Karnataka Bhagya

ಒಟಿಟಿ ಕಡೆಗೆ ಹೆಜ್ಜೆ ಹಾಕಿದ್ದಾರೆ ‘ಮೇಜರ್’

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕಥೆಯನ್ನ ಆಧಾರವಾಗಿಟ್ಟುಕೊಂಡು ಮಾಡಿದಂತಹ ಚಿತ್ರ ‘ಮೇಜರ್’. 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದಾಗ ವೀರಮರಣವನ್ನಪ್ಪಿ ’26/11ರ ಹೀರೋ’ ಎಂದೇ ಭಾರತೀಯರ ಮನದಲ್ಲಿ ಉಳಿದುಕೊಂಡವರು ಸಂದೀಪ್ ಉನ್ನಿಕೃಷ್ಣನ್. ಆ ದಿನದ ಘಟನೆಯನ್ನಷ್ಟೇ ಅಲ್ಲದೇ ಅವರ ಜೀವನದ ಮುಖ್ಯ ಅಂಶಗಳನ್ನೆಲ್ಲ ಸೇರಿಸಿಕೊಂಡು ಮಾಡಿದ ಈ ಸಿನಿಮಾ ಇದೇ ಜೂನ್ 3ರಂದು ಚಿತ್ರಮಂದಿರಗಳ ಮೆಟ್ಟಿಲೇರಿತ್ತು. ಭಾರತದಾದ್ಯಂತ ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲರ ಮನಸಲ್ಲೂ ಒಮ್ಮೆಗೆ ಹೆಮ್ಮೆಯ ಭಾವ ತುಂಬುವಲ್ಲಿ ಯಶಸ್ವಿಯಾಗಿತ್ತು.ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತ ಸಿನಿಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿದ್ದ ಈ ಸಿನಿಮಾ ಇದೀಗ ಒಟಿಟಿ ಕಡೆಗೆ ಹೆಜ್ಜೆ ಹಾಕುತ್ತಿದೆ.

ತೆಲುಗಿನ ಹೆಸರಾಂತ ನಟ ಹಾಗು ಕಥೆಗಾರ ಅದಿವಿ ಸೇಶ್ ಅವರು ನಾಯಕನಟನಾಗಿ ನಟಿಸಿರುವ ಈ ಸಿನಿಮಾದ ಚಿತ್ರಕತೆ ಹೆಣೆಯುವಲ್ಲೂ ಸಹ ಅದಿವಿ ಸೇಶ್ ಅವರೇ ಮುಖ್ಯ ಪಾತ್ರ ವಹಿಸಿದ್ದಾರೆ. ಶಶಿ ಕಿರಣ್ ಟಿಕ್ಕ ಅವರು ನಿರ್ದೇಶಿಸಿರುವ ಈ ಸಿನಿಮಾವನ್ನು ಟೋಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಇದೇ ಜುಲೈ 3ರಿಂದ ನೆಟ್ ಫ್ಲಿಕ್ಸ್(NETFLIX) ನಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿನ ಜೊತೆಯಲ್ಲೇ ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲೂ ಪ್ರದರ್ಶನ ಕಾಣಲಿರೋ ಈ ಚಿತ್ರವನ್ನ ಚಿತ್ರಮಂದಿರಗಳಲ್ಲಿ ನೋಡದಿರುವವರು NETFLIX ನಲ್ಲಿ ನೋಡಬಹುದಾಗಿದೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap