ಚಂದನವನದಲ್ಲಿ ಹಲವು ವಿಭಿನ್ನ ರೀತಿಯ ಸಿನಿಮಾಗಳು ಬರುತ್ತಿವೆ. ಹೊಸ ತಲೆಮಾರಿನ ಸಿನಿಕರ್ಮಿಗಳು, ಹಾಗು ಸಿನಿಪ್ರೇಮಿಗಳು ಸೇರಿ ಹೊಸ ಹೊಸ ವಿಚಾರಗಳನ್ನು ಇಟ್ಟುಕೊಂಡ ಸಿನಿಮಾಗಳನ್ನು ಮಾಡುತ್ತಾ ನೋಡುತ್ತಾ ಹೊಸ ಪರಿಯನ್ನು ಆರಂಭಿಸಿದ್ದಾರೆ. ಇಂತಹದ್ದೇ ಒಂದು ಸಿನಿಮಾ ‘ಕ್ರಿಟಿಕಲ್ ಕೀರ್ತನೆಗಳು’. ಕುಮಾರ್ ಎಲ್ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದು ಇದೀಗ ಒಟಿಟಿ ಪರದೆ ಏರುತ್ತಿದೆ.
ಮೇ 13ರಂದು ತೆರೆಕಂಡಿದ್ದಂತಹ ಈ ಚಿತ್ರದಲ್ಲಿ ತಬಲಾ ನಾಣಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಸುಚೆಂದ್ರ ಪ್ರಸಾದ್, ರಾಜೇಶ್ ನಟರಂಗ, ವಿಶ್ವ, ಅರುಣಾ ಬಾಲರಾಜ್, ಅಪೂರ್ವ ಭಾರದ್ವಜ್ ಮುಂತಾದವರು ನಟಿಸಿದ್ದಾರೆ. ಭಾರತದ ಪ್ರಖ್ಯಾತ ಕ್ರಿಕೆಟ್ ಪಂದ್ಯಾಟವಾದ ‘ಐಪಿಎಲ್’ ಮೇಲೆ ಸಾಮಾನ್ಯರು ಆಡುವ ಬೆಟ್ಟಿಂಗ್ ಹಾಗು ಅದರ ಪರಿಣಾಮಗಳ ಬಗೆಗಿನ ಕಥೆಯೇ ಈ ‘ಕ್ರಿಟಿಕಲ್ ಕೀರ್ತನೆಗಳು’. ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ನೋಡಲು ಸಿಗುತ್ತಿದೆ.
ಈ ಹಿಂದೆ 2019ರಲ್ಲಿ ಬಿಡುಗಡೆಯಾಗಿದ್ದ ‘ಕೆಮಿಸ್ಟ್ರಿ ಒಫ್ ಕರಿಯಪ್ಪ’ ಚಿತ್ರ ನಿರ್ದೇಶಸಿದ್ದಂತಹ ಕುಮಾರ್ ಎಲ್ ಅವರೇ ಈ ಸಿನಿಮಾವನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ. ಒಂದಷ್ಟು ಉತ್ತಮ ಕ್ರಿಟಿಕಲ್ ರಿವೀವ್ ಪಡೆದ ‘ಕ್ರಿಟಿಕಲ್ ಕೀರ್ತನೆಗಳು’ ಸದ್ಯ ಅಮೆಜಾನ್ ಪ್ರೈಮ್ ನಲ್ಲಿ ಮನೆಮನೆಗಳಿಗೆ ಬಂದಿದೆ. ಚಿತ್ರವನ್ನ ಇನ್ನು ನೋಡಿರದ ಪ್ರೇಕ್ಷಕರು ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾಗಿದೆ.