21.9 C
Bengaluru
October 29, 2026
Karnataka Bhagya
ಕರ್ನಾಟಕ

ನ.30 ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಕರವೇ ಆಗ್ರಹ

ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ

ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ : ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಜಾರಿಯಲ್ಲಿರುವ ವಾರಬಂಧಿ ಪದ್ಧತಿಯನ್ನು ರದ್ದುಪಡಿಸಿ, ನವೆಂಬರ್ ೩೦ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಭೀಮುನಾಯಕ, ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆಗಳಿಗಾಗಿ ಕಾಲುವೆ ನೀರನ್ನೇ ಪ್ರಮುಖವಾಗಿ ಅವಲಂಬಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ವಾರಬಂಧಿ ಪದ್ಧತಿಯಿಂದ ರೈತರಿಗೆ ಸಮರ್ಪಕವಾಗಿ ನೀರು ದೊರೆಯದೆ ಬೆಳೆಗಳ ಬೆಳವಣಿಗೆಗೆ ತೊಂದರೆಯಾಗುವ ಆತಂಕ ಎದುರಾಗಿದೆ.
ಈ ಭಾಗದ ರೈತರು ಈಗಾಗಲೇ ಹಲವು ಕೃಷಿ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಲುವೆಗಳಿಗೆ ವಾರಬಂಧಿ ಪದ್ಧತಿಯನ್ನು ಮುಂದುವರಿಸುವುದರಿAದ ಬೆಳೆಗಳಿಗೆ ಅಗತ್ಯವಾದ ಸಮಯದಲ್ಲಿ ನೀರು ಸಿಗದೆ ರೈತರು ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಂಡು, ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಜಾರಿಯಲ್ಲಿರುವ ವಾರಬಂಧಿ ಪದ್ಧತಿಯ ನವೆಂಬರ್ ೩೦ರವರೆಗೆ ನಿರಂತರವಾಗಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಒತ್ತಾಯಿಸುತ್ತೇವೆ. ಪದ್ಧತಿಯನ್ನು ರದ್ದುಪಡಿಸಿ, ೨೦೨೬ರ ನಮ್ಮ ಭಾಗದ ರೈತರಿಗೆ ನೀರು ನೀಡಿದೇ ರಾತ್ರೋತ್ರಿ ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ನೀರು ಬಿಡುವುದು ಯಾವ ನ್ಯಾಯ?, ರೈತರ ಬೆಳೆಗಳನ್ನು ಉಳಿಸಿ. ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿ, ಅನ್ನದಾತರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡಲೇ ಸಭೆ ನಡೆಸಿ ರೈತರಿಗೆ ಅನುಕೂಲವಾಗುವಂತೆ, ಸೂಕ್ತ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಪ್ರದೇಶವಾಗಿ ಘೋಷಣೆ ಮಾಡಿದ್ದು, ಹಾಗೂ ಮುಂಗಾರ ಮಳೆ ಕೈಕೊಟ್ಟಿದು, ಜಿಲ್ಲೆಯ ರೈತರು ಸಾಲದ ಭಾರವನ್ನು ಹೊತ್ತಿದ್ದಾರೆ. ಈಗಿರುವಾಗ ವಾರಬಂಧಿ ಪದ್ಧತಿಯನ್ನು ಜಾರಿಮಾಡಿ ರೈತರನ್ನು ಇನ್ನೂಷ್ಟು ಸಾಲದ ಭಾರಕ್ಕೆ ನೂಕಬೇಕಾಗುತ್ತದೆ. ಜಾರಿಯಲ್ಲಿರುವ ವಾರಬಂಧಿ ಪದ್ಧತಿಯನ್ನು ರದ್ದುಗೊಳಿಸಿ ಕಟಾವಿಗೆ ಬಂದ ಬೆಳೆಗಳಾದ ಭತ್ತ, ಮೆಣಸಿನಕಾಯಿ, ಹತ್ತಿ, ಹಾಗೂ ಇನ್ನಿತರ ಬೆಳೆಗಳಿಗೆ ಸಮರ್ಪಕವಾದ ನೀರು ಒದಗಿಸುವ ಕಾರ್ಯದ ಜೊತೆ ಬರಪೀಡಿತಕ್ಕೆ ಪರಿಹಾರವನ್ನು ಸರ್ಕಾರ ಶೀಘ್ರವೇ ನೀಡಬೇಕು. ರೈತರ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವರಾಜ ಹೊನಗೇರಾ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರ, ಬಸವರಾಜ ಚೆನ್ನೂರ, ಅಂಬ್ರೀಶ ಕಟ್ಟಿಮನಿ, ಮೌನೇಶ ಮಾಧ್ವಾರ, ಸಿದ್ದಪ್ಪ ಕೂಯಿಲೂರು, ಅಶೋಕ ನಾಯಕ, ಸುರೇಶ ಬೆಳಗುಂದಿ, ನಾಗರಾಜ ಶೇಟಗೇರಾ, ಹಣಮಗೌಡ ಶಖಾಪೂರ, ಮೋನೇಶ ಚಿಂಚೋಳಿ, ಹುಸ್ಮಾನ್ ಪಟೇಲ್, ಸುರೇಶ ಬಾಡದ, ಶಿವರಾಜ ನಾಡಗೌಡ, ಲಕ್ಷö್ಮಣ ಕೂಡ್ಲೂರು, ಸಾಬು ನೀಲಹಳ್ಳಿ, ನಾಗರಡ್ಡಿ ಕೂಡ್ಲೂರು ಇತರರಿದ್ದರು.

Related posts

‘ಹೊಂಬಾಳೆ’ಯ ಬಹುನಿರೀಕ್ಷಿತ ಮುಂದಿನ ಸಿನಿಮಾಗಳು..

Nikita Agrawal

ಹೊಸ ಚಿತ್ರದೊಂದಿಗೆ ಒಟಿಟಿಗೆ ಬರಲಿದ್ದಾರೆ ಸತೀಶ್ ನೀನಾಸಂ.

Nikita Agrawal

ಕಿರುತೆರೆಯಿಂದ ಹಿರಿತೆರೆಗೆ ಎಡವಟ್ ರಾಣಿ ಪಯಣ

Nikita Agrawal

Leave a Comment

Share via
Copy link
Powered by Social Snap