ಕರುನಾಡ ಕ್ರಶ್, ನ್ಯಾಷನಲ್ ಕ್ರಶ್, ರಶ್ಮಿಕಾ ಮಂದಣ್ಣ ಈಗ ಕೇವಲ ಕನ್ನಡದ ನಟಿಯಾಗಿ ಉಳಿದಿಲ್ಲ…ತಮಿಳು,ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸ್ಟಾರ್ ಗಳ ಜತೆ ತೆರೆಹಂಚಿಕೊಂಡಿದ್ದಾರೆ..
ಸದ್ಯ ಕೇರಳದಲ್ಲಿಯೂ ರಶ್ಮಿಕಾ ಮಂದಣ್ಣ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದು…ರಶ್ಮಿಕಾ ಹೆಸರಲ್ಲಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಅಸೋಸಿಯೇಷನ್ ಮತ್ತು ವೆಲ್ಫೇರ್ ಸಂಘಟನೆ ಆರಂಭವಾಗಿದೆ…
ರಶ್ಮಿಕಾ ಚಿತ್ರರಂಗದಲ್ಲಿ 5ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಫ್ಯಾನ್ಸ್ ಅಸೋಸಿಯೇಷನ್ ನಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.. ಆಹಾರ ವಿತರಣೆ, ಮಾಸ್ಕ್ ವಿತರಣೆ, ಗಿಡ ನೆಡುವ ಕಾರ್ಯಕ್ರಮ ಹೀಗೆ ಸಮಸ್ತ ಸಮಾಜಕ್ಕೆ ಒಳಿತು ಮಾಡುವಂಥ ಕೆಲಸವನ್ನು ರಶ್ಮಿಕಾ ಅಭಿಮಾನಿಗಳು ಮಾಡುತ್ತಿದ್ದಾರೆ ಈ ವಿಚಾರವನ್ನ ತಿಳಿದ ರಶ್ಮಿಕಾ ಭಾವುಕರಾಗಿದ್ದಾರೆ…ಈ ವಿಚಾರವನ್ನ ಖುದ್ದಾಗಿ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ…