್ನಡ ಕಾದಂಬರಿ ಆಧಾರಿತವಾಗಿ ಬರುತ್ತಿರುವ ಇನ್ನೂ ಹೆಸರಿಡದ ತೆಲುಗು ಚಿತ್ರದಲ್ಲಿ ಸುಪ್ರೀತಾ ನಟಿಸಲಿದ್ದು, ಆ ಮೂಲಕ ಪರಭಾಷೆಯ ಸಿನಿರಂಗದಲ್ಲಿ ಕಮಾಲ್ ಮಾಡಲಿದ್ದಾರೆ. ಅಜಯ್ ನಾಗ್ ವಿ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮೋಹನ್ ಭಗತ್ ನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ಸುಪ್ರೀತಾ ” ಈ ಚಿತ್ರ 1985ರಲ್ಲಿ ನಡೆಯುವ ಕತೆಯಾಗಿದ್ದು ಜೈಲಿನಿಂದ ಖೈದಿಯು ಹೇಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಎಂಬುದರ ಕುರಿತಾಗಿದೆ. ಇದು ಪ್ರಾಯೋಗಿಕ ಹಾಗೂ ಸಮಯ ಪ್ರಯಾಣ ಆಧಾರಿತ ಸಿನಿಮಾ ಆಗಿದೆ. ನಿರ್ದೇಶಕರು ಕಾದಂಬರಿಯನ್ನು ಅಳವಡಿಸಿಕೊಂಡು ಕಥಾಹಂದರವನ್ನು ದುರ್ಬಲಗೊಳಿಸದೇ ಕಥೆಯ ಮೂಲಕ್ಕೆ ಹತ್ತಿರವಾಗಿದ್ದಾರೆ. ಈ ಸಿನಿಮಾದಲ್ಲಿ ಒಂದಷ್ಟು ಕಮರ್ಷಿಯಲ್ ಅಂಶಗಳಿವೆ. ಆಶ್ಚರ್ಯಕರ ಸಂಗತಿಯೆಂದರೆ ಕೆಲವು ತಿಂಗಳ ಹಿಂದೆ ನಾನು ಈ ಕಾದಂಬರಿ ಓದಿದ್ದೆ. ಇದೀಗ ಅದೇ ಪಾತ್ರ ದೊರೆತಾಗ ನಿಜಕ್ಕೂ ಆಶ್ಚರ್ಯವಾಯಿತು” ಎಂದಿದ್ದಾರೆ. ಇನ್ನು ಪಾತ್ರದ ಕುರಿತು ಹೇಳಿರುವ ಸುಪ್ರೀತಾ” ನಾನು ಈ ಚಿತ್ರದಲ್ಲಿ ಶಾರದಾ ಎಂಬ ಪಾತ್ರವನ್ನು ನಿರ್ವಹಿಸಲಿದ್ದೇನೆ. ಫಿಸಿಕ್ಸ್ ನಲ್ಲಿ ಪದವಿ ಓದಿ ವಿಜ್ಞಾನಿಯಾಗಿರುತ್ತಾಳೆ” ಎಂದು ಹೇಳುತ್ತಾರೆ. ಇನ್ನು “ತೆಲುಗು ಸಿನಿರಂಗ ನನಗೆ ಹೊಸತು. ಈಗೀಗ ನಾನು ತೆಲುಗು ಭಾಷೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಮಾತ್ರವಲ್ಲ ಜೊತೆಗೆ ತೆಲುಗು ಭಾಷೆಯನ್ನು ಕಲಿಯಲು ಆರಂಭಿಸಿದ್ದೇನೆ. ಬರೋಬ್ಬರಿ 20 ಸಾಲುಗಳ ಡೈಲಾಗ್ ನ್ನು ಹೇಳಿದಾಗ ಸೆಟ್ ನಲ್ಲಿ ಎಲ್ಲರೂ ಇಂಪ್ರೆಸ್ ಆದರು. ತಂಡದಲ್ಲಿದ್ದವರ ಪ್ರೋತ್ಸಾಹದಿಂದ ನನಗೆ ಶೂಟಿಂಗ್ ಸುಲಭವಾಗಿದೆ” ಎಂದಿದ್ದಾರೆ. ಭೂಷಣ್ ಕಲ್ಯಾಣ್ , ಸುರಭಿ ಪ್ರಭಾವತಿ , ರವೀಂದ್ರ ವಿಜಯ್ , ಉಮಾ ಮಹೇಶ್ವರ ರಾವ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇವ್ ದೀಪ್ ಅವರ ಸಿನಿಮಾಟೋಗ್ರಫಿ , ಮಿಥುನ್ ಮುಕುಂದನ್ ಅವರ ಸಂಗೀತ ಇರಲಿದ್ದು ಈ ಸಿನಿಮಾ ಕನ್ನಡ, ಮಲೆಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಡಬ್ ಆಗಲಿದೆ.

