ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ನಿರ್ದೇಶಕ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಏಕ್ ಲವ್ ಯಾ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ರಾಣಾ ನಾಯಕನಾಗಿ ಎಂಟ್ರಿ ಕೊಡುತ್ತಿದ್ದು ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ ..
ಸಿನಿಮಾ ಫೆಬ್ರವರಿ 24ರಂದು ತೆರೆಕಾಣಲು ಸಿದ್ದವಾಗಿದ್ದು ಚಿತ್ರ ಬಿಡುಗಡೆಗೂ ಒಂದು ದಿನ ಮುನ್ನವೇ ಚಿತ್ರವನ್ನ ವಿಶೇಷ ವ್ಯಕ್ತಿಯೊಬ್ಬರು ವೀಕ್ಷಿಸಲಿದ್ದಾರೆ…
ಹೌದು… ರಾಜ್ಯದ ಪ್ರಥಮ ಪ್ರಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವ್ರು ಏಕ್ ಲವ್ ಯಾ ಸಿನಿಮಾ ನೋಡಲಿದ್ದಾರೆ…ನಿರ್ದೇಶಕ ಪ್ರೇಮ್ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಸಿನಿಮಾ ನೋಡಲು ಆಹ್ವಾನ ಮಾಡಿದ್ದಾರೆ…ಏಕ್ ಲವ್ ಯಾ ಸಿನಿಮಾವನ್ನ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿದ್ದು ರಚಿತಾ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ
.