Karnataka Bhagya
ಕರ್ನಾಟಕ

ಡಾ. ಭೀಮಣ್ಣ ಮೇಟಿಗೆ ಎಂಎಲ್‌ಸಿ ಮಾಡಲು ಮನವಿ

ಡಾ. ಭೀಮಣ್ಣ ಮೇಟಿಗೆ ಎಂಎಲ್ಸಿ ಮಾಡಲು ಅಹಿಂದ ಸಂಘಟನೆಯಿAದ ಮುಖ್ಯಮಂತ್ರಿಗಳಿಗೆ ಮನವಿ

ಡಾ. ಭೀಮಣ್ಣ ಮೇಟಿಗೆ ಎಂಎಲ್‌ಸಿ ಮಾಡಲು ಮನವಿ

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ : ಡಾ. ಭೀಮಣ್ಣ ಮೇಟಿ ಅವರಿಗೆ ಎಂಎಲ್‌ಸಿ ಮಾಡಬೇಕು ಎಂದು ಅಹಿಂದ ಸಂಘಟನೆಯಿAದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಅಹಿಂದ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡಿನಿ ತಿಳಿಸಿದ್ದಾರೆ.

ಈ ಕುರಿತಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕಸಭಾ ಚುನಾವಣೆಯಲ್ಲಿ ೧೩ ನಾಯಕರಿಗೆ ಅಹಿಂದ ಸಂಘಟನೆ ವತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು, ಆರು ನಾಯಕರಿಗೆ ಕಾಂಗ್ರೆಸ್‌ನಿAದ ಎಂಪಿ ಟಿಕೆಟ್ ಕೊಡಲಾಗಿತ್ತು ಹಾಗಾಗಿ ಅದೇ ರೀತಿ ಡಾ. ಭೀಮಣ್ಣ ಮೇಟಿ  ಅವರು ಅಹಿಂದ ಸಂಘಟನೆ  ರಾಜ್ಯ ಉಪಾಧ್ಯಕ್ಷರಾಗಿರುವುದರಿಂದ ಲೋಕಸಭಾ ಚುನಾವಣೆ ೨೦೨೪ರಲ್ಲಿ ಕರ್ನಾಟಕ ರಾಜ್ಯದ ೩೧ ಜಿಲ್ಲೆಯಲ್ಲಿ ೨೭ ಜಿಲ್ಲೆಯಲ್ಲಿ ನಮ್ಮ ಅಹಿಂದ ಜಿಲ್ಲಾಧ್ಯಕ್ಷರು ಮತ್ತು ಅಹಿಂದ ತಾಲೂಕ ಅಧ್ಯಕ್ಷರು ಹಾಗೂ ಸಂಘಟನೆ ಪದಾಧಿಕಾರಿಗಳು ಸೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಟ್ಟು ಅಹಿಂದ ಸಂಘಟನೆ ಜೊತೆಗೆ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲೂ ಕೆಲಸ ಮಾಡಿದ್ದರಿಂದ ಡಾ.ಭೀಮಣ್ಣ ಮೇಟಿ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ಅಹಿಂದ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಬಂಧುಗಳು ಸ್ವಂತ ಹಣದಿಂದ ವಾಹನಗಳು, ಪಾದಯಾತ್ರೆ  ಪ್ರತಿಯೊಂದು ಹಳ್ಳಿಯಲ್ಲಿ ಹಾಗೂ ಪ್ರತಿಯೊಂದು ಮನೆ ಮನೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ ಹಾಕಿ ಅಂತ ಪ್ರಚಾರ  ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಅಹಿಂದ ವರ್ಗದ ಬಹುಪಾಲು ಜನರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಮನವಿಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಹಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀರಲಿಂಗ ಪೂಜಾರಿ ಸೇರಿದಂತೆ ಅಹಿಂದ ನಾಯಕರು ಇದ್ದರು.

ಡಾ. ಭೀಮಣ್ಣ ಮೇಟಿಗೆ ಎಂಎಲ್ಸಿ ಮಾಡಲು ಅಹಿಂದ ಸಂಘಟನೆಯಿAದ ಮುಖ್ಯಮಂತ್ರಿಗಳಿಗೆ ಮನವಿ

Related posts

ಸ್ಯಾಂಡಲ್ ವುಡ್ ನಲ್ಲಿ , ನಾಯಿ ಇದೆ ಎಚ್ಚರಿಕೆ !! ಅಬ್ಬರ

Nikita Agrawal

ಹೊಸ ಹೊಸ ಮೈಲಿಗಲ್ಲುಗಳನ್ನ ಏರುತ್ತಿದೆ ‘777 ಚಾರ್ಲಿ’

Nikita Agrawal

ಕನ್ನಡಗರಿಗೆ ಧನ್ಯವಾದ ಹೇಳಿದ ಕಮಲ್ ಹಾಸನ್… ಯಾಕೆ ಗೊತ್ತಾ?

Nikita Agrawal

Leave a Comment

Share via
Copy link
Powered by Social Snap