ತೆಲುಗು ಸಿನಿರಂಗ ಹೊಸತು ಎಂದ ಸುಪ್ರೀತಾ ಸತ್ಯನಾರಾಯಣ… ಯಾಕೆ ಗೊತ್ತಾ? Read More »

ಬೋಲ್ಡ್ ಲುಕ್ ಮೂಲಕ ಸದ್ದು ಮಾಡುತ್ತಿದ್ದಾರೆ ಮೀರಾ ಜಾಸ್ಮಿನ್

ಮಲೆಯಾಳಂ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಮೀರಾ ಜಾಸ್ಮಿನ್ ಕೂಡಾ ಒಬ್ಬರು. ಮಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದ ಮೀರಾ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿಯೂ ನಟಿಸಿ ಅಭಿಮಾನಿಗಳನ್ನು ಗಳಿಸಿದರು. ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಈಗ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಜನವರಿ 20ರಂದು ಇನ್ಸ್ಟಾಗ್ರಾಂ ಖಾತೆ ತೆರೆದಿರುವ ನಟಿಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಾತ್ರವಲ್ಲ ಖಾತೆ ತೆರೆದ ಮೊದಲ ದಿನವೇಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದ ಮೀರಾ ಜಾಸ್ಮಿನ್ ಸಾಕಷ್ಟು ಸದ್ದು ಮಾಡಿದ್ದಂತೂ ನಿಜವೆನ್ನಿ. ಇನ್ನು ಇದೀಗ ಸ್ಲಿಮ್ ಆಗಿರುವ ನಟಿ ತಮ್ಮ ಮಾದಕ ನೋಟದಿಂದ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ. ಸದ್ಯ ಇನ್ ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಮೀರಾ ಸಖತ್ ಬೋಲ್ಡ್ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಜಾಕೆಟ್ ಹಾಗೂ ಬ್ರಾ ಧರಿಸಿ ಎದೆ ಸೀಳು ಕಾಣುವಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಈ ಫೋಟೋಕ್ಕೆ 70 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು ಅಧಿಕ ಕಾಮೆಂಟ್ಸ್ ಗಳನ್ನು ಬರೆದಿದ್ದಾರೆ. ಮನೋಜ್ಞ ನಟನೆಯ ಮೂಲಕ ಚಿತ್ರರಂಗದಲ್ಲಿ ಮಿಂಚಿದ್ದ ಮೀರಾ ಜಾಸ್ಮಿನ್ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಚೆಲುವೆ. 2014ರಲ್ಲಿ ದುಬೈ ಮೂಲದ ಅನಿಲ್ ಜಾನ್ ಟಿಟನ್ ಅವರನ್ನು ಮದುವೆಯಾಗಿದ್ದರು. ಬಳಿಕ ಚಿತ್ರರಂಗದಿಂದ ದೂರ ಸರಿದ ಮೀರಾ ಮುಂದೆ ಮಾನಸಿಕ ಸಮಸ್ಯೆಯಿಂದ ಪತಿಯಿಂದ ದೂರವಾಗಿದ್ದರು. ಈಗ ಸಿನಿಮಾ ಕಡೆ ಮುಖ ಮಾಡಿರುವ ನಟಿ ಮಲೆಯಾಳಂ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಉತ್ತಮ ಅವಕಾಶಗಳು ದೊರೆತರೆ ಯಾವುದೇ ಭಾಷೆಯಾಗಿರಲಿ ನಾನು ನಟಿಸಲು ಸಿದ್ಧಳಿದ್ದೇನೆ ಎಂದು ಹೇಳುವ ಮೀರಾ ಜಾಸ್ಮಿನ್ ಕನ್ನಡದ ಅರಸು, ಮೌರ್ಯ, ದೇವರು ಕೊಟ್ಟ ತಂಗಿ, ಹೂ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಬೋಲ್ಡ್ ಲುಕ್ ಮೂಲಕ ಸದ್ದು ಮಾಡುತ್ತಿದ್ದಾರೆ ಮೀರಾ ಜಾಸ್ಮಿನ್ Read More »

