ಸಾಮಾನ್ಯವಾಗಿ ಸಿನಿಮಾ ಸ್ಟಾರ್ ಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ಎಲ್ಲರೂ ಕೇಳುವ ಪ್ರಶ್ನೆ ಮಗು ಯಾವಾಗ ಅನ್ನೋದು.. 2018ರಲ್ಲಿ ನಿಕ್ ಜೋನಾಸ್ ಜೊತೆ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಸದ್ಯ ನಿಕ್ ಜೊತೆ ಸುಂದರವಾದ ದಾಂಪತ್ಯ ಜೀವನವನ್ನು ಕಟ್ಟಿಕೊಂಡಿದ್ದಾರೆ.. ದೀಪಾವಳಿ ಹಬ್ಬದಂದು ಹೊಸ ಮನೆ ಗೃಹ ಪ್ರವೇಶ ಮಾಡಿರುವ ಈ ಜೋಡಿ ಈಗ ಮಗುವಿನ ನಿರೀಕ್ಷೆಯ ಕನಸನ್ನ ಕಟ್ಟಿಕೊಳ್ಳುತ್ತಿದೆ ..
ಹೌದು ಇತ್ತೀಚಿಗಷ್ಟೆ ಪ್ರಿಯಾಂಕ ಚೋಪ್ರಾ ಅವರನ್ನು ಸುದ್ದಿಗೋಷ್ಠಿಯೊಂದರಲ್ಲಿ ಮಾಧ್ಯಮದವರು ನಿಮ್ಮ ತಾಯಿ ಅಜ್ಜಿ ಆಗಲು ಬಯಸುತ್ತಿದ್ದಾರೆ… ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು.. ಅದಕ್ಕೆ ನೇರವಾಗಿ ಉತ್ತರಿಸದ ಪ್ರಿಯಾಂಕಾ ಚೋಪ್ರಾ ಮಗು ಪಡೆಯುವುದು ನನ್ನ ಹಾಗೂ ನಿಕ್ ಅವರ ಜೀವನದ ದೊಡ್ಡ ಕನಸು ಎಂದಿದ್ದಾರೆ… ಈ ಮೂಲಕ ತಾವು ತಾಯಿಯಾಗಲು ಬಯಸುತ್ತಿದ್ದಾರೆ ಎನ್ನುವುದನ್ನ ಪ್ರಿಯಾಂಕ ನೇರವಾಗಿ ಹೇಳಿದ್ದಾರೆ ..
ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ದೇವರ ಇಚ್ಛೆಯಿಂದ ಯಾವಾಗ ನಾನು ತಾಯಿಯಾಗುತ್ತೇನೋ ಆಗ ನಾನು ಸಿನಿಮಾರಂಗದಿಂದ ನಿಧಾನವಾಗಿ ನಿವೃತ್ತಿ ಹೊಂದುತ್ತೇನೆ ಎಂದು ಕೂಡ ಅನೌನ್ಸ್ ಮಾಡಿದ್ದಾರೆ.. ಒಟ್ಟಾರೆ ಪ್ರಿಯಾಂಕಾ ಹಾಗೂ ನಿಕ್ ಮಗುವಿನ ನಿರೀಕ್ಷೆಯ ತವಕ ಹೆಚ್ಚಾಗಿದೆ…