21.9 C
Bengaluru
October 19, 2026
Karnataka Bhagya
ಇತರೆ

ದೇವಿ ದರ್ಶನ, ಚರಿತ್ರೆ ಪಠಣದಿಂದ ನೆಮ್ಮದಿ ಪ್ರಾಪ್ತಿ: ಶಾಸಕ ಚನ್ನಾರೆಡ್ಡಿ ಪಾಟೀಲ್

ಕರ್ನಾಟಕ ಭಾಗ್ಯ ವಾರ್ತೆ

ಯಾದಗಿರಿ: ದೇವಿ ದರ್ಶನ, ಜೀವನ ಚರಿತ್ರೆ ಪಠಣದಿಂದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ದಸರಾ ಹಬ್ಬದ ನವರಾತ್ರಿ ನಿಮಿತ್ಯ ಇಲ್ಲಿನ ಚೆಟಾಣ ಏರಿಯಾದ ಬೆಟ್ಟದ ಮೇಲಿನ ಶ್ರೀ ಮಾತಾ ಭುವನೇಶ್ವರಿ ದೇವಸ್ಥಾನಕ್ಕೆ ಭಾನುವಾರ ಬೆಳಗ್ಗೆ ಪಾದಯಾತ್ರೆ ಮೂಲಕ ತೆರಳಿ ಅಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಜಗದ ಒಡತಿ
ಜಗನ್ಮಾಥೆಯು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ‌ ಮೂಲಕ ಅಂದು ರಾಕ್ಷಸರ ಸಂಹಾರ ಮಾಡುವ ಮೂಲಕ ನರಮಾನವರನ್ನು ಬದುಕಿದರೆಂದು ದುಷ್ಟಾಂತ ವಿವರಿಸಿದರು.
ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಉಪವಾಸವಿದ್ದು ದೇವಿಯನ್ನು ಆರಾಧಿಸುವ ಮೂಲಕ ಅನೇಕರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆಂದರು.

ಈ ವೇಳೆ ದೇವಸ್ಥಾನದ ಅರ್ಚಕರು, ಮುಖಂಡರಾದ ಹೇಮಂತರೆಡ್ಡಿ ಕೌಳೂರು, ಸಾಬಣ್ಣ ಕೆಂಗೂರಿ, ತಾಯಪ್ಪ ಯಾದವ್, ರಾಜು ಬೆಲಿಬೆಂಚ್ , ರವಿ ಮಾಲಿಪಾಟೀಲ್, ಮಲ್ಲಿಕಾರ್ಜುನ‌ ಈಟೆ, ಶರಣಗೌಡ ಬಲಕಲ್, ಸವಿತಾ ಮಾಲಿಪಾಟೀಲ್, ಚನ್ನಕೇಶವ ಬಾಣತಿಹಾಳ, ಶಿವು ಬಳಕಾನೂರ, ಮಲ್ಲಿಕಾರ್ಜುನ, ಭೀಮಣ್ಣಗೌಡ, ವಿಶ್ವನಾಥ ನಾಯಕ, ಕೃಷ್ಣಾ ದಾಸನಕೇರಿ, ಅಭಿಷೇಕ ಇದ್ದರು.

Related posts

ಟ್ವಿಟರ್ ವಿರುದ್ಧ ಮುನಿಸಿಕೊಂಡ ಅಪ್ಪು ಅಭಿಮಾನಿಗಳು.

Nikita Agrawal

ಕೊನೆಗೂ ಒಟಿಟಿ ಕಡೆಗೆ ಹೆಜ್ಜೆ ಹಾಕಿದ ‘ಸಲಗ’.

Nikita Agrawal

ಪ್ರಥಮ ಬಾರಿಗೆ ಮತದಾನ

Mahesh Kalal

Leave a Comment

Share via
Copy link
Powered by Social Snap