ಕಾಮಿಡಿ ಕಿಲಾಡಿ ಮನೆಗೆ ಬರಲಿದೆ ಪುಟ್ಟ ಕಂದಮ್ಮ

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ‌ ಜನಮಾನಸದಲ್ಲಿ ಉಳಿದುಕೊಂಡಿದ್ದ ಕಲಾವಿದ ಜಿಜಿ…ಅವ್ರಂತೆಯೇ ಕಾಮಿಡಿ‌ಕಿಲಾಡಿಯಲ್ಲಿ ಅಭಿನಯದ ಮೂಲಕ‌ ಮ್ಯಾಜಿಕ್ ಮಾಡಿದ‌ ಕಲಾವಿದೆ ವಿದ್ಯಾಶ್ರೀ…ಕಾಮಿಡಿ‌ಕಿಲಾಡಿ ಮೂಲಕವೇ ಪರಿಚಯವಾಗಿ ನಂತ್ರ ಮದುವೆ ಮಾಡಿಕೊಂಡ ಈ ಜೋಡಿ ಈಗಗುವಿನ ನಿರೀಕ್ಷೆಯಲ್ಲಿದೆ… ಹೌದು ಗೋವಿಂದೇ ಗೌಡ ಹಾಗೂ ವಿದ್ಯಶ್ರೀ ಇನ್ನು ಕೆಲವೇ ದಿನಗಳಲ್ಲಿ ತಂದೆ- ತಾಯಿಯಾಗಲಿದ್ದಾರೆ…ಇತ್ತೀಚಿಗಷ್ಟೇ ಈ ಜೋಡಿ ಮೆಟರ್ನೆಟಿ ಫೋಟೋ ಶೂಟ್ ಮಾಡಿಸೋ ಮೂಲಕ ಕೆಲವೇ‌ದಿನದಲ್ಲಿ ಪೋಷಕರಾಗುವ ಸಂತಸವನ್ನ ಹಂಚಿಕೊಂಡಿದ್ದಾರೆ… ಹಳ್ಳಿ ಸೊಗಡಿನಲ್ಲಿ ದೇಸಿ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿರೋದು ಎಲ್ಲರ ಗಮನ ಸೆಳೆಯುತ್ತಿದೆ…ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯದಲ್ಲಿ ವೈರಲ್ ಆಗಿದೆ…

ಕಾಮಿಡಿ ಕಿಲಾಡಿ ಮನೆಗೆ ಬರಲಿದೆ ಪುಟ್ಟ ಕಂದಮ್ಮ Read More »

“ವರದ” ಚಿತ್ರ ಹಾಡು ಮೆಚ್ಚಿದ ನೆನಪಿರಲಿ ಪ್ರೇಮ್.

