ಬಹುಭಾಷಾ ನಟ ಕಮಲ್ ಹಾಸನ್ ಅಪ್ಪು ಮನೆಗೆ ಭೇಟಿ ಕೊಟ್ಟಿದ್ದಾರೆ.. ಪುನೀತ್ ಮನೆಗೆ ಭೇಟಿಕೊಟ್ಟು ಅಶ್ವಿನಿ ಅವರ ಆರೋಗ್ಯ ವಿಚಾರಿಸೋದ್ರ ಜೊತೆಗೆ ಸಾಂತ್ವನ ಹೇಳಿದ್ದಾರೆ ..
ಪುನೀತ್ ನಿಧನರಾಗಿ 2ತಿಂಗಳ ನಂತರ ಬೆಂಗಳೂರಿಗೆ ಭೇಟಿ ಕೊಟ್ಟ ಕಮಲ್ ಹಾಸನ್ , ಬೆಂಗಳೂರಿಗೆ ಬಂದ ತಕ್ಷಣ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ ..ಇದೇ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ..
ಇನ್ನು ಕಮಲ್ ಹಾಸನ್ ಅವ್ರ ಜೊತೆ ನಟ ರಮೇಶ್ ಅರವಿಂದ್ ಕೂಡ ಪುನೀತ್ ಮನೆಗೆ ಬಂದಿದ್ದು ಕೆಲಹೊತ್ತು ಕುಟುಂಬದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಿದ್ದಾರೆ…