ವಿನೋದ್ ಪ್ರಭಾಕರ್ ನಾಯಕರ ಗಾಗಿ ನಟಿಸಿರುವ “ವರದ” ಸಿನಿಮಾ‌ ತೆರೆಗೆ ಬರಲು ಸಿದ್ದವಾಗಿದೆ…ಈಗಾಗಲೇ‌ ಸಿನಿಮಾಗೆ ಸಾಕಷ್ಟು ಕಲಾವಿದರು ಸಾಥ್ ಕೊಟ್ಟಿದ್ದು ಚಿತ್ರವನ್ಮ ಉದಯ್ ಪ್ರಕಾಶ್ ನಿರ್ದೇಶನ‌‌ ಮಾಡಿದ್ದಾರೆ… ಇತ್ತೀಚಿಗಷ್ಟೇ ನಂದೀಶ್ ಬರೆದಿರುವ “ತುಟಿಯು ಹಾಡುತಿದೆ” ಎಂಬ ಹಾಡನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಆರ್ ಜೆ ರಾಪಿಡ್ ರಶ್ಮಿ ಈ ಹಾಡನ್ನು ಹಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನೋದ್ ಪ್ರಭಾಕರ್ ನಾಯಕನಾಗಿ‌ ಅಭಿನಯ ಮಾಡಿದ್ದು ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ…. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ… ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

“ವರದ” ಚಿತ್ರ ಹಾಡು ಮೆಚ್ಚಿದ ನೆನಪಿರಲಿ ಪ್ರೇಮ್. Read More »

ನಾಗಿಣಿ ಖ್ಯಾತಿಯ ನಟನಿಗೆ ಕೂಡಿಬಂತು ಕಂಕಣ ಭಾಗ್ಯ

ಜೀ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ…ಧಾರಾವಾಹಿಯ ನಾಯಕ ನಟ ನಿನಾದ್ ಕೂಡ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ…ನಿನಾದ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ.. ಹೌದು ಅಭಿನಯದಿಂದ ಅನೇಕ ಹೆಣ್ಣು ಮಕ್ಕಳ ಮನಸ್ಸು ಗೆದ್ದಿರುವ ನಿನಾದ ದಾಂಪತ್ಯ ಜೀವನಕ್ಕೆ ಕಾಲಿಡಲಿ ಸಿದ್ದರಾಗಿದ್ದಾರೆ..ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ನಿನಾದ ಈ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ… ಬಹುದಿನಗಳಿಂದ‌ ಗೆಳೆತಿಯಾಗಿದ್ದ ರಮ್ಯಾ ಅವ್ರನ್ನೇ ನಿನಾದ್ ಮದುವೆ ಆಗುತ್ತಿದ್ದು ಎಂಗೆಜ್ಮೆಂಟ್ ಫೋಟೋ‌ ಶೇರ್ ಮಾಡೋ ಮೂಲಕ ಸಿಹಿ‌ಸುದ್ದಿ ಹಂಚಿಕೊಂಡಿದ್ದಾರೆ…ಇಬ್ಬರ ಪ್ರೀತಿಗೆ ಇಬ್ಬರು ಮನೆಯವ್ರು ಒಪ್ಪಿಗೆ ಕೊಟ್ಟಿದ್ದು ಶೀಘ್ರದಲ್ಲೇ ಸಪ್ತಪದಿ ತುಳಿಯಲಿದೆ ಈ ಜೋಡಿ ..

ನಾಗಿಣಿ ಖ್ಯಾತಿಯ ನಟನಿಗೆ ಕೂಡಿಬಂತು ಕಂಕಣ ಭಾಗ್ಯ Read More »

ದೇವಿ ಧಾರಾವಾಹಿಗೆ ಹತ್ತರ ಹರೆಯ! ಸಂತಸ ವ್ಯಕ್ತಪಡಿಸಿದ ಪ್ರಥಮಾ ಪ್ರಸಾದ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಧಾರಾವಾಹಿ ಪ್ರಸಾರವಾಗಿ ಈಗ ಹತ್ತು ವರ್ಷ. ದಶಕದ ಸಂಭ್ರಮದಲ್ಲಿರುವ ದೇವಿ ಧಾರಾವಾಹಿಯಲ್ಲಿ ನಟಿ ಪ್ರಥಮಾ ಪ್ರಸಾದ್ ದೇವಿಯ ಪಾತ್ರ ಮಾಡಿದ್ದರು. ಈಗ ಪ್ರಥಮಾ ಅವರು ಧಾರಾವಾಹಿಯಲ್ಲಿ ನಿರ್ವಹಿಸಿದ ವಿವಿಧ ಅವತಾರಗಳನ್ನು ವಿಡಿಯೋ ತುಣುಕು ಮೂಲಕ ಹಂಚಿಕೊಂಡಿದ್ದಾರೆ. ಇದರೊಂದಿಗೆ ನೋಟ್ ಅನ್ನು ಬರೆದುಕೊಂಡಿದ್ದಾರೆ. “ದೇವಿ ಧಾರಾವಾಹಿಗೆ 10 ವರ್ಷಗಳು. ಇಂಡಸ್ಟ್ರಿಯಲ್ಲಿ ನನ್ನ ಸೆಕೆಂಡ್ ಪ್ರಾಜೆಕ್ಟ್. ಕೊಲ್ಲೂರು ಮೂಕಾಂಬಿಕೆಯ ಪಾತ್ರ ನಿರ್ವಹಿಸಲು ಆಶೀರ್ವಾದ ಪಡೆದಿದ್ದೆ. ಬದುಕಿನುದ್ದಕ್ಕೂ ನೆನಪಿಸಿಕೊಳ್ಳುವ ಪಾತ್ರ. ಈ ಉತ್ತಮ ಅವಕಾಶ ನೀಡಿದ್ದಕ್ಕೆ ಶ್ರುತಿ ನಾಯ್ಡು ಮೇಡಂ ಹಾಗೂ ರಮೇಶ್ ಇಂದಿರಾ ಸರ್ ಅವರಿಗೆ ಧನ್ಯವಾದಗಳು”ಎಂದಿದ್ದಾರೆ. ಬೊಂಬೆಯಾಟವಯ್ಯಾ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಥಮಾ ಪ್ರಸಾದ್ ದೇವಿಯಾಗಿ ಕಾಣಿಸಿದ್ದೇ ಹೆಚ್ಚು. ದೇವಿ, ಮಹಾದೇವಿ, ಅಮ್ನೋರು ಧಾರಾವಾಹಿಗಳಲ್ಲಿ ದೇವಿ ಪಾತ್ರಕ್ಕೆ ಜೀವ ತುಂಬಿರುವ ಪ್ರಥಮಾ ಪ್ರಸಾದ್ ಗೆ ರಮ್ಯಾಕೃಷ್ಣನ್ ಅವರೇ ಸ್ಫೂರ್ತಿ. ” ಕಿರುತೆರೆಯಲ್ಲಿ ನಾನು ದೇವಿ ಪಾತ್ರದ ಮೂಲಕ ಮನೆ ಮಾತಾಗಿದ್ದೇನೆ ಎಂದರೆ ಅದಕ್ಕೆ ಒಂದರ್ಥದಲ್ಲಿ ರಮ್ಯಾಕೃಷ್ಣನ್ ಅವರೇ ಸ್ಫೂರ್ತಿ ಎನ್ನಬಹುದು. ರಮ್ಯಾಕೃಷ್ಣನ್ ಅವರ ದೇವಿ ಪಾತ್ರವನ್ನು ನೋಡುತ್ತಾ ಬೆಳೆದ ನಾನು ಇಂದು ಅದೇ ಪ್ರೇರಣೆಯಿಂದ ದೇವಿಯಾಗಿ ನಟಿಸಲು ಸಾಧ್ಯವಾಯಿತು” ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಪ್ರಥಮಾ ಪ್ರಸಾದ್.

ದೇವಿ ಧಾರಾವಾಹಿಗೆ ಹತ್ತರ ಹರೆಯ! ಸಂತಸ ವ್ಯಕ್ತಪಡಿಸಿದ ಪ್ರಥಮಾ ಪ್ರಸಾದ್ Read More »

ಲತಾ ಮಂಗೇಶ್ಕರ್ ಪಾರ್ಥಿವ ಮುಂದೆ ಉಗುಳಿದ್ರಾ ಶಾರುಖ್ ?

ಬಾಲಿವುಡ್ ನ ಕಿಂಗ್ ಖಾನ್ . ಶಾರುಖ್ ಖಾನ್ಪದೇ ಪದೇ ವಿವಾದದಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆಕೆಲವು ದಿನಗಳ ಹಿಂದೆಯಷ್ಟೇ ಶಾರುಕ್ ಪುತ್ರ ಡ್ರಗ್ಸ್ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಹೊರ ಬಂದು ಎಲ್ಲಾ ವಿಚಾರಗಳಿಂದ ಶಾರುಖ್ ಹೊರಬರಲು ಪಯತ್ನಿಸುತ್ತಿರೋ ಬೆನ್ನಲ್ಲೇ ಮತ್ತೊಂದು ಹೊಸ ವಿವಾದ ಶುರುವಾಗಿದೆ… ಹೌದು ನಿನ್ನೆಯಷ್ಟೇ ನಿಧನರಾದ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ನಟ ಶಾರುಖ್ ಖಾನ್ ಭಾಗಿಯಾಗಿದ್ದರು.. ನಟ ಅವರ ಅಂತಿಮ ದರ್ಶನ ಪಡೆಯುವ ಹೊತ್ತಿನಲ್ಲಿ ಶಾರುಖ್ ಖಾನ್ ಹಾಗೂ ಪೂಜಾ ದದಲ್ಲಾನಿ ಇಬ್ಬರು ಒಟ್ಟಾಗಿ ಹೋಗಿ ದರ್ಶನ ಪಡೆದರು .. ಪೂಜಾ‌ ದದಲ್ಲಾನಿ ಕೈಮುಗಿದು ತನ್ನದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದರೆ… ಶಾರುಖ್ ಖಾನ್ ತನ್ನ ಧರ್ಮದ ರೀತಿಯಲ್ಲಿ ಕೈ ಚಾಚಿ ಬೇಡಿ ನಂತರ ಮಾಸ್ಕ್ ತೆಗೆದು ಗಾಳಿಯಲ್ಲಿ ಉರುಬಿದ್ದಾರೆ ಅಂದರೆ ಮುಸಲ್ಮಾನ್ ಪದ್ಧತಿಯಲ್ಲಿ ಈ ರೀತಿ ದೇವರ ದಯೆ ಕೇಳಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಅವರಿಗೆ ಸ್ವರ್ಗಪ್ರಾಪ್ತಿಯಾಗಲಿ ಎಂದು ಬೇಡಿಕೊಂಡು ನಂತರ ಗಾಳಿಯಲ್ಲಿ ಉರುಬುವ ಪದ್ಧತಿ ಜಾರಿಯಲ್ಲಿದೆ…ಅದೇ ರೀತಿ ಶಾರುಖ್ ಲತಾ ಮಂಗೇಶ್ಕರ್ ರ ಪಾರ್ಥಿವ ಶರೀರದ ಮುಂದೆ ಮಾಡಿದ್ದಾರೆ.. ಈಗ ಅದೇ ವಿವಾದಕ್ಕೆ ಕಾರಣವಾಗಿದೆ. ಶಾರುಖ್‌ ಪಾರ್ಥಿವ ಶರೀರದ ಮುಂದೆ ಉರುಬಿಲ್ಲ ಉಗುಳಿದ್ದಾರೆ… ಈ ಪದ್ಧತಿ ಸರಿಯಿಲ್ಲ ಹಿಂದೂಗಳಲ್ಲಿ ಈ ರೀತಿ ಮಾಡುವುದಿಲ್ಲ …ನಾವು ಪಾರ್ಥಿವ ಶರೀರವನ್ನು ದೇವರಂತೆ ಕಾಣುತ್ತೇವೆ.. ಹೀಗೆ ಸಾಕಷ್ಟು ರೀತಿಯಲ್ಲಿ ನೆಟ್ಟಿಗರು ಶಾರುಖ್ ಖಾನ್ ನನ್ನ ಟ್ರೋಲ್ ಮಾಡುತ್ತಿದ್ದಾರೆ …ಆದರೆ ಯಾವುದೇ ವಿಚಾರಕ್ಕೂ ಡೋಂಟ್ ಕೇರ್ ಎನ್ನುತ್ತಿರುವ ಶಾರೂಕ್ ತಾನಾಯ್ತು ತನ್ನ ಪಾಡಾಯ್ತು ಅಂತ ಸೈಲೆಂಟ್ ಆಗಿದ್ದಾರೆ…ಲತಾ ಮಂಗೇಶ್ಕರ್ ಶಾರುಖ್ ಖಾನ್ ಅವ್ರ ಬಹುತೇಕ ಸಿನಿಮಾಗಳಿಗೆ ಹಾಡಿದ್ದರು ಅಷ್ಟೇ ಅಲ್ಲದೇ ಲತಾ ಹಾಡಿದ್ದ ಎಲ್ಲಾ ಹಾಡಿಗಳು ಶಾರುಖ್ ಖಾನ್ ಗೆ ಹಿಟ್ ತಮಧು ಕೊಟ್ಟಿತ್ತು…

ಲತಾ ಮಂಗೇಶ್ಕರ್ ಪಾರ್ಥಿವ ಮುಂದೆ ಉಗುಳಿದ್ರಾ ಶಾರುಖ್ ? Read More »

ಎರಡನೇ ವಾರಕ್ಕೆ ಹಾದಿ ತಪ್ಪಿದ ಗೋಲ್ಡನ್ ಗ್ಯಾಂಗ್

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ.. ಗೋಲ್ಡನ್ ಸ್ಟಾರ್ ಗಣೇಶ್ ರಿಯಾಲಿಟಿ ಶೋನಲ್ಲಿ ಸ್ನೇಹಿತರ ಗ್ಯಾಂಗ್ ನ ಕರೆದು ಅವರ ಹಿಂದಿನ ದಿನಗಳ ಕಷ್ಟ ಸುಖ ಹಾಗೂ ನೆನಪಿನಲ್ಲಿ ಉಳಿದಿರುವಂಥ ದಿನಗಳ ಬಗ್ಗೆ ಮಾತನಾಡುವುದೇ ಈ ಕಾರ್ಯಕ್ರಮದ ಉದ್ದೇಶ .. ಈಗಾಗಲೇ ಮೂರ್ನಾಲ್ಕು ಎಪಿಸೋಡ್ ಗಳ ಪ್ರದರ್ಶನವಾಗಿರುವ ಗೋಲ್ಡನ್ ಗ್ಯಾಂಗ್ ಈಗ್ಯಾಕೋ ಹೆಸರಿಗೆ ತಕ್ಕಂತೆ ಕಾರ್ಯಕ್ರಮ ಪ್ರಸಾರವಾಗುತ್ತಿಲ್ಲ… ಎಲ್ಲೋ ಹಾದಿ ತಪ್ಪಿದ ರೀತಿ ಎನ್ನಿಸುತ್ತಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದ ಉದ್ದೇಶ ಸ್ನೇಹಿತರನ್ನು ಕರೆಸಿ ಮಾತನಾಡಿಸುವುದು ಆದರೆ ಅದು ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದಂತಹ ವೀಕೆಂಡ್ ವಿತ್ ರಮೇಶ್ ರೀತಿಯಲ್ಲೇ ಬರುತ್ತಿದೆಯೆಂದು ನೆಟ್ಟಿಗರ ಅಭಿಪ್ರಾಯ ವಾಗಿದೆ .. ಆರಂಭದಲ್ಲಿ ಸ್ನೇಹಿತರನ್ನು ಕರೆಸಿ ನಂತರ ಅವರ ಮನೆಯವರು, ಸಿನೆಮಾದವರು,ತಂತ್ರಜ್ಞರು ಅವರ ಹೆಂಡತಿ ಹೀಗೆ ಸಾಕಷ್ಟು ಜನರನ್ನು ಕರೆಸಿ ಮಾತುಕತೆ ನಡೆಸುತ್ತಿರುವುದು ಹಾಗೂ ಅವರ ಶಾಲೆಯ ಗುರುಗಳನ್ನು ಕರೆಸಿ ಮಾತನಾಡಿಸುತ್ತಿರುವುದು ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ . ಒಟ್ಟಾರೆ ಅದೇನೇ ಇರ್ಲಿ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ವಾರಾಂತ್ಯದಲ್ಲಿ ನೋಡೋದಕ್ಕೆ ಮಜವಾಗಿದೆ…ಎನ್ನುವುದು ಮತ್ತಷ್ಟು ಪ್ರೇಕ್ಷಕರ ಅಭಿಪ್ರಾಯವಾಗಿದೆ

ಎರಡನೇ ವಾರಕ್ಕೆ ಹಾದಿ ತಪ್ಪಿದ ಗೋಲ್ಡನ್ ಗ್ಯಾಂಗ್ Read More »

‘ಬೈ ಟು ಲವ್’ ಬಿಡುಗಡೆಗೆ ಡೇಟ್ ಫಿಕ್ಸ್. !

‘ಬಜಾರ್’ ಸಿನಿಮಾ ಖ್ಯಾತಿಯ ಧನ್ವೀರ್ ಮತ್ತು ‘ಕಿಸ್’ ಬ್ಯೂಟಿ ಶ್ರೀಲೀಲಾ ಅಭಿನಯದ ‘ಬೈ ಟು ಲವ್’ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಹರಿ ಸಂತೋಷ್ ನಿರ್ದೇಶನ ಈ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದು‌ ಚಿತ್ರದ ಹಾಡು ಮತ್ತೆ ಪೋಸ್ಟರ್ ಸಖತ್ ವೈರಲ್ ಆಗಿದೆ…., ಸದ್ಯ ಬೈ ಟು ಲವ್ ಕಹಾನಿ ಕಣ್ತುಂಬಿಕೊಳ್ಳೋದಿಕ್ಕೆ ದಿನಗಣನೆ ಶುರುವಾಗಿದೆ. ಬೈ ಟು ಲವ್ ಸಿನಿಮಾ ಬೆಳ್ಳಿಪರದಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಇದೇ ತಿಂಗಳ 25ರಂದು ಅದ್ಧೂರಿಯಾಗಿ ಚಿತ್ರ ತೆರೆಗೆ ಬರಲಿದೆ. ‘ಬಜಾರ್‌’ನಲ್ಲಿ ಮಾಸ್‌ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್‌, ಈ ‘ಬೈ ಟು ಲವ್‌’ನಲ್ಲಿ ಲವರ್‌ ಬಾಯ್‌ ಪಾತ್ರ ಮಾಡಿದ್ದಾರೆ. ಶ್ರೀಲೀಲಾ ಮುದ್ದು ಮುದ್ದಾಗಿ ಮಲೆನಾಡ ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್‌ ನಟನೆಯ ಸಖತ್‌, ನಿಖಿಲ್‌ ಕುಮಾರ್‌ಸ್ವಾಮಿ ನಟನೆಯ ಯದುವೀರ ಸಿನಿಮಾ ಹಾಗೂ ಜೋಗಿ ಪ್ರೇಮ್‌-ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್‌ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ‘ಬೈ ಟು ಲವ್‌’ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ. ಬೈ ಟು ಲವ್ ಸಿನಿಮಾದ ಯಾರು ಏನಾದ್ರೂ ಅಂದ್ಕೊಂಡ್ಲಿ ಏನಂತೆ.. ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ್ದು ಧನ್ವೀರ್ ಮತ್ತು ಶ್ರೀಲೀಲಾ ಅವರ ಮುದ್ದು ಮುದ್ದು ತುಂಟಾಟಗಳನ್ನೇ ಕೊರಿಯೋಗ್ರಫಿ ಮಾಡಲಾಗಿದೆ. ನಿರ್ದೇಶಕ ಹರಿ ಸಂತೋಷ್ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮಾನೋ ಕಂಠಸಿರಿಯಲ್ಲಿ ಮೂಡಿ ಬಂದಿರುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. View this post on Instagram Shared post on Time depdf

‘ಬೈ ಟು ಲವ್’ ಬಿಡುಗಡೆಗೆ ಡೇಟ್ ಫಿಕ್ಸ್. ! Read More »

Scroll to Top